30 ನೇ ಜನ್ಮ ದಿನ
(ಚಿತ್ರ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)
ಸೂರಿ ಅವರ ಈ ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದ್ದರು. ಈ ಚಿತ್ರದಲ್ಲಿ ಖಡಕ್ ರೋಲ್ ಮಾಡಿದ್ದರು. ಸ್ನೇಹಿತ ಡಾಲಿ ಧನಂಜಯ್ ಜೊತೆಗೆ ಇಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಆದರೆ, ಈ ಚಿತ್ರದಿಂದ ಅಷ್ಟೇನೂ ರೀಚ್ ಆಗಲಿಲ್ಲ. ಆದರೆ…
ಕಾಂತಾರ ಚಿತ್ರದಲ್ಲಿ ಸಪ್ತಮಿ ಗೌಡ ಒಳ್ಳೆ ಪಾತ್ರವನ್ನೆ ಮಾಡಿದ್ದರು. ಲೀಲಾ ಅನ್ನುವ ಈ ರೋಲ್ ಎಲ್ಲರಿಗೂ ಇಷ್ಟ ಆಗುವ ರೀತಿನೇ ಇತ್ತು.
ಈ ಚಿತ್ರದಿಂದ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಮಟ್ಟಕ್ಕೆ ಪರಿಚಯ ಆದರು. ಎಲ್ಲೆಡೆ ಸಪ್ತಮಿ ಗೌಡ ಅವರನ್ನ ಗುರುತಿಸುವ ಹಾಗೆ ಆಯಿತು.
ಕಾಂತಾರ ಚಿತ್ರದ ಕ್ರೇಜ್ ಇನ್ನು ಇತ್ತು. ಆಗಲೇ ಸಪ್ತಮಿ ಗೌಡ ಅವರಿಗೆ ಬಾಲಿವುಡ್ ಆಫರ್ ಬಂದಿತ್ತು. ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ ಈ ಸಿನಿಮಾ ಡೈರೆಕ್ಷನ್ ಮಾಡಿದ್ದರು.
ನಾನಾ ಪಾಟೇಕರ್, ಅನುಪಮ್ ಖೇರ್, ಪಲ್ಲವಿ ಜೋಶಿ ಹೀಗೆ ಅನೇಕ ದೊಡ್ಡ ಕಲಾವಿದರು ಈ ಚಿತ್ರದಲ್ಲಿದ್ದರು. ಇವರ ಜೊತೆಗೆ ನಟಿಸಿದ ಸಪ್ತಮಿ ಗೌಡ ಈ ಚಿತ್ರದ ಬಳಿಕ ಕನ್ನಡದಲ್ಲಿ ಮತ್ತೊಂದು ಚಿತ್ರ ಒಪ್ಪಿದರು.
ಡಾಲಿ ಜೊತೆಗೆ ಸಿನಿಮಾ
(ಚಿತ್ರ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)
ಈ ಒಂದು ಚಿತ್ರದಲ್ಲಿ ದೊಡ್ಮನೆ ಯುವರಾಜ್ ಕುಮಾರ್ ಹೀರೋ ಆಗಿದ್ದರು. ಯುವ ರಾಜ್ಕುಮಾರ್ ಜೋಡಿ ಆಗಿಯೇ ಸಪ್ತಮಿ ಗೌಡ ಇಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಯುವ ಅನ್ನುವ ಟೈಟಲ್ ಇಟ್ಟಿದ್ದರು.
ಈ ಚಿತ್ರ ಆದ್ಮೇಲೆ ಟಾಲಿವುಡ್ಗೂ ಸಪ್ತಮಿ ಕಾಲಿಟ್ಟಿರು. ನಟ ನಿತಿನ್ ಈ ಚಿತ್ರದಲ್ಲಿ ನಟಿಸಿದ್ದರು. ತಮ್ಮುಡು ಅನ್ನೋದು ಈ ಸಿನಿಮಾದ ಹೆಸರಾಗಿತ್ತು. ಈ ಚಿತ್ರದ ಕೆಲಸದ ಮೂಲಕವೂ ಸಪ್ತಮಿ ಗೌಡ ಪ್ರೇಕ್ಷಕರ ಗಮನ ಸೆಳೆದರು.
ಸಪ್ತಮಿ ಗೌಡ ಕನ್ನಡದ ವೆಬ್ ಸೀರೀಸ್ಗೂ ಕಾಲಿಟ್ಟಿದ್ದು. ಶೋಧ ಅನ್ನುವ ಈ ವೆಬ್ ಸೀರೀಸ್ ಅಲ್ಲಿ ದೇವಿಕಾ ಅನ್ನುವ ರೋಲ್ ಮಾಡಿದ್ದರು.
ಈ ಚಿತ್ರ ಆದ್ಮೇಲೆ ದಿ ರೈಸ್ ಆಫ್ ಅಶೋಕ ಚಿತ್ರ ಮಾಡಿದರು. ಇದು ಬಹು ಭಾಷೆಯಲ್ಲಿ ರಿಲೀಸ್ ಆಯಿತು. ನೀನಾಸಂ ಸತೀಶ್ ಈ ಚಿತ್ರದಲ್ಲಿ ನಾಯಕರಾಗಿದ್ದರು. ಇದು ತನ್ನದೇ ರೀತಿಯಲ್ಲಿ ಸದ್ದು ಮಾಡ್ತು.
6 ವರ್ಷದ, 7 ಸಿನಿಮಾ; 2 ನೇ ಚಿತ್ರಕ್ಕೆ ಪ್ಯಾನ್ ಇಂಡಿಯಾ ಸ್ಟಾರ್
(ಚಿತ್ರ ಕೃಪೆ: ಸಪ್ತಮಿ ಗೌಡ ಇನ್ಸ್ಟಾಗ್ರಾಮ್)
ಡಾಲಿ ಧನಂಜಯ್ ಜೊತೆಗೆ ಸಪ್ತಮಿ ಗೌಡ ಸಿನಿಮಾ ಮಾಡುತ್ತಿದ್ದಾರೆ. ಹಲಗಲಿ ಅನ್ನುವ ಈ ಚಿತ್ರದ ದೊಡ್ಡಮಟ್ಟದ ಚಿತ್ರವೇ ಆಗಿದೆ.
ಬ್ರಿಟಿಷರ ವಿರುದ್ಧ ಬಂಡೆದ್ದ ಹಲಗಲಿಯ ಬೇಡರ ಕತೆ ಇದಾಗಿದೆ. ಸ್ವತಂತ್ರ ಪೂರ್ವದ ಈ ಸ್ಟೋರಿಯನ್ನ ದೊಡ್ಡಮಟ್ಟದಲ್ಲಿಯೇ ಹೇಳುವ ಪ್ಲಾನ್ ಮಾಡಲಾಗಿದೆ. ಚಿತ್ರದಲ್ಲಿ ಡಾಲಿ ಧನಂಜಯ್ “ಚಡಗ” ಅನ್ನುವ ರೋಲ್ ಮಾಡಿದ್ದಾರೆ. ಸಪ್ತಮಿ ಗೌಡ ಇಲ್ಲಿ ಹೊನ್ನಿ ಅನ್ನುವ ಖಡಕ್ ಮಹಿಳೆಯ ಪಾತ್ರ ಮಾಡಿದ್ದಾರೆ.
ಸಪ್ತಮಿ ಗೌಡ ತಮ್ಮ 30 ನೇ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾರೆ. ಕಳೆದ 6 ವರ್ಷದಲ್ಲಿ ಹಲಗಲಿ ಸೇರಿ ಒಟ್ಟು 7 ಸಿನಿಮಾ ಮಾಡಿದ್ದಾರೆ. ಈ ಮೂಲಕ ಬಾಲಿವುಡ್, ಟಾಲಿವುಡ್ಗೂ ಕಾಲಿಟ್ಟಿದ್ದಾರೆ. ಕಾಂತಾರ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟಿನೂ ಆಗಿದ್ದಾರೆ ಅಂತ ಹೇಳಬಹುದು.













