Last Updated:
ಸಾನ್ಯ ಅಯ್ಯರ್ ರಾಪ್ ಲುಕ್ ಸಖತ್ ಆಗಿಯೇ ಇದೆ. ಎರಡು ಪ್ಲೇಟ್ ದೋಸೆ ಅನ್ನುವ ರಾಪ್ ವಿಡಿಯೋದಲ್ಲಿಯೆ ಸಾನ್ಯ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಈ ಸಾಂಗ್ ಶೂಟಿಂಗ್ ಸಮಯದಲ್ಲಿ ತೆಗೆದ ಫೋಟೋಗಳನ್ನ ಇಲ್ಲಿ ಹಂಚಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸಾನ್ಯ ಅಯ್ಯರ್ (Saanya Iyer) ಸದ್ಯ ಯಾವುದೇ ಸಿನಿಮಾ ಮಾಡ್ತಿಲ್ಲ. ಗೌರಿ ಚಿತ್ರ (Gowri Movie) ಆದ್ಮೇಲೆ ಮತ್ತೊಂದು ಚಿತ್ರ ಒಪ್ಪಿರೋ ಸುದ್ದಿನೂ ಇಲ್ಲ. ಆದರೆ, ಫೋಟೋ ಶೂಟ್ ಮತ್ತು ರಾಂಪ್ ವಾಕ್ ಅಂತ ಬ್ಯುಸಿ ಇರ್ತಾರೆ. ಇದರ ನಡುವೆ ಕಳೆದ ಒಂದು ತಿಂಗಳ ಹಿಂದೆ “ಎರಡು ಪ್ಲೇಟ್ ದೋಸೆ” (Yerd Plate Dose) ಅನ್ನುವ ಒಂದು ಕನ್ನಡ ರಾಪ್ ಸಾಂಗ್ ಮಾಡಿದ್ದರು. ಇದರಲ್ಲಿ ರಾಪರ್ ಗುಬ್ಬಿ ಇದ್ದರು. ಇವರೇ ಇಡೀ ಹಾಡಲ್ಲಿ ರಾಪ್ ಮಾಡಿದ್ದರು. ಇವರ ಮೇಲೇನೆ ಇಡೀ ಹಾಡಿದೆ. ಸಾನ್ಯ ಅಯ್ಯರ್ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಯುಟ್ಯೂಬ್ ಅಲ್ಲೂ ಇದನ್ನ ನೋಡಬಹುದು. ಆದರೆ, ಒಂದು ತಿಂಗಳ ಬಳಿಕ ಸಾನ್ಯ ಅಯ್ಯರ್ ಈ ಒಂದು ರಾಪ್ ಸಾಂಗ್ (Rap Song) ವಿಡಿಯೋದ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಇವುಗಳ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಹಳೆ ಫೋಟೋ ಈಗ ಶೇರ್
(ಚಿತ್ರ ಕೃಪೆ: ಸಾನ್ಯ ಅಯ್ಯರ್ ಇನ್ಸ್ಟಾಗ್ರಾಮ್)
ದಕ್ಷಿಣದ ಹುಡುಗಿಯರು ಬ್ಯಾಡೀಸ್ ಅನ್ನುವ ಒಂದು ಲೈನ್ ಬರುತ್ತದೆ. ಆ ಸಾಲು ಬಂದಾಗ ಸಾನ್ಯ ಅಯ್ಯರ್ ಮೇಲೆ ಕ್ಯಾಮರಾ ಫೋಕಸ್ ಆಗುತ್ತದೆ. ಬ್ಯಾಡ್ ಗರ್ಲ್ಸ್ ಹೇಗೆ ಇರ್ತಾರೋ ಆ ಲುಕ್ ಅಲ್ಲಿಯೇ ಸಾನ್ಯ ಅಯ್ಯರ್ ಇಲ್ಲಿ ಕಾಣಿಸಿಕೊಂಡಿದ್ದಾರೆ ಅನಿಸುತ್ತದೆ.
ಸಾನ್ಯ ಅಯ್ಯರ್ ಒಂದು ತಿಂಗಳ ಹಿಂದೆ ತೆಗೆದಿರೋ ಫೋಟೋಗಳು ಇಲ್ಲಿವೆ. ಎರಡು ಪ್ಲೇಟ್ ದೋಸೆ ರಾಪ್ ಸಾಂಗ್ನ ಸಮಯದಲ್ಲಿಯೇ ತೆಗೆದ ಫೋಟೋಗಳೇ ಇವಾಗಿದೆ.
ಯಾಕೆಂದ್ರೆ, ಫೋಟೋದಲ್ಲಿರೋ ಲುಕ್ ಮತ್ತು ರಾಂಪ್ ಸಾಂಗ್ ವಿಡಿಯೋದಲ್ಲಿರೊ ಲುಕ್ ಎರಡೂ ಒಂದೇ ಆಗಿದೆ. ಹಾಗೆ ಈ ಒಂದಷ್ಟು ಫೋಟೋಗಳ ಜೊತೆಗೆ ಸಾನ್ಯ ಅಯ್ಯರ್ ಈ ಹಾಡಿನ ಕುರಿತು ಬರೆದುಕೊಂಡಿದ್ದಾರೆ.
ಸಾನ್ಯ ಅಯ್ಯರ್ ಅಭಿನಯದ ಎರಡು ಪ್ಲೇಟ್ ದೋಸೆ ಹಾಡು ಇನ್ನು ಓಡುತ್ತಿದೆ. ಎಲ್ಲ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಲ್ಲಿ ಇದು ಲಭ್ಯವಿದೆ.
ಒಂದು ತಿಂಗಳಾದರೂ
(ಚಿತ್ರ ಕೃಪೆ: ಸಾನ್ಯ ಅಯ್ಯರ್ ಇನ್ಸ್ಟಾಗ್ರಾಮ್)
ಇದು ಯುಟ್ಯೂಬ್ ಅಲ್ಲೂ ಇದೆ. ಹೋಗಿ ನೋಡಿ ಅಂತಲೂ ಸಾನ್ಯ ಅಯ್ಯರ್ ಹೇಳಿಕೊಂಡಿದ್ದಾರೆ. ಈ ಹಾಡಿನಲ್ಲಿ ಸಾನ್ಯ ಅಯ್ಯರ್ ಹಾಗೂ ರಾಪರ್ ಗುಬ್ಬಿ ಕೂಡ ಇದ್ದಾರೆ.
ಸಾನ್ಯ ಬರೆದಿರೋದು ಹಿಂಗಿದೆ
ಸಾನ್ಯ ಅಯ್ಯರ್ ತಾವು ಅಭಿನಯಸಿರೋ ರಾಪ್ ಸಾಂಗ್ ಬಗ್ಗೆ ಹೀಗೆ ಬರೆದುಕೊಂಡಿದ್ದಾರೆ. ಅದನ್ನ ತಮ್ಮದೇ ರೀತಿಯಲ್ಲಿಯೇ ಪ್ರಮೋಟ್ ಕೂಡ ಮಾಡಿದ್ದಾರೆ.
ಸಾನ್ಯ ಅಯ್ಯರ್ ಸೀರೆಯಲ್ಲೂ ಚೆಂದ ಕಾಣಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚಿಗೆ ಟೈಮ್ಸ್ ಫ್ಯಾಷನ್ ವೀಕ್ ಇತ್ತು. ಇಲ್ಲಿ ಸೀರೆಯುಟ್ಟು ಸಾನ್ಯ ವಾಕ್ ಮಾಡಿದ್ದರು.
ಈ ಒಂದು ಕ್ಷಣದ ವಿಡಿಯೋವನ್ನು ಸಾನ್ಯ ಅಯ್ಯರ್ ಹಂಚಿಕೊಂಡಿದ್ದರು. ರಾಂಪ್ ವಾಕ್ ಮುಂಚೆ ಸಾನ್ಯ ಅಯ್ಯರ್ ಹೇಗೆಲ್ಲ ರೆಡಿ ಆಗಿದ್ದಾರೆ ಅನ್ನೋದನ್ನೆ ಈ ಒಂದು ವಿಡಿಯೋ ಹೇಳುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 10, 2026 10:03 PM IST














