Shah Rukh Khan: ಮಂಗಳೂರಿಗೆ ಬರ್ತಿದ್ದಾರೆ ಶಾರುಖ್ ಖಾನ್, ಬಾಲ್ಯದ ಅಜ್ಜಿಯ ನೆನಪುಗಳೊಂದಿಗೆ ಕರಾವಳಿಗೆ ಆಗಮನ! | ಮಂಗಳೂರು ನ್ಯೂಸ್ (Mangaluru News) | ACTPnews

ಶಾರುಖ್ ಖಾನ್ ಮಂಗಳೂರು ಭೇಟಿ


Last Updated:

ಶಾರುಖ್ ಖಾನ್ ಜೂನ್ 25ರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ರೋಹನ್ ಕಾರ್ಪೊರೇಶನ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ, ಭಾರೀ ಭದ್ರತೆ, ಅಭಿಮಾನಿಗಳ ದೊಡ್ಡ ನಿರೀಕ್ಷೆ.

ಶಾರುಖ್ ಖಾನ್ ಮಂಗಳೂರು ಭೇಟಿ
ಶಾರುಖ್ ಖಾನ್ ಮಂಗಳೂರು ಭೇಟಿ

ಮಂಗಳೂರು: ಬಾಲಿವುಡ್‍ನ (Bollywood) ಬಾದ್ ಶಾ, ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಜೂನ್ 25ರಂದು ಮಂಗಳೂರಿಗೆ (Mangaluru) ಬರುತ್ತಿದ್ದಾರೆ. ಕರಾವಳಿಯ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್ ಆಯೋಜಿಸಿರುವ ‘ಆನ್ ಈವಿನಿಂಗ್ ವಿತ್ ಶಾರುಖ್ ಖಾನ್’ ಕಾರ್ಯಕ್ರಮದ ಮೂಲಕ ಶಾರುಖ್ ತಮ್ಮ ಅಭಿಮಾನಿಗಳನ್ನು (Fans) ಭೇಟಿಯಾಗಲಿದ್ದಾರೆ. ಮಂಗಳೂರಿನ ಅಡ್ಯಾರ್ ಗಾರ್ಡನ್‍ನಲ್ಲಿ ನಡೆಯಲಿರುವ ಈ ಭವ್ಯ ಕಾರ್ಯಕ್ರಮಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ.

ನಾನು ಮಂಗಳೂರಿನ ಮಗ

ಶಾರುಖ್ ಖಾನ್‍ಗೆ ಮಂಗಳೂರು ಕೇವಲ ಒಂದು ನಗರವಲ್ಲ, ಅದೊಂದು ಭಾವನಾತ್ಮಕ ನಂಟು. ಈ ಹಿಂದೆ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದ ಶಾರುಖ್, ತಾನು ಬೆಳೆದಿದ್ದು ಮಂಗಳೂರಿನಲ್ಲೇ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಶಾರುಖ್ ಅವರ ಅಜ್ಜ 1960ರ ದಶಕದಲ್ಲಿ ಮಂಗಳೂರು ಬಂದರಿನಲ್ಲಿ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆ ಸಮಯದಲ್ಲಿ ಶಾರುಖ್ ಅವರ ಬಾಲ್ಯದ ಐದು ವರ್ಷಗಳು ಅಜ್ಜಿಯ ಆರೈಕೆಯಲ್ಲಿ ಮಂಗಳೂರಿನಲ್ಲೇ ಕಳೆದಿದ್ದವು. “ನಾನು ಮಂಗಳೂರಿನ ಮಗ” ಎಂದು ಶಾರುಖ್ ಸಾರ್ವಜನಿಕ ವೇದಿಕೆಯಲ್ಲಿ ಹೇಳಿರುವುದು ಕರಾವಳಿ ಜನರ ಪಾಲಿಗೆ ಹೆಮ್ಮೆಯ ವಿಷಯವಾಗಿದೆ.
ಕಾರ್ಯಕ್ರಮದ ಹೈಲೈಟ್ಸ್

ರೋಹನ್ ಕಾರ್ಪೊರೇಶನ್‍ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶಾರುಖ್ ಖಾನ್, ಕಂಪನಿಯ ಆಹ್ವಾನದ ಮೇರೆಗೆ ಆಗಮಿಸುತ್ತಿದ್ದಾರೆ. ಅಡ್ಯಾರ್ ಗಾರ್ಡನ್‍ನಲ್ಲಿ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಸಂಜೆ 4 ಗಂಟೆಯಿಂದ ಪ್ರವೇಶ ಆರಂಭವಾಗಲಿದೆ. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು ಮತ್ತು ಆಹ್ವಾನಿತರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅವಕಾಶವಿದ್ದರೂ, ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಶಾರುಖ್ ಅವರನ್ನು ನೋಡಲು ಬರುವ ನಿರೀಕ್ಷೆಯಿದೆ.
ಭದ್ರತೆ ಮತ್ತು ಅಭಿಮಾನಿಗಳ ಆವೇಶ

ಬಾದ್ ಶಾ ಆಗಮನದ ಹಿನ್ನೆಲೆಯಲ್ಲಿ ಅಡ್ಯಾರ್ ಗಾರ್ಡನ್ ಸುತ್ತಮುತ್ತ ಭಾರೀ ಭದ್ರತೆ ಮತ್ತು ಸಂಚಾರ ದಟ್ಟಣೆಯಾಗುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾರುಖ್ ಅವರ ಮಂಗಳೂರು ಭೇಟಿಯ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಒಟ್ಟಿನಲ್ಲಿ, ಗುರುವಾರ ಮಂಗಳೂರಿನ ವಾತಾವರಣ ಸಂಪೂರ್ಣವಾಗಿ ‘ಶಾರುಖ್ ಮಯ’ವಾಗುವುದರಲ್ಲಿ ಸಂಶಯವಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed