Sathish Ninasam: ಅಯೋಗ್ಯ ಸಿನಿಮಾ ಹೀರೋ ಜೊತೆ ಮಾತುಕತೆ! ವರ್ಷಕ್ಕೆ ಎರಡು ಸಿನಿಮಾ ಪಕ್ಕಾ ಎಂದ ಸತೀಶ್ ನೀನಾಸಂ | Ayogya 2 Movie release exclusive talk with sathish | | ACTPnews

ಸತೀಶ್ ನಿನಾಸಂ


Last Updated:

ಅಯೋಗ್ಯ 2 ಚಿತ್ರದ ಮತ್ತೊಂದು ಹಾಡು ರಿಲೀಸ್ ಮಾಡ್ತೀವಿ ಜುಲೈ 8 ರಂದು ಈ ಗೀತೆ ಹೊರಗೆ ಬರುತ್ತದೆ ಈ ಸಿನಿಮಾ ಬಳಿಕ ಬೇರೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡ್ತೀನಿ ವರ್ಷಕ್ಕೆ ಎರಡ್ಮೂರು ಸಿನಿಮಾ ಮಾಡುವ ಪ್ಲಾನ್ ಇದೆ ಅಂತ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ ನ್ಯೂಸ್ 18 ಕನ್ನಡ ಡಿಜಿಟಲ್ ಜೊತೆಗಿನ ಇವರ ಸಂದರ್ಶನದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಸತೀಶ್ ನಿನಾಸಂ
ಸತೀಶ್ ನಿನಾಸಂ

ಅಯೋಗ್ಯ-2 ಸಿನಿಮಾದ (Ayogya Movie) ಶೂಟಿಂಗ್ ಕಂಪ್ಲೀಟ್ ಆಯಿತು. ಕೊನೆಯ ಹಾಡೊಂದನ್ನ ಮೊನ್ನೆ ಮುಗಿಸಿದ್ದೇವೆ. ಜುಲೈ-8 ರಂದು ಈ ಚಿತ್ರದ ಮತ್ತೊಂದು ಹಾಡು ರಿಲೀಸ್ (Song Release) ಆಗುತ್ತದೆ. ಈ ಹಾಡಿನಲ್ಲಿ ನಮ್ಮ ಇಡೀ ಚಿತ್ರದ ವಿಷಯ ಏನು ಅನ್ನೋದು ತಿಳಿಯುತ್ತದೆ. ಇದನ್ನ ಸೆಟ್ ಹಾಕಿಯೆ ಶೂಟ್ ಮಾಡಿದ್ದೇವೆ. 1000 ಜನ ಈ ಹಾಡಿಗಾಗಿಯೆ ಕೆಲಸ ಮಾಡಿದ್ದಾರೆ. ಮಕ್ಕಳು, ಡ್ಯಾನ್ಸರ್ಸ್ ಹೀಗೆ ಎಲ್ಲರೂ ಇದ್ದಾರೆ. ಆದರೆ, ಮುದ್ದುಲಕ್ಷ್ಮಿ ಹಾಡು (Mudd Muddu Putlakshmi) ಕೇಳಿದಾಗ ನನಗೂ ಹಾಗೆ ಅನಿಸ್ತು. ಆದರೆ, ಕೇಳ್ತಾ ಹೋದಂತೆ ಸಿದ್ ಶ್ರೀರಾಮ್ (Sid Sriram) ಧ್ವನಿ ಇಷ್ಟ ಆಗ್ತಾ ಹೋಯಿತು ಅಂತ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ. ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ ವಿಶೇಷ ಮಾತುಕತೆಯಲ್ಲಿ ಇನ್ನು ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.

ನನಗೂ ಹಾಗೆ ಅನಿಸಿತು…

ಅಯ್ಯೋಗ-2 ಚಿತ್ರದ ಒಂದು ಹಾಡು ರಿಲೀಸ್ ಆಗಿದೆ. ಮುದ್ದುಲಕ್ಷ್ಮಿ ಅನ್ನುವ ಹಾಡೇ ರಿಲೀಸ್ ಆಗಿದೆ. ಇದನ್ನ ಕೇಳಿದಾಗ ನನಗೂ ಹಾಗೆ ಅನಿಸ್ತು. ವಿಜಯ್ ಪ್ರಕಾಶ್ ಅವರ ಧ್ವನಿಗೆ ನಾವೆಲ್ಲ ಸೆಟ್ ಆಗಿದ್ದೇವೆ.

ಆದರೆ, ಅರ್ಜುನ್ ಜನ್ಯ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಆ ಪ್ರಯೋಗದಿಂದಲೇ ಮುದ್ದುಲಕ್ಷ್ಮಿ ಹಾಡಿಗೆ ಸಿದ್ ಶ್ರೀರಾಮ್ ಬಂದರು. ಇದನ್ನ ಕೇಳಿದಾಗ ನನಗೂ ಅದೇ ಫೀಲ್ ಆಯಿತು. ಎರಡನೇ ಸಲ ಕೇಳಿದಾಗ ಚೆನ್ನಾಗಿ ಅನಿಸ್ತು. ಯಾವುದೇ ಹಾಡು ಕೇಳಿದಾಗಲೂ ಇದೇ ರೀತಿನೇ ಆಗುತ್ತದೆ.

ಮತ್ತೊಂದು ಹಾಡು ರಿಲೀಸ್

ಈಗಾಗಲೇ ಒಂದು ಹಾಡು ರಿಲೀಸ್ ಆಗಿದೆ. ಆದರೆ, ಜುಲೈ-8 ರಂದು ಮತ್ತೊಂದು ಹಾಡನ್ನ ರಿಲೀಸ್ ಮಾಡುತ್ತೇವೆ. ಇದು ತುಂಬಾನೆ ಚೆನ್ನಾಗಿ ಬಂದಿದೆ.

ಸೆಟ್ ಹಾಕಿಯೇ ಈ ಒಂದು ಗೀತೆಯನ್ನ ಚಿತ್ರೀಕರಿಸಿದ್ದೇವೆ. ಮಕ್ಕಳು ಮತ್ತು ಡ್ಯಾನ್ಸರ್ಸ್ ಹೀಗೆ 1000 ಜನ ಈ ಹಾಡಿಗಾಗಿಯೇ ಕೆಲಸ ಮಾಡಿದ್ದಾರೆ. ಇದು ಇಡೀ ಚಿತ್ರ ಹೇಗೆ ಇರುತ್ತದೆ ಅನ್ನೋದನ್ನು ಹೇಳುತ್ತದೆ.

ಈ ಸಲ ಡಬಲ್ ಧಮಾಕಾ

ಅಯೋಗ್ಯ ಚಿತ್ರದಲ್ಲಿ ಮಿಡಲ್ ಕ್ಲಾಸ್ ಕತೆ ಇತ್ತು. ಅಯೋಗ್ಯ-2 ಚಿತ್ರದಲ್ಲೂ ಅದೇ ಕಥೆ ಮುಂದುವರೆಯುತ್ತದೆ. ಆದರೆ, ಈ ಸಲ ಡಬಲ್ ಧಮಾಕಾ ಇದೆ. ಡಬಲ್ ಕಾಮಿಡಿ ಇದೆ.

ಅಯೋಗ್ಯ ಒನ್ ಚಿತ್ರಕ್ಕೆ ಹಾಕಿರೋ ಬಜೆಟ್‌ಗಿಂತಲೂ ಈ ಸಲ ಡಬಲ್ ಆಗಿದೆ. ಚಿತ್ರದಲ್ಲಿ ಡಬಲ್ ಎಂಟರ್‌ಟೈನಮೆಂಟ್‌ ಇದೆ. ಆ ಚಿತ್ರದಿಂದ ಈ ಚಿತ್ರದವರೆಗೂ ಕಲಿಕೆ ನಿರಂತರವಾಗಿಯೇ ಇದೆ. ಅದು ನಿಲ್ಲೋದೇ ಇಲ್ಲ. ಹೊಸದನ್ನ ತಿಳಿದುಕೊಂಡು ಮುಂದೆ ಹೋಗ್ತಾನೇ ಇದ್ದೇವೆ.

ಆ ಒಂದು ನಂಬಿಕೆ

ಚಿತ್ರ ನೋಡುವ ಜನ ಇಂತಹದ್ದೆ ಚಿತ್ರ ನೋಡ್ತಾರೆ ಅಂತ ಹೇಳೋಕೆ ಆಗೋದಿಲ್ಲ. ಈಗೀನ ಟೈಮ್ ಅಲ್ಲಿ ಬೇರೆ ಕತೆ ಕೊಟ್ಟರೆ ಜನ ನೋಡ್ತಾರೆ ಅನ್ನುವ ನಂಬಿಕೆ ಮೇಲೆ ಸಿನಿಮಾ ಮಾಡ್ತಾನೇ ಇರುತ್ತೇವೆ.

ಆದರೆ, ಜನ ಇದನ್ನೇ ನೋಡ್ತಾರೆ ಅಂತ ಹೇಳೋಕೆ ಆಗೋದಿಲ್ಲ. ಒಂದು ನಂಬಿಕೆ ಮೇಲೆ ಸಿನಿಮಾ ಮಾಡ್ತಾನೇ ಇರ್ತೀವಿ ಅಂತಲೇ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ.

ವರ್ಷಕ್ಕೆ 2 ಚಿತ್ರದ ಪ್ಲಾನ್

ಒಂದು ವರ್ಷಕ್ಕೆ ಎರಡು ಸಿನಿಮಾ ಮಾಡ್ಬೇಕು ಅಂತ ಅಂದುಕೊಂಡಿದ್ದೇನೆ. 6 ತಿಂಗಳಿಗೊಂದು ಚಿತ್ರ ಮಾಡ್ಬೇಕು ಅನ್ನುವ ಯೋಚನೆ ಇದೆ. ಅಯೋಗ್ಯ-2 ಚಿತ್ರ ಹೊರ ಬಂದ್ಮೇಲೆ ಕೂಡಲೇ ಮತ್ತೊಂದು ಚಿತ್ರ ಅನೌನ್ಸ್ ಮಾಡ್ತೀನಿ.

-ರೇವನ್ ಪಿ.ಜೇವೂರ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed