Shiva Rajkumar: ಶಿವರಾಜ್ ಕುಮಾರ್ ಯಾಕೆ ‘ಭಕ್ತ ಕುಂಬಾರ’ ಚಿತ್ರ ಮಾಡ್ಲಿಲ್ಲ? ಸೀಕ್ರೆಟ್ ರಿವೀಲ್! | | ACTPnews

ಶಿವರಾಜ್ ಕುಮಾರ್ ಯಾಕೆ 'ಭಕ್ತ ಕುಂಬಾರ' ಚಿತ್ರ ಮಾಡ್ಲಿಲ್ಲ?


Last Updated:

ಭಕ್ತ ಕುಂಬಾರ ಚಿತ್ರ ಅದ್ಭುತ ಚಿತ್ರವೇ ಆಗಿದೆ. ಈ ಸಿನಿಮಾ ಬಂದು 52 ವರ್ಷ ಕಳೆದಿವೆ. ಶಿವರಾಜ್ ಕುಮಾರ್ ಅವರು ಈ ಚಿತ್ರವನ್ನ ಮತ್ತೆ ಮಾಡೋಕೆ ಯೋಚನೆ ಮಾಡಿದ್ದರು ಅನ್ನೋದು ಇದೆ. ಆದರೆ, ಯಾಕೆ ಆಗ್ಲಿಲ್ಲ ಅನ್ನೋದು ಇಲ್ಲಿದೆ ಓದಿ.

ಶಿವರಾಜ್ ಕುಮಾರ್ ಯಾಕೆ 'ಭಕ್ತ ಕುಂಬಾರ' ಚಿತ್ರ ಮಾಡ್ಲಿಲ್ಲ?
ಶಿವರಾಜ್ ಕುಮಾರ್ ಯಾಕೆ ‘ಭಕ್ತ ಕುಂಬಾರ’ ಚಿತ್ರ ಮಾಡ್ಲಿಲ್ಲ?

ರಾಜಕುಮಾರ್ (Rajkumar) ಅವರ ಚಿತ್ರಗಳನ್ನ ರೀಮೇಕ್ (Remake) ಮಾಡೋ ಸಾಹಸ ಯಾರೂ ಮಾಡೋದಿಲ್ಲ. ಅಭಿನಯಿಸಿರೋ ಅಷ್ಟು ಚಿತ್ರಗಳೂ ಕ್ಲಾಸಿಕ್ ಚಿತ್ರಗಳೇ ಆಗಿವೆ. ಗಂಧದಗುಡಿ-2 ಚಿತ್ರದಲ್ಲಿ ಅಣ್ಣಾವ್ರು ಕೂಡ ಅಭಿನಯಿಸಿದ್ದರು. ಆದರೆ, ಈ ಸಿನಿಮಾ ಅಣ್ಣಾವ್ರ ಸಿನಿಮಾ (Annavra Cinema) ತರವೇ ರೀಚ್ ಆಗ್ಲಿಲ್ಲ ಅನ್ನುವ ಮಾತು ಇದೆ.  ರಾಜಕುಮಾರ್ ಅವರ ಕ್ಲಾಸಿಕ್ ಭಕ್ತ ಕುಂಬಾರ ಚಿತ್ರವನ್ನ ಮತ್ತೆ ಮಾಡ್ಬೇಕು ಅಂತಲೂ ಪ್ಲಾನ್ ಇತ್ತು. ಶಿವರಾಜ್ ಕುಮಾರ್ (Shiva Rajkumar) ಅವರೇ ಈ ಚಿತ್ರವನ್ನ ಮಾಡ್ತಾರೆ ಅಂತಲೂ ಇತ್ತು. ಆದರೆ, ಮುಂದೆ ಏನೆಲ್ಲ ಆಯಿತು ಅನ್ನೋದು ಇಲ್ಲಿದೆ ಓದಿ.

52 ವರ್ಷ ಆಯಿತು

ಭಕ್ತ ಕುಂಬಾರ ಬಂದು 52 ವರ್ಷ ಆಗಿದೆ. ಇಷ್ಟು ವರ್ಷ ಆದ್ಮೇಲೂ ಈ ಚಿತ್ರದ ಬಗ್ಗೆ ಮಾತುಕತೆ ಇದೆ. ಅಣ್ಣಾವ್ರ ಅಭಿನಯವನ್ನ ಇಂದಿಗೂ ಜನ ನೆನಪು ಮಾಡಿಕೊಳ್ಳುತ್ತಾರೆ.

why shiva rajkumar did not do bhakta kumbara movie

52 ವರ್ಷ ಆಯಿತು
ಆ ರೀತಿಯ ಈ ಚಿತ್ರ 1974 ರಲ್ಲಿ ರಿಲೀಸ್ ಆಗಿತ್ತು. ಹಾಗೆ ಈ ಚಿತ್ರವನ್ನ ಮತ್ತೆ ಮಾಡ್ಬೇಕು ಅನ್ನುವ ಯೋಚನೆ ಕೂಡ ಇತ್ತು. ಶಿವರಾಜ್ ಕುಮಾರ್ ಈ ಒಂದು ಪಾತ್ರವನ್ನ ಮಾಡ್ತಾರೆ ಅನ್ನೋದು ಇತ್ತು.
ಯಾಕ್ ಮಾಡ್ಲಿಲ್ಲ

ಭಕ್ತ ಕುಂಬಾರ ಚಿತ್ರ ಆಗುತ್ತಿದೆ. ಭಕ್ತ ಕುಂಬಾರ ಪಾತ್ರವನ್ನ ಶಿವರಾಜ್ ಕುಮಾರ್ ಮಾಡ್ತಾರೆ. ಹೀಗೆ ಸುದ್ದಿ ಗೊತ್ತಾಗಿದ್ದೇ ತಡ, ಸಿನಿಮಾ ಪತ್ರಕರ್ತರು ಈ ಬಗ್ಗೆ ಯೋಚನೆ ಮಾಡಿದರು.

ಕನ್ನಡದ ಅದ್ಭುತ ಮತ್ತು ಕ್ಲಾಸಿಕ್ ಚಿತ್ರ ಇದಾಗಿದೆ. ಭಕ್ತ ಕುಂಬಾರ ಪಾತ್ರವನ್ನ ರಾಜಕುಮಾರ್ ಬಿಟ್ರೆ ಮತ್ತೆ ಯಾರಿಗೂ ಮಾಡೋಕೆ ಆಗೋದೇ ಇಲ್ಲ. ಆ ರೀತಿಯ ಪಾತ್ರ ಇದಾಗಿದೆ. ಆದರೆ, ಈ ಚಿತ್ರವನ್ನ ಮತ್ತೆ ಮಾಡಿದರೆ ಮುಗಿತು ಅಂತಲೇ ಯೋಚನೆ ಮಾಡಿದರು.

ಮುಂದೇನಾಯಿತು

ಕನ್ನಡ ಸಿನಿಮಾ ಪತ್ರಕರ್ತರು ಒಂದು ಕೆಲಸ ಮಾಡಿದರು. ಅದರಲ್ಲಿ ಹಿರಿಯ ಪತ್ರಕರ್ತರಾದ ಸುಬ್ಬಣ್ಣ, ಬಿ. ಗಣಪತಿ, ಪ್ರೇಮ್‌ನಾಥ್ ಅವರು ನೇರವಾಗಿ ಪಾರ್ವತಮ್ಮನವರನ್ನ ಭೇಟಿ ಆದರು ನೋಡಿ.

why shiva rajkumar did not do bhakta kumbara movie

ಯಾಕ್ ಮಾಡ್ಲಿಲ್ಲ

ಭೇಟಿ ಆಗಿ ಈ ಚಿತ್ರಕ್ಕೆ ಒಂದು ತೂಕ ಇದೆ. ರಾಜಕುಮಾರ್ ಅವರ ಅಭಿನಯ ಎತ್ತರದಲ್ಲಿದೆ. ಈ ಒಂದು ಪಾತ್ರವನ್ನ ಯಾರೂ ಮಾಡೋಕೆ ಆಗೋದಿಲ್ಲ.

ಶಿವಣ್ಣ ಅಷ್ಟೆ ಅಲ್ಲ, ಯಾರೂ ಮಾಡೋಕೆ ಆಗೋದಿಲ್ಲ. ಹಾಗಾಗಿಯೇ ಈ ಚಿತ್ರ ಮತ್ತೆ ಮಾಡ್ಬೇಡಿ ಅಂತಲೇ ಹೇಳಿದರು. ಈ ಕಾರಣಕ್ಕೇನೆ ಭಕ್ತ ಕುಂಬಾರ ಚಿತ್ರವನ್ನ ಶಿವಣ್ಣ ಮಾಡ್ಲಿಲ್ಲ ಅನ್ನುವ ಮಾತು ಇದೆ.

ಲೀಲಮ್ಮ ನಿನ್ನ ಗಂಡ ಯಾರಮ್ಮ

ಲೀಲಮ್ಮ ನಿನ್ನ ಗಂಡ ಯಾರಮ್ಮ ಅನ್ನುವ ಪುಸ್ತಕ ಬಿಡುಗಡೆ ಆಗಿದೆ. ಎನ್.ಆರ್.ರಮೇಶ್ ಅವರು ಈ ಪುಸ್ತಕ ಬರೆದಿದ್ದಾರೆ. ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿಯೇ ಹಿರಿಯ ಪತ್ರಕರ್ತ ಬಿ.ಗಣಪತಿ ಅವರು ಭಕ್ತ ಕುಂಬಾರ ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ರಾಜಕುಮಾರ್ ಅದೆಷ್ಟು ಶ್ರೇಷ್ಠ ಕಲಾವಿದರು ಅನ್ನುವುದನ್ನ ಹೇಳಿಕೊಂಡಿದ್ದಾರೆ. ಭಕ್ತಕುಂಬಾರ ಚಿತ್ರ ಅದೆಂತಹ ಅದ್ಭುತ ಮತ್ತು ಕ್ಲಾಸಿಕ್ ಚಿತ್ರ ಅಂತಲೂ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports