ICC Women’s T20 World Cup: 22 ದಿನಗಳಲ್ಲಿ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ! ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್​​ ಅಭಿಮಾನಿಗಳಿಗೆ ರಸದೌತಣ! | ಕ್ರೀಡಾ ಸುದ್ದಿ | ACTPnews

ICC Women's T20 World Cup: 22 ದಿನಗಳಲ್ಲಿ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ! ಐಪಿಎಲ್ ಮುಗಿಯುತ್ತಿದ್ದಂತೆ ಕ್ರಿಕೆಟ್​​ ಅಭಿಮಾನಿಗಳಿಗೆ ರಸದೌತಣ! | ಕ್ರೀಡಾ ಸುದ್ದಿ


ಪಾಕಿಸ್ತಾನ ವಿರುದ್ಧ ಭಾರತ ಅಭಿಯಾನ ಆರಂಭ

2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹನ್ನೆರಡು ತಂಡಗಳು ಭಾಗವಹಿಸುತ್ತಿದ್ದು, ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತವು ಆಸ್ಟ್ರೇಲಿಯಾ, ಬಾಂಗ್ಲಾದೇಶ, ನೆದರ್‌ಲ್ಯಾಂಡ್ಸ್, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾಗಳೊಂದಿಗೆ ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿದೆ. ಗ್ರೂಪ್ ಬಿ ನಲ್ಲಿ ಇಂಗ್ಲೆಂಡ್, ಐರ್ಲೆಂಡ್, ನ್ಯೂಜಿಲೆಂಡ್, ಸ್ಕಾಟ್ಲೆಂಡ್, ಶ್ರೀಲಂಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ. ಟೀಮ್ ಇಂಡಿಯಾ ಜೂನ್ 14 ರಂದು ಎಡ್ಜ್‌ಬಾಸ್ಟನ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಅವರು ಜೂನ್ 17 ರಂದು ಲೀಡ್ಸ್‌ನಲ್ಲಿ ನೆದರ್‌ಲ್ಯಾಂಡ್ಸ್, ಜೂನ್ 21 ರಂದು ಮ್ಯಾಂಚೆಸ್ಟರ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜೂನ್ 25 ರಂದು ಮ್ಯಾಂಚೆಸ್ಟರ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದ್ದಾರೆ. ಟೀಮ್ ಇಂಡಿಯಾ ಜೂನ್ 28 ರಂದು ಲಂಡನ್‌ನಲ್ಲಿ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ತನ್ನ ಲೀಗ್ ಹಂತದ ಅಭಿಯಾನವನ್ನು ಕೊನೆಗೊಳಿಸಲಿದೆ. ನಂತರ ಸೆಮಿಫೈನಲ್ ಮತ್ತು ಫೈನಲ್ ನಡೆಯಲಿದೆ.

ಮಹಿಳಾ ಟಿ20 ವಿಶ್ವಕಪ್ 2026 ಟೀಮ್ ಇಂಡಿಯಾ ವೇಳಾಪಟ್ಟಿ

1. ಭಾರತ vs  ಪಾಕಿಸ್ತಾನ, ಜೂನ್ 14, 2026, ಎಡ್ಜ್‌ಬಾಸ್ಟನ್, ಸಂಜೆ 07:00

2.ಭಾರತ vs ನೆದರ್ಲ್ಯಾಂಡ್ಸ್, ಜೂನ್ 17, 2026, ಲೀಡ್ಸ್, ಸಂಜೆ  07:00

3.ಭಾರತ vs ದಕ್ಷಿಣ ಆಫ್ರಿಕಾ ಜೂನ್ 21, 2026, ಮ್ಯಾಂಚೆಸ್ಟರ್, ಸಂಜೆ 07:00

4.ಭಾರತ vs ಬಾಂಗ್ಲಾದೇಶ ಜೂನ್ 25, 2026, ಮ್ಯಾಂಚೆಸ್ಟರ್, ಸಂಜೆ 07:00

5.ಭಾರತ vs ಆಸ್ಟ್ರೇಲಿಯಾ ಜೂನ್ 28, 2026, ಲಂಡನ್, ಸಂಜೆ 07:00

ಟಿ20 ವಿಶ್ವಕಪ್​ಗಳಲ್ಲಿ ಭಾರತದ ಸಾಧನೆ

ಒಟ್ಟು 9 ಟಿ20 ವಿಶ್ವಕಪ್​ಗಳಲ್ಲಿ ಭಾಗವಹಿಸಿರುವ ಭಾರತ ಮಹಿಳಾ ತಂಡ 2020ರಲ್ಲಿ ಫೈನಲ್ ಪ್ರವೇಶಿಸಿರುವುದೇ ಅತ್ಯುತ್ತಮ ಸಾಧನೆಯಾಗಿದೆ. 4 ಬಾರಿ ಸೆಮಿಫೈನಲ್ ಪ್ರವೇಶಿಸಿದ್ದರೆ, 4 ಬಾರಿ ಗುಂಪು ಹಂತದಲ್ಲೇ ಹೊರಬಿದ್ದಿದೆ. 2009, 2010, 2018 ಹಾಗೂ 2023ರಲ್ಲಿ ಸೆಮಿಫೈನಲ್​​ನಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿತ್ತು.

ಟಿ20 ವಿಶ್ವಕಪ್​ ವಿಜೇತರು

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಅತಿ ಹೆಚ್ಚು ಯಶಸ್ಸು ಕಂಡ ತಂಡವಾಗಿದ್ದು, ಇದುವರೆಗೆ ನಡೆದಿರುವ 9 ಟೂರ್ನಿಗಳಲ್ಲಿ 6 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ತಲಾ ಒಮ್ಮೆ ಟ್ರೋಫಿ ಗೆದ್ದಿವೆ.

2026ರ ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚಾರ್ನಿ, ಯಾಸ್ತಿಕಾ ಭಾಟಿಯಾ, ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ಕ್ರಾಂತಿ ಗೌಡ್, ಶ್ರೇಯಾಂಕಾ ಪಾಟೀಲ್, ಶ್ರೇಯಾಂಕಾ ಪಾಟೀಲ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed