Salman Khan: ಸಲ್ಮಾನ್ ಖಾನ್ ಖಾಸಗಿ ವಿಡಿಯೋ ವೈರಲ್! ಲೀಕ್ ಮಾಡಿದ್ಯಾರು ಗೊತ್ತಾ? | | ACTPnews

Salman Khan: ಸಲ್ಮಾನ್ ಖಾನ್ ಖಾಸಗಿ ವಿಡಿಯೋ ವೈರಲ್! ಲೀಕ್ ಮಾಡಿದ್ಯಾರು ಗೊತ್ತಾ? |


ಹೌದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿವೆ. ಒಬ್ಬ ನಟನ ಖಾಸಗಿತನವನ್ನು ಯಾರೋ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿರುವುದು ನಟನ ಭದ್ರತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸಣ್ಣ ವಿಡಿಯೋ ಕ್ಲಿಪ್‌ನಲ್ಲಿ, ಸಲ್ಮಾನ್ ಖಾನ್ ಅವರು ತಮ್ಮ ಆಪ್ತ ಸ್ನೇಹಿತರೊಂದಿಗೆ ಡೈನಿಂಗ್ ಟೇಬಲ್ ಬಳಿ ಕೂತು ಊಟ ಮಾಡುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ರೆಕಾರ್ಡ್ ಮಾಡಿರುವುದನ್ನು ಗಮನಿಸಿದರೆ ಯಾರೋ ಅವರಿಗೆ ತಿಳಿಯದೆ ರಹಸ್ಯವಾಗಿ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ವಿಡಿಯೋ ಯಾವ ಸ್ಥಳದಲ್ಲಿ, ಯಾರಿಂದ ಚಿತ್ರೀಕರಿಸಲಾಯಿತು ಎಂಬುದು ಇನ್ನೂ ನಿಗೂಢವಾಗಿದೆ.

ಸಲ್ಮಾನ್ ಖಾನ್ ಈಗಾಗಲೇ ಅನೇಕ ಭೂಗತ ಗ್ಯಾಂಗ್‌ಗಳ ಟಾರ್ಗೆಟ್ ಆಗಿರುವ ಹಿನ್ನೆಲೆಯಲ್ಲಿ, ಇವರ ಭದ್ರತೆ ಬಗ್ಗೆ ಕಾಳಜಿ ಹೆಚ್ಚಾಗಿದೆ. ಖಾಸಗಿತನ ಕದಡುವ ಈ ರೀತಿಯ ಚಿತ್ರೀಕರಣಗಳು ಭವಿಷ್ಯದಲ್ಲಿ ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಇನ್ನು ಅನೇಕ ಜನ, ರೆಕಾರ್ಡ್ ಮಾಡಿದ ವ್ಯಕ್ತಿಯ ಬಗ್ಗೆ ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ. ಯಾರು ಈ ವಿಡಿಯೋ ಚಿತ್ರೀಕರಿಸಿದರು? ಯಾವ ಉದ್ದೇಶಕ್ಕಾಗಿ? ಇದನ್ನು ಲೀಕ್ ಮಾಡಲು ಏಕೆ ಮುಂದಾದರು? ಹೀಗೆ ಅನೇಕ ಗಂಭೀರವಾದ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಇದು ಸಾಮಾನ್ಯ ವ್ಯಕ್ತಿಯ ವಿಷಯವಲ್ಲ, ದೇಶದ ದೊಡ್ಡ ತಾರೆಯೊಬ್ಬರ ಬಗ್ಗೆ. ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿರುವುದರಿಂದ ಕಾನೂನು ಕ್ರಮದ ಅಗತ್ಯತೆಯ ಬಗ್ಗೆ ಚರ್ಚೆ ಜೋರಾಗಿದೆ.

ಈ ಘಟನೆ ನಡೆಯುತ್ತಿರುವ ನಡುವೆ, ಸಲ್ಮಾನ್ ಖಾನ್ ತಮ್ಮ ವೃತ್ತಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಅವರು ಈಗಾಗಲೇ ಹೆಸರಿಡದ ಮಾಸ್ ಆಕ್ಷನ್ ಮನರಂಜನಾ ಚಿತ್ರ SVC63 ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ನಂತರ ರಾಜ್ ಮತ್ತು ಡಿಕೆ ನಿರ್ದೇಶನದ ಮತ್ತೊಂದು ಆಕ್ಷನ್ ಚಿತ್ರದಲ್ಲಿ ನಿವೃತ್ತ ಸೂಪರ್ ಹೀರೋ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವರದಿಗಳು ಬಂದಿವೆ. ಇನ್ನು ಸಲ್ಮಾನ್ ಖಾನ್ ನಟನೆಯ ಮಾತೃಭೂಮಿ ಚಿತ್ರದ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed