S Janaki: ಆ ಸ್ಟಾರ್ ನಟಿಯ ಸಿನಿಮಾಗಳಿಗೆ ಹಾಡಬಾರದೆಂದು ನಿರ್ಧರಿಸಿದ್ದ ಎಸ್. ಜಾನಕಿ! ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ | | ACTPnews

ಎಸ್. ಜಾನಕಿ


Last Updated:

ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದರೂ, ತಮ್ಮ ಸ್ವಾಭಿಮಾನ ಅಂತ ವಿಷ್ಯ ಬಂದಾಗ ಎಸ್ ಜಾನಕಿ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ

ಎಸ್. ಜಾನಕಿ
ಎಸ್. ಜಾನಕಿ

ಭಾರತೀಯ ಸಂಗೀತ ಲೋಕದ ಗಾನಕೋಗಿಲೆ ಎಸ್. ಜಾನಕಿ (S Janaki) ಅವರ ಗಾಯನ ಪಯಣದಲ್ಲಿ ಅನೇಕ ಅಪರೂಪದ ಘಟನೆಗಳು ನಡೆದಿವೆ. ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದರೂ, ತಮ್ಮ ಸ್ವಾಭಿಮಾನ ಅಂತ ವಿಷ್ಯ ಬಂದಾಗ ಅವರು ಎಂದಿಗೂ ರಾಜಿ ಮಾಡಿಕೊಂಡವರಲ್ಲ. ತೆಲುಗು ಚಿತ್ರರಂಗದ ದಿಗ್ಗಜ ನಟಿ ಸಾವಿತ್ರಿ ಅವರ ಸಿನಿಮಾಗಳಿಗೆ ಹಾಡುವುದಿಲ್ಲ ಎಂದು ಅವರು ಒಮ್ಮೆ ನಿರ್ಧರಿಸಿದ್ದ ಘಟನೆ ಇಂದಿಗೂ ಸಿನಿರಂಗದಲ್ಲಿ ಚರ್ಚೆಯಾಗುತ್ತದೆ.

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ನಟಿ ಸಾವಿತ್ರಿ ಸೂಪರ್ ಸ್ಟಾರ್ ಆಗಿದ್ದ ಸಮಯದಲ್ಲಿ ಅವರ ಸಿನಿಮಾಗಳಿಗೆ ಹೆಚ್ಚಾಗಿ ಪಿ. ಸುಶೀಲಾ ಹಾಡುತ್ತಿದ್ದರು. ವಿಶೇಷವಾಗಿ ಪಿ. ಸುಶೀಲಾ ಅವರ ಧ್ವನಿ ತಮ್ಮ ಅಭಿನಯ ಮತ್ತು ಹಾವಭಾವಗಳಿಗೆ ಹೊಂದುತ್ತದೆ ಎಂಬ ನಂಬಿಕೆ ಸಾವಿತ್ರಿ ಅವರಲ್ಲಿತ್ತು.

ಈ ಕಾರಣದಿಂದಾಗಿ ತಮ್ಮ ಸಿನಿಮಾಗಳಲ್ಲಿ ಸಾಧ್ಯವಾದಷ್ಟು ಪಿ. ಸುಶೀಲಾ ಅವರೇ ಹಾಡಬೇಕು ಎಂಬ ಅಭಿಪ್ರಾಯವನ್ನು ಅವರು ಹೊಂದಿದ್ದರು ಎಂದು ಹಲವು ಸಂದರ್ಶನಗಳಲ್ಲಿ ಎಸ್. ಜಾನಕಿ ಸ್ವತಃ ಹೇಳಿಕೊಂಡಿದ್ದರು.

ರೆಕಾರ್ಡಿಂಗ್ ಕೂಡ ಯಶಸ್ವಿಯಾಗಿ ಪೂರ್ಣಗೊಂಡಿತ್ತು. ಹಾಡು ಎಲ್ಲರ ಮೆಚ್ಚುಗೆಯನ್ನೂ ಗಳಿಸಿತ್ತು. ಆದರೆ ನಂತರ ಆ ಹಾಡನ್ನು ಚಿತ್ರದಲ್ಲಿ ಬಳಸದೆ, ಪಿ. ಸುಶೀಲಾ ಅವರಿಂದ ಮತ್ತೊಮ್ಮೆ ಹಾಡಿಸಿಸಲಾಯಿತು ಎಂದು ಎಸ್. ಜಾನಕಿ ತಿಳಿಸಿದ್ದರು.

ಈ ಘಟನೆ ಬಳಿಕ ಸಾವಿತ್ರಿ ಅಭಿನಯಿಸುವ ಸಿನಿಮಾಗಳಿಗೆ ಹಾಡುವುದಿಲ್ಲ ಎಂದು ಎಸ್. ಜಾನಕಿ ದೃಢ ನಿರ್ಧಾರ ಮಾಡಿದ್ದರು. ತಮ್ಮ ನಿರ್ಧಾರವನ್ನು ಅವರು ಹಲವು ವರ್ಷಗಳ ಕಾಲ ಬದಲಾಯಿಸಲಿಲ್ಲ.

ಒಂದು ಸಂದರ್ಶನದಲ್ಲಿ ಎಸ್. ಜಾನಕಿ ಮತ್ತೊಂದು ಆಸಕ್ತಿದಾಯಕ ಘಟನೆಯನ್ನು ಹಂಚಿಕೊಂಡಿದ್ದರು. ನೀ ಲೀಲ ಪಾಡೇದ ಎಂಬ ಹಾಡನ್ನು ಹಾಡುವಂತೆ ತಮ್ಮನ್ನು ಸಂಪರ್ಕಿಸಿದಾಗ, ಅದು ಸಾವಿತ್ರಿ ಅವರ ಸಿನಿಮಾ ಎಂದು ತಿಳಿದ ತಕ್ಷಣ ಹಾಡಲು ನಿರಾಕರಿಸಿದ್ದರಂತೆ.

ಸುಮಾರು ಮೂರು ತಿಂಗಳ ಕಾಲ ಅವರು ಆ ಹಾಡನ್ನು ಹಾಡದೇ ತಡೆಹಿಡಿದಿದ್ದರು. ನಂತರ ನಿರ್ದೇಶಕರು ಮತ್ತು ನಿರ್ಮಾಪಕರು ಆ ಹಾಡಿನಲ್ಲಿ ಸಾವಿತ್ರಿ ನಟಿಸುವುದಿಲ್ಲ ಎಂದು ಭರವಸೆ ನೀಡಿದ ಬಳಿಕವೇ ಅವರು ಹಾಡಲು ಒಪ್ಪಿಕೊಂಡಿದ್ದರು.

ಆದರೆ ಸಿನಿಮಾ ಬಿಡುಗಡೆಯಾದಾಗ ಆ ಹಾಡಿನಲ್ಲಿ ಸಾವಿತ್ರಿಯೇ ಅಭಿನಯಿಸಿದ್ದನ್ನು ನೋಡಿ ತಮಗೆ ಅಚ್ಚರಿಯಾಯಿತು ಎಂದು ಎಸ್. ಜಾನಕಿ ನೆನಪಿಸಿಕೊಂಡಿದ್ದರು.

ಎಸ್. ಜಾನಕಿ ಅವರಿಗೆ ಸಾವಿತ್ರಿ ಅವರ ಬಗ್ಗೆ ಯಾವುದೇ ವೈಯಕ್ತಿಕ ವಿರೋಧ ಇರಲಿಲ್ಲ. ಅವರ ಪ್ರತಿಭೆ ಮತ್ತು ಸಾಧನೆಯ ಬಗ್ಗೆ ಅಪಾರ ಗೌರವವಿತ್ತು.

ಆದರೆ ಗಾಯಕಿಯಾಗಿ ತಮ್ಮೊಂದಿಗೆ ನಡೆದ ಘಟನೆ ಅವರನ್ನು ನೋಯಿಸಿತ್ತು. ಇದೇ ಕಾರಣದಿಂದ ಅವರು ತಮ್ಮ ವೃತ್ತಿಪರ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed