Salman Khan: ಚಿತ್ರತಂಡಕ್ಕೆ ನೋಟಿಸ್ ಕೊಟ್ಟ ಸಲ್ಮಾನ್ ಖಾನ್! ‘ಕಾಲಾಹಿರನ್’ ವಿರುದ್ಧ ಗರಂ ಆಗಿದ್ದೇಕೆ ಬ್ಯಾಡ್ ಬಾಯ್? | | ACTPnews

ಸಲ್ಮಾನ್ ಖಾನ್


Last Updated:

Salman Khan: ‘ಕಾಲಾ ಹಿರನ್’ ಸಿನಿಮಾ ಹೊಸ ವಿವಾದಕ್ಕೆ ಕಾರಣವಾಗಿದ್ದು, ಚಿತ್ರದ ನಿರ್ಮಾಪಕರಿಗೆ ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ..

ಸಲ್ಮಾನ್ ಖಾನ್
ಸಲ್ಮಾನ್ ಖಾನ್

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರ ಜೀವನ ಮತ್ತು ವೃತ್ತಿಜೀವನ ಹಲವು ಯಶಸ್ವಿ ಸಿನಿಮಾಗಳಿಂದ ಗುರುತಿಸಿಕೊಂಡಿದ್ದರೂ, ಕೆಲ ವಿವಾದಗಳು ಕೂಡ ಅವರ ಹೆಸರಿನೊಂದಿಗೆ ಅಂಟಿಕೊಂಡಿವೆ. ಅವುಗಳಲ್ಲಿ 1998ರ ಕೃಷ್ಣಮೃಗ ಬೇಟೆ ಪ್ರಕರಣವು ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದ ಘಟನೆಯಾಗಿದೆ. ಇದೀಗ ಇದೇ ಪ್ರಕರಣದ ಹಿನ್ನೆಲೆಯನ್ನು ಆಧರಿಸಿ ನಿರ್ಮಾಣವಾಗುತ್ತಿರುವ ‘ಕಾಲಾ ಹಿರನ್’ ಸಿನಿಮಾ ಹೊಸ ವಿವಾದಕ್ಕೆ ಕಾರಣವಾಗಿದ್ದು, ಚಿತ್ರದ ನಿರ್ಮಾಪಕರಿಗೆ ಸಲ್ಮಾನ್ ಖಾನ್ ಕಾನೂನು ನೋಟಿಸ್ ಕಳುಹಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

1998ರಲ್ಲಿ ರಾಜಸ್ಥಾನದಲ್ಲಿ ನಡೆದ ಕೃಷ್ಣಮೃಗ ಬೇಟೆ ಪ್ರಕರಣವು ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರ ಹೆಸರು ಪ್ರಮುಖವಾಗಿ ಕೇಳಿಬಂದಿದ್ದು, ಹಲವು ವರ್ಷಗಳಿಂದ ಕಾನೂನು ಹೋರಾಟ ಮುಂದುವರಿದಿದೆ. ಇದೀಗ ಇದೇ ಘಟನೆಯಿಂದ ಪ್ರೇರಣೆ ಪಡೆದು ‘ಕಾಲಾ ಹಿರನ್’ ಹೆಸರಿನ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಈ ಸಿನಿಮಾ ಘೋಷಣೆಯಾದ ಬಳಿಕವೇ ಬಾಲಿವುಡ್ ವಲಯದಲ್ಲಿ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು.

‘ಕಾಲಾ ಹಿರನ್’ ಚಿತ್ರದ ನಿರ್ಮಾಪಕರು ಮತ್ತು ಸಂಬಂಧಪಟ್ಟ ತಂಡಕ್ಕೆ ಸಲ್ಮಾನ್ ಖಾನ್ ಪರ ವಕೀಲರು ಕಾನೂನು ನೋಟಿಸ್ ಕಳುಹಿಸಿದ್ದಾರೆ. ಚಿತ್ರದ ಬಿಡುಗಡೆ ಮಾತ್ರವಲ್ಲದೆ, ಸಂಪೂರ್ಣ ಯೋಜನೆ ಮತ್ತು ಅದರ ಪ್ರಚಾರ ಚಟುವಟಿಕೆಗಳನ್ನು ಕೂಡ ತಕ್ಷಣ ಸ್ಥಗಿತಗೊಳಿಸುವಂತೆ ನೋಟಿಸ್‌ನಲ್ಲಿ ಮನವಿ ಮಾಡಲಾಗಿದೆ. ಚಿತ್ರದ ಕಾಸ್ಟಿಂಗ್ ಡೈರೆಕ್ಟರ್ ಅಕ್ಷಯ್ ಪಾಂಡೆ ಅವರಿಗೆ ಈ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Suriya: ವಿಜಯ್ ಬಾಕ್ಸ್ ಆಫೀಸ್ ಕಲೆಕ್ಷನ್ ಮುರಿದ ಸೂರ್ಯ ಅಭಿನಯದ ಸಿನಿಮಾ! ದಾಖಲೆ ಬರೆದ ‘ಕರುಪ್ಪು’

ಸಲ್ಮಾನ್ ಖಾನ್ ಪರ ವಕೀಲರು ನೀಡಿರುವ ನೋಟಿಸ್‌ನಲ್ಲಿ ಪ್ರಮುಖವಾಗಿ ಎರಡು ಅಂಶಗಳನ್ನು ಉಲ್ಲೇಖಿಸಿದ್ದಾರೆ. ಮೊದಲನೆಯದಾಗಿ, ಈ ಸಿನಿಮಾ ನಟನ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಎರಡನೆಯದಾಗಿ, ರಾಜಸ್ಥಾನ ಹೈಕೋರ್ಟ್‌ನಲ್ಲಿ ಕೃಷ್ಣಮೃಗ ಪ್ರಕರಣ ಇನ್ನೂ ಪರಿಗಣನೆಯಲ್ಲಿರುವ ಕಾರಣ, ಪ್ರಕರಣದ ಕುರಿತು ಸಿನಿಮಾ ನಿರ್ಮಾಣ ಮತ್ತು ಪ್ರಚಾರ ನಡೆಯುವುದು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದರ ಜೊತೆಗೆ, ಇಂತಹ ಸಿನಿಮಾ ನಿರ್ಮಾಣವು ನ್ಯಾಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆಯಿದ್ದು, ನ್ಯಾಯಯುತ ವಿಚಾರಣೆಯನ್ನು ಪಡೆಯುವ ತಮ್ಮ ಕಕ್ಷಿದಾರರ ಮೂಲಭೂತ ಹಕ್ಕಿಗೆ ಧಕ್ಕೆ ಉಂಟುಮಾಡಬಹುದು ಎಂಬ ವಾದವನ್ನು ಕೂಡ ಮುಂದಿರಿಸಲಾಗಿದೆ.

ಇತ್ತ ಚಿತ್ರದ ನಿರ್ಮಾಪಕ ಅಮಿತ್ ಜಾನಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಲ್ಮಾನ್ ಖಾನ್ ‘ಕಾಲಾ ಹಿರನ್’ ಚಿತ್ರಕ್ಕೆ ಸಂಬಂಧಿಸಿದವರನ್ನು ಕಾನೂನು ನೋಟಿಸ್ ಮೂಲಕ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಹೇಳಿಕೆಯಲ್ಲಿ, “ಸಲ್ಮಾನ್ ಖಾನ್ ಅವರು ‘ಕಾಲಾ ಹಿರನ್’ ಯೋಜನೆಗೆ ಸಂಬಂಧಿಸಿದ ಜನರಿಗೆ ಕಾನೂನು ನೋಟಿಸ್ ಕಳುಹಿಸುತ್ತಿದ್ದಾರೆ. ಅವರ ತಾರಾಪಟ್ಟ ಮತ್ತು ಗ್ಲಾಮರ್‌ನ್ನು ನೋಡಿ ಜನರು ಹೆದರಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ಅಮಿತ್ ಜಾನಿ ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed