Last Updated:
ಕನ್ನಡದ ರೂಬಿ ಕ್ಯೂಬ್ ಸಿನಮಾ ರಷ್ಯಾ ಚಿತ್ರೋತ್ಸದಲ್ಲಿ ಪ್ರದರ್ಶನ ಆಗುತ್ತಿದೆ. ಡೈರೆಕ್ಟರ್ ಪಿ.ಶೇಷಾದ್ರಿ ಅವರ ಈ ಚಿತ್ರ ಈ ಮೂಲಕ ರಷ್ಯನ್ ಪ್ರಕ್ಷಕರಿಗೂ ತಲುಪುತ್ತಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಪಿ.ಶೇಷಾದ್ರಿ (P. Sheshadri) ಅವರ ರೂಬಿ ಕ್ಯೂಬ್ ಚಿತ್ರ (Ruby Cube Movie) ರಷ್ಯಾ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗುತ್ತಿದೆ. ರೂಬಿ ಕ್ಯೂಬ್ ತರವೇ ಜೀವನದಲ್ಲಿ ಹಲವು ಸಮಸ್ಯೆಗಳು ಸರಿ ಮಾಡೋಕೆ ಆಗಲ್ಲ ಅನಿಸುತ್ತದೆ. ಆದರೆ, ತಾಳ್ಮೆಯಿಂದಲೇ ಎಲ್ಲವೂ ಸಾಧ್ಯ ಅನ್ನೋದನ್ನ ಇಲ್ಲಿ ತೋರಲಾಗಿದೆ. ಆದರೆ, ಇಲ್ಲಿ ರೂಬಿ ಕ್ಯೂಬ್ (Ruby Cube Movie) ಒಂದು ರೂಪಕದಂತೇನೆ ಇದೆ. ಈ ಚಿತ್ರೋತ್ಸವಕ್ಕೆ ಪಿ.ಶೇಷಾದ್ರಿ (P. Sheshadri) ಅವರು ವಿಶೇಷ ಆಹ್ವಾನಿತರಾಗಿದ್ದಾರೆ. “ಭವಿಷ್ಯದಲ್ಲಿ ಚಲನಚಿತ್ರ : ಭಾರತ ಮತ್ತು ರಷ್ಯಾದಲ್ಲಿ ಅವಕಾಶಗಳು” ಅನ್ನುವ ಅಧಿವೇಶನದಲ್ಲಿ ಇವರು ಮಾತನಾಡಲಿದ್ದಾರೆ. ಇವರ ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.
ರೂಬಿ ಕ್ಯೂಬ್ ಸಿನಿಮಾದಲ್ಲಿ ಸಂಬಂಧಗಳ ಕತೆ ಇದೆ. ಆಳವಾದ ಭಾವನೆಗಳ ಕೌಟುಂಬಿಕ ಸ್ಟೋರಿ ಇದೆ. ಸಂಬಂಧಗಳ ಸಂಕೀರ್ಣತೆ ಹಾಗೂ ಮುರಿದು ಹೋಗುವ ಬಾಂಧವ್ಯಗಳು ಮತ್ತು ಒಪ್ಪಿಕೊಳ್ಳುವಿಕೆಯತ್ತ ಸಾಗುವ ನಿಧಾನ ಪ್ರಯಾಣ ಇದರಲ್ಲಿದೆ.
ರಷ್ಯಾದ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ
(ಚಿತ್ರ ಕೃಪೆ: ರೂಬಿ ಕ್ಯೂಬ್ ಟೀಮ್)
ಈ ಚಿತ್ರದಲ್ಲಿ ರೂಬಿ ಕ್ಯೂಬ್ ಒಂದು ರೂಪಕವೇ ಆಗಿದೆ. ಈ ಒಂದು ರೂಬಿ ಕ್ಯೂಬ್ ಜೋಡಿಸುವುದು ಕಷ್ಟ ಅನಿಸುತ್ತದೆ. ಅದರೆ, ತಾಳ್ಮೆಯಿಂದ ಇದನ್ನ ಜೋಡಿಸಬಹುದು ಅನ್ನೋದು ಅಷ್ಟೆ ಸತ್ಯ. ಈ ರೂಬಿ ಕ್ಯೂಬ್ ಚಿತ್ರದಲ್ಲಿ ಪಿ.ಶೇಷಾದ್ರಿ ಅವರು ಇದನ್ನೆ ತೋರಿಸಿದ್ದಾರೆ.
ಕನ್ನಡದ ರೂಬಿ ಕ್ಯೂಬ್ ರಷ್ಯಾ ಚಿತ್ರೋತ್ಸವದಲ್ಲಿ ಪ್ರದರ್ಶನ ಆಗುತ್ತಿದೆ. ರಷ್ಯಾ–ಭಾರತ ಚಿತ್ರೋತ್ಸವ ಅಕ್ಟೋರ್-14 ರಂದು ಸಂಜೆ 6.30 ಈ ಚಿತ್ರೋತ್ಸವ ಶುರು ಆಗುತ್ತಿದೆ.
ಭಾರತ ಮತ್ತು ರಷ್ಯಾ ನಡುವಿನ ಸಾಂಸ್ಕೃತಿಕ ಹಾಗೂ ಸಿನಿಮೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಈ ಚಿತ್ರೋತ್ಸವಕ್ಕೆ ಇದೆ.
ಈ ಒಂದು ಚಿತ್ರೋತ್ಸವದಲ್ಲಿಸಮಕಾಲೀನ ಭಾರತೀಯ ನಿರ್ದೇಶಕರ ಆಯ್ದ ಚಿತ್ರಗಳನ್ನ ರಷ್ಯನ್ ಉಪಶೀರ್ಷಿಕೆಗಳೊಂದಿಗೆ ಪ್ರದರ್ಶಿಸಲಾಗುತ್ತಿದೆ.
ರಷ್ಯಾದ ಭಾರತೀಯ ಚಿತ್ರೋತ್ಸವದಲ್ಲಿ ಕನ್ನಡ ಸಿನಿಮಾ
(ಚಿತ್ರ ಕೃಪೆ: ಪಿ.ಶೇಷಾದ್ರಿ ಇನ್ಸ್ಟಾಗ್ರಾಮ್)
ಈ ಚಿತ್ರೋತ್ಸವದಲ್ಲಿ “ಇದು ಭವಿಷ್ಯದಲ್ಲಿ ಚಲನಚಿತ್ರ : ಭಾರತ ಮತ್ತು ರಷ್ಯಾದಲ್ಲಿ ಅವಕಾಶಗಳು” (Filming the Future: Opportunities in India-Russia Cinema) ಅನ್ನುವ Session ಕೂಡ ನಡೀತಿದೆ. ಇಲ್ಲಿ ಡೈರೆಕ್ಟರ್ ಪಿ.ಶೇಷಾದ್ರಿ ಅವರು ಮಾತನಾಡಲಿದ್ದಾರೆ. ಇವರು ಈ ಚಿತ್ರೋತ್ಸವದಲ್ಲಿ ವಿಶೇಷ ಆಹ್ವಾನಿತರೂ ಆಗಿದ್ದಾರೆ.
ರೂಬಿ ಕ್ಯೂಬ್ ಅಲ್ಲಿ ಆಳವಾದ ಭಾವನಾತ್ಮಕ ಕೌಟುಂಬಿಕ ಕಥೆ ಇದೆ. ಈ ಚಿತ್ರಕ್ಕೆ ಪ್ರಥಮ್ ಎಸ್ ಕಥೆ ಬರೆದಿದ್ದಾರೆ. ಚಿತ್ರದಲ್ಲಿ ದತ್ತಣ್ಣ ಇದ್ದಾರೆ. ವಿದ್ಯಾಮೂರ್ತಿ ಇದ್ದಾರೆ. ದೇವ್ ದೇವಯ್ಯ, ರಾಧ್ಯಾ ಅಭಿನಯಿಸಿದ್ದಾರೆ.
ಹಾಗೆ ಈ ಚಿತ್ರೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಕನ್ನಡ ಈ ರೂಬಿ ಕ್ಯೂಬ್ ಚಿತ್ರವೂ ಒಂದಾಗಿದೆ. ಕನ್ನಡದ ಪ್ರಾದೇಶಿಕ ಚಿತ್ರ ಒಂದು ರಷ್ಯಾ ಪ್ರೇಕ್ಷಕರನ್ನ ಹೀಗೆ ತಲುಪುತ್ತಿರೋದು ಹೆಮ್ಮೆಯ ವಿಷಯವೇ ಆಗಿದೆ ಅಂತಲೂ ಹೇಳಬಹುದು.














