Sharmiela Mandre: ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಾಳಿಪಟ ಚೆಲುವೆ, ಶರ್ಮಿಳಾ ಕಲ್ಯಾಣ | Sharmiela Mandre gets married with producer sudhan sundaram | | ACTPnews

ಶರ್ಮಿಳಾ ಮಾಂಡ್ರೆ


Last Updated:

Sharmiela Mandre: ಶರ್ಮಿಳಾ ಮಾಂಡ್ರೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ನಿರ್ಮಾಪಕ ಸುಧನ್ ಸುಂದರಂ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶರ್ಮಿಳಾ ಮಾಂಡ್ರೆ
ಶರ್ಮಿಳಾ ಮಾಂಡ್ರೆ

ಖ್ಯಾತ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಸುಧನ್ ಸುಂದರಂ (Sudhan Sundaram) ಜೊತೆ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ನಟಿ ಧನ್ಯಾ ರಾಮ್ (Dhanya Ram) ಅವರು ಮದುವೆಯ ಫೋಟೋ ಶೇರ್ ಮಾಡಿದ್ದಾರೆ.

ಶರ್ಮಿಳಾ ಮಾಂಡ್ರೆ ಮತ್ತು ಸುಧನ್ ಸುಂದರಂ ಇತ್ತೀಚಿಗೆ ಎಂಗೇಜ್ ಆಗಿದ್ದಾರೆ. ಜೂನ್-25 ರಂದು ಇವರ ನಿಶ್ಚಿತಾರ್ಥ ಆಗಿದೆ. ಇದೀಗ ಅವರು ಮದುವೆಯಾಗಿದ್ದಾರೆ. ನಟಿ ರಮ್ಯಾ ಅವರು ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಫೋಟೋ ಶೇರ್ ಮಾಡಿದ್ದರು.

ತಮಿಳಿನ ಖ್ಯಾತ ಪ್ರೊಡ್ಯೂಸರ್ ಅವರನ್ನು ನಟಿ ಮದುವೆಯಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ನಿರ್ಮಾಪಕರಾಗಿರುವ ಸುಧನ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಮದುವೆ ಫೋಟೋಸ್ ಇನ್ನೂ ಶೇರ್ ಮಾಡಿಲ್ಲ.

ಮಹಾರಾಜಾ ಸಿನಿಮಾದ ಪ್ರೊಡ್ಯೂಸರ್ ಸುಧನ್ ಅವರು ಕೈಹಿಡಿಯಲಿರುವ ಶರ್ಮಿಳಾ ಮಾಂಡ್ರೆ ಮದುವೆ ಫೋಟೋಸ್ ಇನ್ನಷ್ಟೇ ಹೊರಬೀಳಬೇಕಾಗಿದೆ. ಸುಧನ್ ಸುಂದರಂ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ಇವರು ‘ಪ್ಯಾಷನ್ ಸ್ಟುಡಿಯೋಸ್’ ಎಂಬ ನಿರ್ಮಾಣ ಸಂಸ್ಥೆಯ ಸಂಸ್ಥಾಪಕರಾಗಿದ್ದು ವಿಜಯ್ ಸೇತುಪತಿ, ಅನುರಾಗ್ ಕಷ್ಯಪ್ ಅಭಿನಯಿಸಿದ ಮಾಹಾರಾಜಾದಂತಹ ಸಿನಿಮಾ ನಿರ್ಮಿಸಿದ್ದಾರೆ. ಮದುವೆ ನಂತರ ಶರ್ಮಿಳಾ ಮಾಂಡ್ರೆಯವರೂ ನಿರ್ಮಾಣದಲ್ಲಿ ತೊಡಗಿಸಿಕೊಳ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed