Last Updated:
ಕಲ್ಯಾಣ ಮಂಟಪವೊಂದರಲ್ಲಿ ಸೆಪ್ಟೆಂಬರ್ 4 ಮತ್ತು 5ರ (2026) ಮಧ್ಯರಾತ್ರಿ ಈ ಭೀಕರ ದುರಂತ ಸಂಭವಿಸಿದೆ.
ಕಾಂಗೋ (ಕಿನ್ಶಾಸಾ): ಮದುವೆ ಮನೆಯಲ್ಲಿ ಘೋರ ದುರಂತ ಸಂಭವಿಸಿದೆ. ಆಫ್ರಿಕಾ (Africa) ಖಂಡದ ಕಾಂಗೋ ಗಣರಾಜ್ಯದ (Republic of the Congo) ರಾಜಧಾನಿ ಕಿನ್ಶಾಸಾದಲ್ಲಿ (Kinshasa) ಭೀಕರ ಅಗ್ನಿ ದುರಂತವೊಂದು (Fire Tragedy) ಸಂಭವಿಸಿದ್ದು, ಮದುವೆ ಮನೆ ಸಾವಿನ ಮನೆಯಾಗಿ ಬದಲಾಗಿದೆ. ಅಗ್ನಿ ನರ್ತನಕ್ಕೆ 22 ಮಂದಿ ಸಜೀವ ದಹನವಾಗಿದ್ದಾರೆ. ಹಲವರು ಭೀಕರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.














