S Janaki: ಜಾನಕಿ ಅಂತಿಮ ದರ್ಶನ ಪಡೆದ ಹಂಸಲೇಖ ಮಹತ್ವದ ಘೋಷಣೆ | Hamsalekha announces to build memorial of s janaki if family permits | | ACTPnews

ಹಂಸಲೇಖ-ಜಾನಕಿ


Last Updated:

S Janaki: ಜಾನಕಿ ಅವರಿಗೆ ಧ್ಯಾನ ಮಂಟಪ ನಿರ್ಮಿಸುವ ಬಗ್ಗೆ ಹಂಸಲೇಖ ಹೇಳಿದ್ದೇನು? ಅವರ ಮಾತುಗಳೇನು? ಇಲ್ಲಿ ಓದಿ.

ಹಂಸಲೇಖ-ಜಾನಕಿ
ಹಂಸಲೇಖ-ಜಾನಕಿ

ಗಾನ ಕೋಗಿಲೆ ಹಾಡು ನಿಲ್ಲಿಸಿಯಾಗಿದೆ. ಭಾರತೀಯ ಸಂಗೀಯ ಲೋಕಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. ಬಹು ಭಾಷೆಗಳಲ್ಲಿ ಹಾಡಿ ಸಂಗೀತ ಪ್ರಿಯರ ಕಣ್ಮಣಿಯಾಗಿದ್ದ ಎಸ್ ಜಾನಕಿ (S Janaki) ಅವರು ನಿಧನರಾಗಿದ್ದಾರೆ. ಈಗ ಅವರ ಹಳೆಯ ಸಂದರ್ಶನ ವಿಡಿಯೋಗಳು ವೈರಲ್ ಆಗುತ್ತಿವೆ. ಹಿಂದೊಮ್ಮೆ ಅವರು ಬಾಯ್​ಫ್ರೆಂಡ್ ಬಗ್ಗೆ ಮಾತನಾಡಿದ್ದು ನಿಮಗೆ ಗೊತ್ತಾ?

ಖ್ಯಾತ ಗಾಯಕ ಹಂಸಲೇಖ ಅವರು ಜಾನಕಿ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಅವರು ಎಸ್ ಜಾನಕಿ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

ಮೈಸೂರು ಅಂದರೆ ಸಂಗೀತದ ಪರಂಪರೆ ಇರೋದು. ಸುಮಾರು ಐದಾರು ವರ್ಷಗಳ ಹಿಂದೆ ಜಾನಕಮ್ಮ‌ ಕಡೆಯ ದಿನಗಳು ಅಂದಿದ್ದರು. ನನ್ನ ಕಡೆ ದಿನಗಳು ಮೈಸೂರಿನಲ್ಲಿ ಇರಬೇಕು ಅಂದಿದ್ದರು. ಅವರದ್ದು ಪರಿಪೂರ್ಣ ಜೀವನ 88 ವರ್ಷಗಳು ಅವರಿಗೆ ಎಂದಿದ್ದಾರೆ.

ಜಾನಕಮ್ಮನವರು ಕೂಡ ದೈವ ಭಕ್ತರು. ಸಂಗೀತಕ್ಕೆ ಸಕಲ ದೈವಗಳು. ಆರು ದಶಕಗಳ ಕಾಲ ವೃತ್ತಿ ಜೀವನ ಪಾಲಿಸಿದ್ದಾರೆ. ಎಲ್ಲಾ ಧರ್ಮಗಳು ಅವರು ಪ್ರಿಯವೇ. ಅಂತಹವರು ಇವತ್ತು ಮಣ್ಣಾಗಿದ್ದಾರೆ. ಜಾನಕಮ್ಮನ ಧ್ಯಾನ ಮಂಟಪವನ್ನು ನಿರ್ಮಿಸುತ್ತೇವೆ. ಅವರ ಕುಟುಂಬದವರು ಒಪ್ಪಿದರೆ ಧ್ಯಾನ ಮಂಟಪ ಮಾಡುತ್ತೇವೆ, ಸರ್ಕಾರ ಕೂಡ ಇದಕ್ಕೆ ಕೈ ಜೋಡಿಸಬೇಕು. ಅಂತ್ಯ ಸಂಸ್ಕಾರದ ಜಾಗದಲ್ಲಿ ಧ್ಯಾನಮಂಟಪ ಮಾಡುತ್ತೇವೆ. ಇದಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ರೆ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: S Janaki: ಮೈಸೂರಲ್ಲಿ ಜಾನಕಿ ಅವರಿಗಿದ್ದ ಒಬ್ಬನೇ ಒಬ್ಬ ಬಾಯ್​ಫ್ರೆಂಡ್, ಯಾರದು ಗೊತ್ತಾ?

ಎಸ್.ಜಾನಕಿ ಸ್ಮಾರಕ ನಿರ್ಮಿಸಲು ಹಂಸಲೇಖ ಮನವಿ ಮಾಡಿದ್ದು ಫಿಲಂ ಚೇಂಬರ್ ಅದ್ಯಕ್ಷೆ ಜಯಮಾಲ ಅವರಿಗೆ ಮನವಿ ಮಾಡಿದರು. ವೀಡಿಯೋ ಮೂಲಕ ಮನವಿ ಮಾಡಿಕೊಂಡ ಹಂಸಲೇಖ ಜಾನಕಿ ಎಂದರೆ ಸೀತೆ. ಸೀತೆ ಅಂದರೆ ನಮಗೆ ಗೀತೆ. ಅವರ ಆಸೆ ಕರುನಾಡಿನಲ್ಲಿರೋದಾಗಿತ್ತು. ಅದಕ್ಕೆ ದಯಮಾಡಿ ಸ್ಮಾರಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಲು ಮನವಿ ಮಾಡಿದ್ದಾರೆ.

ವರದಿ: ಮುನಿರಾಜು ಕೆಜಿ, ಆನಂದ್ ಸಾಲುಂಡಿ, ನ್ಯೂಸ್​18 ಕನ್ನಡ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed