Important Update: 5 ತಾಸು ಓಡಾಟ ಬಂದ್‌, 7 ಕಿಲೋಮೀಟರ್‌ ಸುತ್ತಾಟ ಹೆಚ್ಚಳ; ಈ ದಿನ ಹೊರಗೆ ಹೋಗೋ ಮುನ್ನ ಜೋಪಾನ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಟ್ರಾಫಿಕ್‌ ಸಮಸ್ಯೆ


Last Updated:

ಮೇ 28ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಮಿಲ್ಲರ್ಸ್ ರಸ್ತೆ ಸುತ್ತ ವಾಹನ ಸಂಚಾರ, ಪಾರ್ಕಿಂಗ್ ತಾತ್ಕಾಲಿಕ ನಿಷೇಧ, ಪರ್ಯಾಯ ಮಾರ್ಗ ಬಳಕೆಗಾಗಿ ಸಾಹಿಲ್ ಬಾಗ್ಲಾ ಸಾರ್ವಜನಿಕರಿಗೆ ಮನವಿ

ಟ್ರಾಫಿಕ್‌ ಸಮಸ್ಯೆ
ಟ್ರಾಫಿಕ್‌ ಸಮಸ್ಯೆ

ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ವಾಹನ (Vehicle) ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಪ್ರಮುಖ ಸೂಚನೆಯೊಂದನ್ನು (Important Notice) ನೀಡಿದ್ದಾರೆ. ನಗರದ ಪುಲಿಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಮಿಲ್ಲರ್ಸ್ ರಸ್ತೆಯಲ್ಲಿರುವ (Road) ಖುದ್ದುಸಾಬ್ ಈದ್ಗಾ ಮೈದಾನದಲ್ಲಿ (ಓಲ್ಡ್ ಹಜ್ ಕ್ಯಾಂಪ್) ಹಬ್ಬದ ವಿಶೇಷ ಪ್ರಾರ್ಥನೆಗಳು (Prayer) ನಡೆಯಲಿವೆ.

ಸಾರ್ವಜನಿಕರ ಅವಗಾಹನೆಗೆ

ಈ ಸಂದರ್ಭದಲ್ಲಿ ಸಾರ್ವಜನಿಕರ ಮತ್ತು ವಾಹನ ಸವಾರರ ಸುಗಮ ಸಂಚಾರದ ಹಿತದೃಷ್ಟಿಯಿಂದ ಮೇ 28, 2026 ರಂದು ಈ ಭಾಗದ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದೆ. ಯಾವ ರಸ್ತೆಗಳಲ್ಲಿ ಸಂಚಾರ ಇರುವುದಿಲ್ಲ? ಎಲ್ಲೆಲ್ಲಿ ಪರ್ಯಾಯ ಮಾರ್ಗಗಳಿವೆ? ಇಲ್ಲಿದೆ ನೋಡಿ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ ಓದಿ.

ಬೆಂಗಳೂರು ನಗರದ ಸಂಚಾರದಲ್ಲಿ ಭಾರೀ ಬದಲಾವಣೆ

ಬೆಂಗಳೂರು ನಗರದ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಬರುವ ಮಿಲ್ಲರ್ಸ್ ರಸ್ತೆ ಸುತ್ತಮುತ್ತಲಿನ ಭಾಗಗಳಲ್ಲಿ ಮೇ 28, 2026ರ ಗುರುವಾರದಂದು ಬೆಳಗ್ಗೆ 07:00 ಗಂಟೆಯಿಂದ ಮಧ್ಯಾಹ್ನ 12:00 ಗಂಟೆಯವರೆಗೆ ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪ್ರಾರ್ಥನೆಯ ಸಮಯ ಮುಗಿಯುವವರೆಗೆ ಮಿಲ್ಲರ್ಸ್ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಒಟ್ಟು ಮೂರು ಪ್ರಮುಖ ಮಾರ್ಗಗಳಲ್ಲಿ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
3 ಕಡೆಯಿಂದ ಬರುವ ವಾಹನಗಳಿಗೆ ಬ್ರೇಕ್

ಮೊದಲನೆಯದಾಗಿ, ಓಲ್ಡ್ ಉದಯ ಟಿವಿ ಜಂಕ್ಷನ್‌ನಿಂದ ಮಿಲ್ಲರ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಗೆ ಹೋಗುವ ವಾಹನಗಳನ್ನು ನಿರ್ಬಂಧಿಸಲಾಗಿದೆ. ಎರಡನೆಯದಾಗಿ, ಹೇನ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಯಿಂದ ಮಿಲ್ಲರ್ಸ್ ರಸ್ತೆ ಹಾಗೂ ನಂದಿದುರ್ಗ ರಸ್ತೆ ಕಡೆಗೆ ಹೋಗುವ ವಾಹನಗಳಿಗೆ ಪ್ರವೇಶವಿರುವುದಿಲ್ಲ. ಮೂರನೆಯದಾಗಿ, ನಂದಿದುರ್ಗ ರಸ್ತೆಯಿಂದ ಮಿಲ್ಲರ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಗೆ ಸಂಚರಿಸುವ ವಾಹನಗಳಿಗೆ ನಿಷೇಧ ಹೇರಲಾಗಿದೆ.‌

ಯಾವ ಮಾರ್ಗದಲ್ಲಿ ಓಡಾಡಬೇಕು?

ಈ ಹಿನ್ನೆಲೆಯಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಲಾಗಿದ್ದು, ಓಲ್ಡ್ ಉದಯ ಟಿವಿ ಜಂಕ್ಷನ್‌ನಿಂದ ಮಿಲ್ಲರ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಗೆ ಹೋಗುವ ಚಾಲಕರು ಜಂಕ್ಷನ್ ಬಳಿ ಬಲತಿರುವು ಪಡೆದು, ಬಂಬೂ ಬಜಾರ್ ಜಂಕ್ಷನ್ ತಲುಪಿ, ನೇತಾಜಿ ರಸ್ತೆ ಮೂಲಕ ಸಂಚರಿಸಬೇಕಾಗುತ್ತದೆ. ನಂತರ ಪ್ರಾಮಿನೆಂಡ್ ರಸ್ತೆ ಬಳಿ ಬಲತಿರುವು ಪಡೆದು ಹೇನ್ಸ್ ರಸ್ತೆಯಲ್ಲಿ ಸಂಚರಿಸಿ, ಮತ್ತೊಮ್ಮೆ ಬಲತಿರುವು ಪಡೆಯುವ ಮೂಲಕ ಸೇಂಟ್ ಜಾನ್ಸ್ ಚರ್ಚ್ ರಸ್ತೆ ತಲುಪಬಹುದು.

ಯಾವೆಲ್ಲಾ ರಸ್ತೆಗಳ ಪ್ರಯಾಣ ಅನುಕೂಲ?

ಇನ್ನು ಹೇನ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಯಿಂದ ಮಿಲ್ಲರ್ಸ್ ರಸ್ತೆ ಹಾಗೂ ನಂದಿದುರ್ಗ ರಸ್ತೆ ಕಡೆಗೆ ಹೋಗುವ ವಾಹನಗಳು ಬಂಬೂ ಬಜಾರ್ ಸರ್ವಿಸ್ ರಸ್ತೆ ಮೂಲಕ ಕಂಟೋನ್ಮೆಂಟ್ ರಸ್ತೆಯನ್ನು ಸೇರಬೇಕು. ಅಲ್ಲಿಂದ ಎಡತಿರುವು ಪಡೆದು, ನಂತರ ಕ್ವೀನ್ಸ್ ರಸ್ತೆಯಲ್ಲಿ ಬಲತಿರುವು ಪಡೆದು ಓಲ್ಡ್ ಉದಯ ಟಿವಿ ಜಂಕ್ಷನ್ ತಲುಪಬೇಕು. ಬಳಿಕ ಅಲ್ಲಿ ಬಲತಿರುವು ಪಡೆದು ಜಯಮಹಲ್ ರಸ್ತೆಯ ಮೂಲಕ ತಮ್ಮ ಗಮ್ಯಸ್ಥಾನ ತಲುಪಲು ಅವಕಾಶವಿದೆ.

ಈ ಮಾರ್ಗವನ್ನೇ ಅನುಸರಿಸಿ

ಅದೇ ರೀತಿ ನಂದಿದುರ್ಗ ರಸ್ತೆ ಕಡೆಯಿಂದ ಮಿಲ್ಲರ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಗೆ ಬರುವ ವಾಹನಗಳು ನಂದಿದುರ್ಗ ರಸ್ತೆಯಲ್ಲಿ ಎಡತಿರುವು ಪಡೆದು, ಬೆನ್ಸನ್ ಕ್ರಾಸ್ ರಸ್ತೆಯಲ್ಲಿ ಮತ್ತೊಮ್ಮೆ ಎಡತಿರುವು ಪಡೆದು ಸಾಗಬೇಕು. ನಂತರ ಬೋರ್ ಬ್ಯಾಂಕ್ ರಸ್ತೆ ಜಿ.ಕೆ ವೇಲ್ ಜಂಕ್ಷನ್ ಬಳಿ ಬಲತಿರುವು ಪಡೆದು, ಹೇನ್ಸ್ ರಸ್ತೆಯ ಮೂಲಕ ಮಿಲ್ಲರ್ಸ್ ರಸ್ತೆ ಮತ್ತು ಸೇಂಟ್ ಜಾನ್ಸ್ ಚರ್ಚ್ ರಸ್ತೆ ಕಡೆಗೆ ಸಂಚರಿಸಬಹುದಾಗಿದೆ.

ಪೊಲೀಸ್‌ ಇಲಾಖೆ ಹೇಳಿದ್ದೇನು?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed