Shruthi Hariharan: ಶ್ರುತಿ ಹರಿಹರನ್ ‘ಮೌನ ರಾಗ’ ಮೆಚ್ಚಿದ ಜನ; ಯುಟ್ಯೂಬ್ ನಲ್ಲಿ ಲಕ್ಷ ಲಕ್ಷ ವೀವ್ಸ್! | | ACTPnews

Sruthi Hariharan Mouna Raaga short film Latest Updates


ಮೌನ ರಾಗ ಹೊಸ ವಿಷಯ

ಮೌನ ರಾಗ ಚಿತ್ರ ಯುಟ್ಯೂಬ್ ಅಲ್ಲಿ ಓಡ್ತಿದೆ. ಅಂದ್ರೆ, ಈ ಪುಟ್ಟ ಚಿತ್ರಕ್ಕೆ ಉತ್ತಮ ವೀವ್ಸ್ ಬಂದಿವೆ. ಇದನ್ನ ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ.

ಮೌನ ರಾಗ ಹೊಸ ವಿಷಯ

(ಚಿತ್ರ ಕೃಪೆ: ಶ್ರುತಿ ಹರಿಹರನ್ ಇನ್‌ಸ್ಟಾಗ್ರಾಮ್)

ಚಿತ್ರಕ್ಕೆ ಯುಟ್ಯೂಬ್ ಅಲ್ಲಿ ಬರೋಬ್ಬರಿ 2.5 ಲಕ್ಷ ವೀವ್ಸ್ ಬಂದಿವೆ. ಇದನ್ನ ಕ್ವಾರ್ಟರ್ ಮಿಲಿಯನ್ ವೀವ್ಸ್ ಬಂದಿವೆ ಅಂತ ಸಿನಿಮಾ ತಂಡ ಇದನ್ನ ಅಧಿಕೃತವಾಗಿಯೇ ಹೇಳಿಕೊಂಡಿದೆ.

ಮೌನ ರಾಗ ಚಿತ್ರದ ನಾಯಕಿ

ಮೌನ ರಾಗ ಚಿತ್ರದಲ್ಲಿ ಶ್ರುತಿ ಹರಿಹರನ್ ಅಭಿನಯಿಸಿದ್ದಾರೆ. ಇವರ ಅಭಿನಯದಲ್ಲಿ ಆ ಸಹಜ ಸೆಳೆತ ಇದ್ದೇ ಇದೆ. ಅದನ್ನ ಇಲ್ಲೂ ನೋಡಬಹುದು.
ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್

ಮೌನ ರಾಗ ಚಿತ್ರಕ್ಕೆ ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್ ಪ್ರಶಸ್ತಿನೂ ಬಂದಿವೆ. ಹಾಗೆ ಇದು ತೀರ್ಪುಗಾರರ ವಿಶೇಷ ಪ್ರಶಸ್ತಿಯನ್ನೆ ಪಡೆದುಕೊಂಡಿದೆ.

ಇಸ್ತಾಂಬುಲ್ ಅಂತರರಾಷ್ಟ್ರೀಯ ಮಹಿಳಾ ಚಲನಚಿತ್ರೋತ್ಸವದಲ್ಲಿ ಕ್ವಾರ್ಟರ್ ಫೈನಲಿಸ್ಟ್ ಸ್ಥಾನ ಪಡೆದಿದೆ. ಅಹಮದಾಬಾದ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾಮನಿರ್ದೇಶನಗೊಂಡಿದೆ. ಹೀಗೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Sruthi Hariharan Mouna Raaga short film Latest Updates

ಇದು ಎಷ್ಟು ನಿಮಿಷದ ಸಿನಿಮಾ
ಮೌನ ರಾಗದ ಹಿಂದಿನ ಶಕ್ತಿ

ಮೌನ ರಾಗ ಚಿತ್ರಕ್ಕೆ ಪ್ರೀತಾ ಜಯರಾಮನ್ ಕ್ಯಾಮರಾವರ್ಕ್ ಮಾಡಿದ್ದಾರೆ. ಆಲ್ ಓಕೆ ಅಲೋಕ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ.

ಪತ್ರಕರ್ತೆ ಸುನೈನಾ ಸುರೇಶ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಚಿತ್ರ ಬರೆದು ನಿರ್ಮಾಣ ಕೂಡ ಮಾಡಿದ್ದಾರೆ. ಶ್ರುತಿ ಹರಿಹರನ್, ಅಗ್ನಿವ್, ಸೂರಜ್ ಗೌಡ, ಹರ್ಷಿಲ್ ಕೌಶಿಕ್, ಅನಿರುದ್ಧ್ ಆಚಾರ್ಯ, ಸಂಯುಕ್ತ ಹೊರ್ನಾಡ್ ಈ ಚಿತ್ರದಲ್ಲಿಅಭಿನಯಿಸಿದ್ದಾರೆ.

ಇದು ಎಷ್ಟು ನಿಮಿಷದ ಸಿನಿಮಾ

ಮೌನ ರಾಗ ಚಿತ್ರ ತುಂಬಾ ದೊಡ್ಡ ಚಿತ್ರವೇನು ಅಲ್ಲ. ಈಗಾಗಲೇ ಹೇಳಿದಂತೆ ಇದು ಕಿರು ಚಿತ್ರವೇ ಆಗಿದೆ. ಇದರ ಒಟ್ಟು ಡ್ಯೂರೇಷನ್ ಅನ್ನ ಹೇಳೋದಾದ್ರೆ, ಇದು 19 ನಿಮಿಷ 8 ಸೆಕೆಂಡ್‌ನ ಚಿತ್ರವೇ ಆಗಿದೆ.

ಈ ಚಿತ್ರದ ಸದ್ಯ ಯುಟ್ಯೂಬ್ ಅಲ್ಲಿ ಲಭ್ಯವಿದೆ. ಸುನೈನಾ ಸುರೇಶ್ ಯುಟ್ಯೂಬ್ ಚಾನೆಲ್ ಅಲ್ಲಿ ಈ ಚಿತ್ರ ಅಪ್‌ಲೋಡ್ ಆಗಿದೆ. ಇದನ್ನ ನೋಡಿದವರು ಅಷ್ಟೆ ಮೆಚ್ಚಿಕೊಂಡಿದ್ದಾರೆ. ಕಾಂಪ್ಲಿಮೆಂಟ್‌ ಕೂಡ ಕೊಟ್ಟಿದ್ದಾರೆ.

ಚಿತ್ರಕ್ಕೆ ಬಂದ ಕಾಂಪ್ಲಿಮೆಂಟ್ಸ್

ಶೃತಿ ಹರಿಹರನ್ ಈ ಚಿತ್ರದಲ್ಲಿ ಅತ್ಯುತ್ತಮವಾಗಿಯೇ ನಟಿಸಿದ್ದಾರೆ. ಈ ಒಂದು ಚಿತ್ರ ನೋಡಿದವರು ಈ ಮಾತನ್ನ ಹೇಳಿದ್ದಾರೆ. ಅದು ಈ ರೀತಿ ಇದೆ. ಒಳ್ಳೆ ಸಂದೇಶ ಇರೋ ಕಿರು ಚಿತ್ರಗಳು ಬರ್ಲಿ, ಶ್ರುತಿ ಹರಿಹರನ್ ತುಂಬಾ ಅತ್ಯುತ್ತಮ ವಾಗಿ ನಟಿಸಿದ್ದಾರೆ. hat’sup to Director ಅಂತಲೂ ಹೇಳಿದ್ದಾರೆ.

ಶ್ರುತಿ ಹರಿಹರಿನ್ ಅವರು ಕನ್ನಡದ ಅತ್ಯುತ್ತಮ ನಟಿ ಆಗಿದ್ದಾರೆ. ಇವರು ಲೂಸಿಯಾ ಮತ್ತು ಈ ಮೌನ ರಾಗ ಚಿತ್ರದಲ್ಲಿ ತುಂಬಾನೆ ಚೆನ್ನಾಗಿ ಅಭಿನಯಿಸಿದ್ದಾರೆ. ಇವರಿಗೆ ಇನ್ನಷ್ಟು ಒಳ್ಳೆ ಅವಕಾಶ ಸಿಗಲಿ ಅಂತಲೇ ಶುಭ ಹಾರೈಸಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed