Samantha Ruth Prabhu-Rashmika Mandanna: ಮದುವೆ ನಂತರ ಇಬ್ಬರಿಗೂ ಮೊದಲ ರಿಲೀಸ್! ಗೆದ್ದಿದ್ಯಾರು? ಸಮಂತಾ? ರಶ್ಮಿಕಾ? | Rashmika mandanna and samantha ruth prabhu | | ACTPnews

ಸಮಂತಾ-ರಶ್ಮಿಕಾ


Last Updated:

Samantha Ruth Prabhu-Rashmika Mandanna: ಸಮಂತಾ ಹಾಗೂ ರಶ್ಮಿಕಾ ಅವರ ಮದುವೆ ನಂತರದ ಮೊದಲ ಸಿನಿಮಾಗಳು ಒಂದೇ ದಿನ ರಿಲೀಸ್ ಆಗಿವೆ. ಗೆದ್ದವರು ಯಾರು? ಯಾರಿಗೆ ಹೇಗಿದೆ ರೆಸ್ಪಾನ್ಸ್?

ಸಮಂತಾ-ರಶ್ಮಿಕಾ
ಸಮಂತಾ-ರಶ್ಮಿಕಾ

ರಶ್ಮಿಕಾ ಮಂದಣ್ಣ (Rashmika Mandanna) ಅವರು ನ್ಯಾಷನಲ್ ಕ್ರಶ್ ಆದರೆ ಸಮಂತಾ ರುತ್ ಪ್ರಭು (Samantha Ruth Prabhu) ಪ್ರೇಕ್ಷಕರ ಕಣ್ಮಣಿ. ಇಬ್ಬರಿಗೂ ಸಪರೇಟ್ ಫ್ಯಾನ್ಸ್ ಬೇಸ್ ಇದೆ. ಇಬ್ಬರು ನಟಿಯರೂ (Actress) ಕೂಡಾ ಟಾಪ್ ಹೀರೋಯಿನ್ ಲಿಸ್ಟ್​ನಲ್ಲಿರುವವರೇ. ವಿಶೇಷ ಏನು ಅಂದ್ರೆ ಈ ತಿಂಗಳ ಅಂದರೆ ಜೂನ್ 19ರಂದು ಸಮಂತಾ ರುತ್ ಪ್ರಭು ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆ ನಂತರದ ಮೊದಲ ಸಿನಿಮಾಗಳು (Cinema) ರಿಲೀಸ್ ಆಗಿವೆ.

ಮದುವೆ ನಂತರ ಹೀರೋಯಿನ್ ಕೆರಿಯರ್ ಮುಗಿಯಿತು ಎನ್ನುವ ಕಾಲ ಯಾವಾಗಲೋ ಮುಗಿದಿದೆ. ನಟಿ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ಕಾಕ್ಟೇಲ್ 2 ಅವರ ಮೊದಲ ರಿಲೀಸ್. ಇನ್ನು ಸಮಂತಾ ರಾಜ್ ನಿಡಿಮೊರು ಅವರನ್ನು ಮದುವೆಯಾದ ನಂತರ ಮಾ ಇಂಟಿ ಬಂಗರಾಂ ಅವರ ಮೊದಲ ರಿಲೀಸ್.

ಇನ್ನೂ ಒಂದು ವಿಶೇಷ ಏನಪ್ಪಾ ಅಂದ್ರೆ ರಶ್ಮಿಕಾ ಹಿಂದಿ ಸಿನಿಮಾ ಮಾಡಿದ್ದು ಶಾಹಿದ್ ಕಪೂರ್ ಹಾಗೂ ಕೃತಿ ಸನೋನ್ ಜೊತೆ ತೆರೆ ಹಂಚಿಕೊಂಡರೆ ಮಾ ಇಂಟಿ ಬಂಗಾರಂಗೆ ಸಮಂತಾ ಅವರೇ ಹೀರೋ ಮೈನ್. ಹೌದು ಇದು ಹೀರೋಯಿನ್ ಓರಿಯೆಂಟೆಡ್ ಮೂವಿ.

ಹೇಗಿದೆ ಜನರಿಂದ ಬರ್ತಿರೋ ರೆಸ್ಪಾನ್ಸ್?

ಬಾಕ್ಸ್ ಆಫೀಸ್ ನಂಬರ್​ಗಿಂತ ಮುನ್ನ ಸಿನಿಮಾಗೆ ಬರ್ತಿರೋ ಆಡಿಯೆನ್ಸ್ ರೆಸ್ಪಾನ್ಸ್ ನೋಡೋಣ. ರಶ್ಮಿಕಾ ಅವರ ಕಾಕ್ಟೇಲ್ 2 ಸಿನಿಮಾ ಈ ಹಿಂದಿನ ಕಾಕ್ಟೇಲ್ ಮೂವಿಯ ಸೀಕ್ವೆಲ್. ಅದೇ ಪ್ಯಾಟರ್ನ್​ನ ಟ್ರಯಾಂಗಲ್ ಮಾಡರ್ನ್ ರಿಲೇಷನ್​ಶಿಪ್ ಸ್ಟೋರಿ. ಆದರೆ ಈ ಸಿನಿಮಾದಲ್ಲಿ ರಶ್ಮಿಕಾ ಅಭಿನಯಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

ರಶ್ಮಿಕಾ ಅವರ ಹಿಂದಿ ಉಚ್ಛಾರಣೆ ಸರಿ ಇಲ್ಲ ಎನ್ನಲಾಗಿದೆ. ತರುಣ್ ಆದರ್ಶ್ ಅವರ ವಿಶರ್ಮೆಯಲ್ಲಿ ಈ ವಿಚಾರನ್ನು ಹೈಲೈಟ್ ಕೂಡಾ ಮಾಡಿದ್ದಾರೆ. ಅದನ್ನು ಹೊರತುಪಡಿಸಿದರೆ ಸಿನಿಮಾ ಎವರೇಜ್ ಎನ್ನುವ ಟಾಕ್ ಪಡೆದುಕೊಂಡಿದೆ. ರಶ್ಮಿಕಾ ಅವರ ಈ ಹಿಂದಿನ ಪ್ರಾಜೆಕ್ಟ್​​ಗಳಿಗೆ ಹೋಲಿಸಿದರೆ ಇದು ಸ್ವಲ್ಪ ಡಲ್ ಹೊಡೆದಿರೋದು ನಿಜ.

ಇನ್ನು ಸಮಂತಾ ಅವರ ಮಾ ಇಂಟಿ ಬಂಗಾರಂ ಹೀರೋಯಿನ್ ಮೂವಿ, ಆ್ಯಕ್ಷನ್ ಮೂವಿ ಹೇಗಾಗಲಿಯೇ ಎನ್ನುವ ಮಿಶ್ರ ನಿರೀಕ್ಷೆ ಜನರಲ್ಲಿತ್ತು. ಆದರೆ ಸಮಂತಾ ಅವರ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಕೇಳಿ ಬರುತ್ತಿದೆ. ಸಿನಿಮಾ ನೋಡಿ ಬಹಳಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸಮಂತಾ ಅವರು ಖುಷಿ, ಯಶೋದಾ ಇಂತಹ ಸಿನಿಮಾ ಬಂದರೂ ಕೂಡಾ ಅಂತಹ ಮೆಚ್ಚುಗೆ ಏನೂ ವ್ಯಕ್ತವಾಗಲಿಲ್ಲ. ಎರಡೂ ಸಿನಿಮಾಗಳು ಕೂಡಾ ಫ್ಲಾಪ್ ಆಗಿದ್ದವು. ಸಮಂತಾ ಅವರಿಗೆ ಈ ಸಿನಿಮಾ ಒಂದು ರೀತಿ ಬೂಸ್ಟ್ ಎನ್ನಬಹುದು.

ಬಾಕ್ಸ್ ಆಫೀಸ್ ಕಲೆಕ್ಷನ್ ಹೇಗಿದೆ?

ಕಾಕ್ಟೇಲ್ 2 ಸಿನಿಮಾ 4 ದಿನಗಳಲ್ಲಿ 50 ಕೋಟಿ ಗಳಿಸಿದೆ. ಮೊದಲ ದಿನ ಸಿನಿಮಾ 12.50 ಕೋಟಿ ರೂಪಾಯಿ ಗಳಿಸಿತ್ತು. ವರ್ಲ್ಡ್ ಬಾಕ್ಸ್ ಆಫೀಸ್ ರೆಕಾರ್ಡ್ ನೋಡುವುದಾದರೆ ಸಿನಿಮಾ 85 ಕೋಟಿ ಸಮೀಪವಿದ್ದು ಶೀಘ್ರವೇ 100 ಕೋಟಿ ತಲುಪಲಿದೆ. ಮಾ ಇಂಟಿ ಬಂಗಾರಂ ಸಿನಿಮಾದ ಕಲೆಕ್ಷನ್ ನೋಡುವುದಾದರೆ ಇದು ದೇಶಿಯ ಬಾಕ್ಸ್ ಆಫೀಸ್​ನಲ್ಲಿ 4 ದಿನದಲ್ಲಿ 31 ಕೋಟಿ ಗಳಿಸಿದೆ. ಇನ್ನು ವರ್ಲ್ಡ್ ಬಾಕ್ಸ್ ಆಫೀಸ್​ ಕಲೆಕ್ಷನ್ 46.06 ಕೋಟಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed