Last Updated:
ರಷ್ಯಾ-ಉಕ್ರೇನ್ ಸಂಘರ್ಷ ಮತ್ತಷ್ಟು ಜೋರಾಗಿದೆ. ಇದೀಗ ಈ ಯುದ್ಧದಲ್ಲಿ ಭಾರತಕ್ಕೆ ಸಂಬಂಧಿಸಿದ ಮೊದಲ ಸುದ್ದಿ ಬಂದಿದ್ದು, ರಷ್ಯಾದ ದಾಳಿಯು ಭಾರತೀಯ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಉಕ್ಕಿನ ಕಾರ್ಖಾನೆಯನ್ನು ಧ್ವಂಸ ಮಾಡಿದೆ.
ರಷ್ಯಾ ಮತ್ತು ಉಕ್ರೇನ್ (Russia Ukraine War) ನಡುವೆ ನಡೆಯುತ್ತಿರುವ ಯುದ್ಧ ಮತ್ತೊಮ್ಮೆ ಅಪಾಯಕಾರಿ ಘಟ್ಟ ತಲುಪುತ್ತಿರುವಂತೆ ಕಾಣುತ್ತಿದೆ. ಎರಡೂ ದೇಶಗಳು ಪರಸ್ಪರ ದೊಡ್ಡ ಪ್ರಮಾಣದ ವಾಯುದಾಳಿಗಳನ್ನು ನಡೆಸಿವೆ. ಈ ಸಮಯದಲ್ಲಿ, ರಷ್ಯಾ ಉಕ್ರೇನ್‌ನ ಕ್ರಿವಿ ರಿಹ್ ನಗರದಲ್ಲಿರುವ ದೊಡ್ಡ ಉಕ್ಕಿನ ಸ್ಥಾವರವನ್ನು ಗುರಿಯಾಗಿಸಿಕೊಂಡಿದೆ. ಈ ಸ್ಥಾವರ ಭಾರತೀಯ ಮೂಲದ ಬಿಲಿಯನೇರ್ ಉದ್ಯಮಿ ಲಕ್ಷ್ಮಿ ಮಿತ್ತಲ್ (Lakshmi Mitthal) ಅವರ ಕಂಪನಿಯಾದ ಆರ್ಸೆಲರ್ ಮಿತ್ತಲ್‌ಗೆ ಸೇರಿದೆ ಎಂದು ವರದಿಯಾಗಿದೆ.














