S.S. Rajamouli:ಪ್ಯಾರೀಸ್ ಥಿಯೇಟರ್‌ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್‌ಗೆ ವಿಶೇಷ ಗೌರವ! | | ACTPnews

ಪ್ಯಾರೀಸ್ ಥಿಯೇಟರ್‌ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್‌ಗೆ ವಿಶೇಷ ಗೌರವ!


Last Updated:

ಡೈರೆಕ್ಟರ್ ರಾಜಮೌಳಿ ಅವರಿಗೆ ಪ್ಯಾರೀಸ್ ಅಲ್ಲಿ ವಿಶೇಷ ಗೌರವ ಸಂದಿದೆ. ಸತ್ಯಜಿತ್ ರೇ ಆದ್ಮೇಲೆ ಇವರಿಗೆ ಈ ಸಮ್ಮಾನ ಸಿಕ್ಕಿದೆ. ಇಲ್ಲಿಯ ಪ್ರಸಿದ್ಧ ಚಿತ್ರಮಂದಿರದಲ್ಲಿ ರಾಜಮೌಳಿ ಹೆಸರಿನಲ್ಲಿ ಒಂದು ಸೀಟ್ ಮೀಸಲಿಡಲಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪ್ಯಾರೀಸ್ ಥಿಯೇಟರ್‌ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್‌ಗೆ ವಿಶೇಷ ಗೌರವ!
ಪ್ಯಾರೀಸ್ ಥಿಯೇಟರ್‌ ಅಲ್ಲಿ ಖಾಯಂ ಸೀಟ್; ಬಾಹುಬಲಿ ಡೈರೆಕ್ಟರ್‌ಗೆ ವಿಶೇಷ ಗೌರವ!

ರಾಜಮೌಳಿ (Rajamouli) ಅವರ ಚಿತ್ರಗಳನ್ನ ಪ್ಯಾರೀಸ್ (Paris) ಅಲ್ಲಿ ಪ್ರದರ್ಶನ ಮಾಡಿದ್ದಾರೆ. ಈಗ, (Eega) ಬಾಹುಬಲಿ, (Baahubali) ಟ್ರಿಪಲ್ ಆರ್ ಚಿತ್ರಗಳನ್ನ ಪ್ಯಾರೀಸ್‌ನ ಪ್ರಸಿದ್ಧ ಥಿಯೇಟರ್ ಅಲ್ಲಿ ಪ್ರದರ್ಶನ ಮಾಡಿದ್ದಾರೆ. ಚಿತ್ರಗಳನ್ನ ಇಲ್ಲಿ ಪ್ರದರ್ಶನ ಮಾಡಿರೋದೇ ಹೆಚ್ಚು. ಆದರೆ, ಇದೇ ಥಿಯೇಟರ್ ಅಲ್ಲಿ ನನಗಾಗಿ ಒಂದು ಸೀಟ್ ಮೀಸಲಿಟ್ಟಿರೋದು ನಿಜಕ್ಕೂ ಒಂದು ‘ಸಹಿಯಾದ ಆಶ್ಚರ್ಯ’ ಅಂತಲೇ ರಾಜಮೌಳಿ ಬರೆದುಕೊಂಡಿದ್ದಾರೆ. ಈ ಕ್ಷಣದ ಕೆಲವು ಫೋಟೋ ಕೂಡ ಹಂಚಿಕೊಂಡಿದ್ದಾರೆ. ಈ ವಿಶೇಷ ಗೌರವದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪ್ಯಾರೀಸ್ ವಿಶ್ವ ಪ್ರಸಿದ್ಧ ಥಿಯೇಟರ್

ರಾಜಮೌಳಿ ಅವರ ಈಗ ಚಿತ್ರ, ಬಾಹುಬಲಿ ಚಿತ್ರ ಹಾಗೂ ಟ್ರಿಪಲ್ ಆರ್ ಚಿತ್ರವನ್ನ ಫ್ರಾನ್ಸ್‌ನ ವಿಶ್ವ ಪ್ರಸಿದ್ಧ ಥಿಯೇಟರ್ ಅಲ್ಲಿ ಪ್ರದರ್ಶನ ಮಾಡಲಾಗಿದೆ.
SS Rajamouli honored with permanent theater seat at cinematheque franchise in Paris

ಇದು ‘ಸಿಹಿಯಾದ ಆಶ್ಚರ್ಯ’ (ಚಿತ್ರ ಕೃಪೆ: ಎಸ್.ಎಸ್.ರಾಜಮೌಳಿ ಇನ್‌ಸ್ಟಾಗ್ರಾಮ್)

ಇದೇ ಥಿಯೇಟರ್ ಅಲ್ಲಿಯೇ ರಾಜಮೌಳಿ ಅವರ ಹೆಸರಿನಲ್ಲಿಯೇ ಒಂದು ಸೀಟ್ ಕೂಡ ಮೀಸಲಿಟ್ಟಿದ್ದಾರೆ. ಇದು ಇವರಿಗೆ ಇಲ್ಲಿ ಸಿಕ್ಕ ಅತ್ಯಂತ ದೊಡ್ಡ ಗೌರವವೇ ಆಗಿದೆ.

ಇದು ‘ಸಿಹಿಯಾದ ಆಶ್ಚರ್ಯ’

ರಾಜಮೌಳಿ ಅವರಿಗೆ ಆಶ್ವರ್ಯವೂ ಆಗಿದೆ. ಇದನ್ನ ಅವರು ‘Sweet Surprise’ ಅಂತಲೇ ಬಣ್ಣಿಸಿದ್ದಾರೆ. ಈ ಒಂದು ಥಿಯೇಟರ್ ಅಲ್ಲಿ ನನ್ನ ಚಿತ್ರಗಳನ್ನ ಪ್ರದರ್ಶನ ಮಾಡೋದೇ ಅತಿ ದೊಡ್ಡ ವಿಷಯವೇ ಆಗಿದೆ.

ಆದರೆ, ಇಲ್ಲಿ ನನ್ನ ಹೆಸರಿನಲ್ಲಿಯೇ ಒಂದು ಆಸನ ಮೀಸಲಿಟ್ಟಿರೋದು ತುಂಬಾನೆ ದೊಡ್ಡ ಗೌರವವಾಗಿದೆ ಅಂತಲೇ ರಾಜಮೌಳಿ ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ.

ಸತ್ಯಜಿತ್ ರೇ ಸಿಕ್ಕಿತ್ತು ಗೌರವ

ಭಾರತ ಚಿತ್ರರಂಗದ ಮಹಾನ್ ನಿರ್ದೇಶಕ ಸತ್ಯಜಿತ್ ರೇ ಅವರಿಗೆ ಈ ಗೌರವ ಸಿಕ್ಕಿದೆ. ಇವರು ಈ ಗೌರವ ಪಡೆದ ಮೊದಲ ಭಾರತದ ಡೈರೆಕ್ಟರ್ ಆಗಿದ್ದರು. ಇದೀಗ ರಾಜಮೌಳಿ ಅವರಿಗೆ ಈ ಒಂದು ಗೌರವ ಸಲ್ಲಿಲಾಗಿದೆ. ಇವರು ಎರಡನೇ ಅವರಾಗಿದ್ದಾರೆ.

SS Rajamouli honored with permanent theater seat at cinematheque franchise in Paris

ಕೋಸ್ಟಾ ಗ್ರವಾಸ್ ಖುಷಿ

(ಚಿತ್ರ ಕೃಪೆ: ಎಸ್.ಎಸ್.ರಾಜಮೌಳಿ ಇನ್‌ಸ್ಟಾಗ್ರಾಮ್)

ರಾಜಮೌಳಿ ಅವರ ಚಿತ್ರಗಳ ಕ್ರೇಜ್ ಇಲ್ಲಿ ಬಲು ಜೋರಾಗಿಯೇ ಇದೆ. ಹಾಗೆ ಪ್ಯಾರೀಸ್ ಅಲ್ಲಿರೋ ಸಿನಿಮಾ ಪ್ರೇಮಿಗಳು ರಾಜಮೌಳಿ ಅವರ ಚಿತ್ರಗಳನ್ನ ನೋಡಿದ್ದಾರೆ. ವೀಕ್ಷಿಸಿ ತುಂಬಾನೆ ಖುಷಿಪಟ್ಟಿದ್ದಾರೆ.

ಕೋಸ್ಟಾ ಗ್ರವಾಸ್ ಖುಷಿ

ಫ್ರೆಂಚ್ ಡೈರೆಕ್ಟರ್ ಕೋಸ್ಟಾ ಗ್ರವಾಸ್ ಅವರಿಗೆ ಇದೀಗ 93 ವರ್ಷ ನೋಡಿ. ಆದರೆ, ಇವರು ರಾಜಮೌಳಿ ಅವರ ಚಿತ್ರಗಳನ್ನ 8 ಗಂಟೆಗಳ ಕಾಲ ಕುಳಿತು ನೋಡಿ ಖುಷಿಪಟ್ಟಿದ್ದಾರೆ. ಪ್ರಶಂಸೆ ಕೂಡ ವ್ಯಕ್ತಪಡಿಸಿದ್ದಾರೆ.

ರಾಜಮೌಳಿ ಅವರಿಗೆ ಇಲ್ಲಿ ಈಗಾಗಲೇ ಹೇಳಿದಂತೆ ವಿಶೇಷ ಗೌರವ ಸಿಕ್ಕಿದೆ. ಪ್ಯಾರೀಸ್‌ನ ಸಿನಿಮಾಥೆಕ್ ಫ್ರಾಂಚೈಸ್ ಜಾಗತಿಕ ಚಲನಚಿತ್ರ ಸಂಸ್ಥೆ ಇಲ್ಲಿ ರಾಜಮೌಳಿ ಅವರಿಗೆ ಈ ಗೌರವ ಕೊಟ್ಟಿದೆ. ಇದು ವಿಶ್ವದ ಅತಿ ದೊಡ್ಡ ಹಾಗೂ ಹಳೆ ಚಿತ್ರಗಳ ಆರ್ಕೈವ್ ಕೂಡ ಆಗಿದೆ. ಈ ಒಂದು ಥಿಯೇಟರ್ ಅಲ್ಲಿ ಒಂದು ಸೀಟ್ ಇವರ ಹೆಸರಲ್ಲಿ ಮೀಸಲು ಕೂಡ ಇಟ್ಟಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports