Rukmini Vasanth: ರುಕ್ಮಿಣಿ ವಸಂತ್ ಫಸ್ಟ್ ರಿಯಾಕ್ಷನ್! Ai ಬಿಕಿನಿ ಫೋಟೋ ವೈರಲ್ ಬಗ್ಗೆ ನಟಿ ಹೇಳಿದ್ದೇನು? | | ACTPnews

ರುಕ್ಮಿಣಿ ವಸಂತ್


Last Updated:

ಜೊತೆಗೆ AI ಅನೇಕ ಪಾಸಿಟಿವ್ ವಿಚಾರಗಳನ್ನು ಒಳಗೊಂಡಿದೆ, ಹೀಗಾಗಿ ಅದನ್ನು ಮಾತ್ರ ಬಳಸಿಕೊಳ್ಳಿ, ಬದಲಾಗಿ ಈ ರೀತಿಯಾಗಿ ಅದನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ನಟಿ ರುಕ್ಮಿಣಿ ವಸಂತ್ ಮನವಿ ಮಾಡಿಕೊಂಡಿದ್ದಾರೆ.

ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್
ಕಾಂತಾರದ ಕನಕವತಿಯಾಗಿ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್‌ (Rukmini Vasanth) ಅವರ ಬಿಕಿನಿ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಜೊತೆಗೆ ಇದರ ಹಿಂದಿನ ಅಸಲಿ ವಿಚಾರ ಏನು ಎಂಬುದು ಕೂಡಾ ಹೊರಬಿದ್ದಿತ್ತು. ವೈರಲ್ ಆಗುತ್ತಿರುವ ಫೋಟೋ, ವಿಡಿಯೋಗಳಲ್ಲಿ ಯಾವುದೇ ನಿಜಾಂಶವಿಲ್ಲ. ಇದು AI-ಜನರೇಟೆಡ್ ಫೋಟೋಸ್ ಗಳು ಎಂದು ಈಗಾಗಲೇ ನಟಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದರು. ಇದೀಗ ಕ್ಯಾಮರಾ ಮುಂದೆ ಬಂದಿರುವ ನಟಿ ರುಕ್ಮಿಣಿ ವಸಂತ್ ಈ ಬಗ್ಗೆ ತಮ್ಮ ಮೊದಲ ರಿಯಾಕ್ಷನ್ ನೀಡಿದ್ದಾರೆ.

ನಿನ್ನೆ ಇದ್ದಕ್ಕಿದ್ದ ಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರುಕ್ಮಿಣಿ ವಸಂತ್ ಅವರ ಫೋಟೋ, ವೀಡಿಯೋಸ್ ಗಳು ವೈರಲ್ ಆಗಿತ್ತು. ಸಿನಿಮಾ ಶೂಟಿಂಗ್ ಗಾಗಿ ನಟಿ ರುಕ್ಮಿಣಿ ವಸಂತ್ ಬಿಕಿನಿ ಧರಿಸಿಕೊಂಡು ಸ್ವಿಮ್ಮಿಂಗ್ ಪೂಲ್ ಒಳಗೆ ಇಳಿಯುವಂತೆ ಫೇಕ್ ಫೋಟೊ, ವಿಡಿಯೋ ಎಲ್ಲೆಡೆ ವೈರಲ್ ಆಗಲು ಶುರುವಾಗಿತ್ತು. ಈ ಘಟನೆ ಬಗ್ಗೆ ಅರಿತ ಕೂಡಲೇ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಪೋಸ್ಟ್ ಒಂದನ್ನು ಹಾಕಿಕೊಂಡಿದ್ದರು. ನಿನ್ನೆ ವೈರಲ್ ಆಗಿದ್ದ ಗ್ರೀನ್ ಬಿಕಿನಿ ಫೋಟೋ ಸೇರಿದಂತೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಎಲ್ಲಾ ಫೋಟೋಗಳು ಸಂಪೂರ್ಣ ನಕಲಿ ಎಂದು ಸ್ಪಷ್ಟನೆ ನೀಡಿದ್ದರು.

ಇದೀಗ ಈ ವಿಚಾರವಾಗಿ ನಟಿ ರುಕ್ಮಿಣಿ ವಸಂತ್ ಮತ್ತೆ ರಿಯಾಕ್ಷನ್ ಕೊಟ್ಟಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ನಟಿ, ಈಗಾಗಲೇ ಈ ವಿಚಾರವಾಗಿ ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದೇವೆ. ಜೊತೆಗೆ ಕಾನೂನು ಕ್ರಮ ಈಗಾಗಲೇ ಆರಂಭವಾಗಿದೆ ನೋಡೋಣ ಎಂದು ಹೇಳಿದ್ದಾರೆ.

ಬೀರ್‌ಬಲ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗವನ್ನು ಎಂಟ್ರಿಕೊಟ್ಟ ರುಕ್ಮಿಣಿ ವಸಂತ್ ಬಳಿಕ ಸಪ್ತಸಾಗರದಾಚೆ ಎಲ್ಲೋ, ಕಾಂತಾರ, ಹೀಗೆ ಹಿಟ್ ಮೇಲೆ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದರು. ಸದ್ಯ ಇದೀಗ ಯಶ್ ಅಭಿನಯದ ಪ್ಯಾನ್ ವರ್ಲ್ಡ್ ಸಿನಿಮಾ ಟಾಕ್ಸಿಕ್ ಚಿತ್ರದಲ್ಲೂ ರುಕ್ಮಿಣಿ ತನ್ನ ಕೈ ಚಳಕ ತೋರಿಸಲಿದ್ದಾರೆ.

ರುಕ್ಮಿಣಿ ವಸಂತ್ ಸೋಷಿಯಲ್ ಮೀಡಿಯಾದಲ್ಲೂ ಆ್ಯಕ್ಟಿವ್ ಆಗಿದ್ದಾರೆ. ತಮ್ಮ ವಿಡಿಯೋಗಳನ್ನ ಹಂಚಿಕೊಳ್ಳುತ್ತಾರೆ. ಫೋಟೋಗಳನ್ನು ಇಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ಆದ್ರೆ ಇದೀಗ ಇದ್ದಕ್ಕಿದ್ದ ಹಾಗೆ ವೈರಲ್ ಆಗುತ್ತಿರುವ ಫೋಟೋ, ವಿಡಿಯೋಗಳು ಕಂಡು ಫ್ಯಾನ್ಸ್ ಬೇಸರಗೊಂಡಿದ್ದಾರೆ. ಯಾರೋ ಕಿಡಿಗೇಡಿಗಳು ಬೇಕಂತಲೇ ಈ ರೀತಿಯಾಗಿ ಮಾಡಿದ್ದಾರೆ ಅಂತ ಕಿಡಿಕಾರುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed