Rohit Sharma: 2027ರ ವಿಶ್ವಕಪ್ ಗೊಂದಲದ ಬಗ್ಗೆ ರೋಹಿತ್‌ಗೆ ಗಂಭೀರ್​ರಿಂದಲೇ ಸಿಕ್ತು ಬಿಗ್ ರಿಲೀಫ್! ಇನ್ಮೇಲೆ ಹಿಟ್‌ಮ್ಯಾನ್ ತಡೆಯೋರು ಯಾರಿಲ್ಲ | ಕ್ರೀಡಾ ಸುದ್ದಿ | ACTPnews

ಗೌತಮ್ ಗಂಭೀರ್- ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ


Last Updated:

2027ರ ಏಕದಿನ ವಿಶ್ವಕಪ್​​ವರೆಗೆ ತಂಡದ ಸಂಯೋಜನೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನ ತಂಡವು ಹಲವು ಬದಲಾವಣೆಗಳ ಮೂಲಕ ಪ್ರಯೋಗ ನಡೆಸಲಿದೆ ಎಂದು ನಾಯಕ ಶುಭ್​ಮನ್ ಗಿಲ್ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ, ಅವರು ರೋಹಿತ್ ಮತ್ತು ಕೊಹ್ಲಿಯನ್ನು ಬದಿಗಿಡುವ ದಿಟ್ಟ ಹೆಜ್ಜೆ ಇಡುತ್ತಾರೆಯೇ ಎಂಬ ಬಗ್ಗೆ ಅನುಮಾನಗಳು ಉದ್ಭವಿಸಿತ್ತು.

ಗೌತಮ್ ಗಂಭೀರ್- ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ
ಗೌತಮ್ ಗಂಭೀರ್- ರೋಹಿತ್ ಶರ್ಮಾ- ವಿರಾಟ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ (India vs England) ಏಕದಿನ ಸರಣಿಯಲ್ಲಿ (ODI Series) ಟೀಮ್ ಇಂಡಿಯಾ ಗೆಲುವಿನ ಆರಂಭವನ್ನು ಪಡೆದಿದೆ. ಯುರೋಪ್ ಪ್ರವಾಸದಲ್ಲಿ ಸಿಕ್ಕಂತಹ ಮೊದಲ ಗೆಲುವು ಇದಾಗಿದೆ. ಮಂಗಳವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಏಕದಿನದಲ್ಲಿ ಆತಿಥೇಯ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆದರೆ ಬ್ಯಾಟಿಂಗ್ ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ (Rohit Sharma) ಈ ಪಂದ್ಯದಲ್ಲಿ ದೊಡ್ಡ ನಿರಾಶೆ ಮೂಡಿಸಿದರು. ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ 21 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿದರು ಮತ್ತು ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಹ್ಯಾರಿ ಬ್ರೂಕ್‌ಗೆ ಕ್ಯಾಚ್ ನೀಡಿದರು.

ನಂತರ 3ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಕೊಹ್ಲಿ ಆರು ಎಸೆತಗಳಲ್ಲಿ 5 ರನ್​ ಬಾರಿಸಿ ನಿರ್ಗಮಿಸಿದರು. ಜೋಫ್ರಾ ಆರ್ಚರ್ ಬೌಲಿಂಗ್‌ನಲ್ಲಿ ಕೊಹ್ಲಿ LBW ಆದರು. ಈ ಹಿನ್ನೆಲೆಯಲ್ಲಿ, ರೋಹಿತ್ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಚರ್ಚೆಗಳು ಮತ್ತೆ ಭುಗಿಲೆದ್ದಿವೆ.

ಪ್ರಯೋಗಗಳ ಸೂಚನೆ ನೀಡಿದ್ದ ಗಿಲ್

2027ರ ಏಕದಿನ ವಿಶ್ವಕಪ್‌ವರೆಗೆ ತಂಡದ ಸಂಯೋಜನೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನ ತಂಡವು ಹಲವು ಬದಲಾವಣೆಗಳ ಮೂಲಕ ಪ್ರಯೋಗ ನಡೆಸಲಿದೆ ಎಂದು ನಾಯಕ ಶುಭ್‌ಮನ್ ಗಿಲ್ ಈಗಾಗಲೇ ಸ್ಪಷ್ಟಪಡಿಸಿರುವುದರಿಂದ, ಅವರು ರೋಹಿತ್ ಮತ್ತು ಕೊಹ್ಲಿಯನ್ನು ಬದಿಗಿಡುವ ದಿಟ್ಟ ಹೆಜ್ಜೆ ಇಡುತ್ತಾರೆಯೇ ಎಂಬ ಬಗ್ಗೆ ಅನುಮಾನಗಳು ಉದ್ಭವಿಸಿತ್ತು. ಇದರ ನಡುವೆ, ‘ಸ್ಪೋರ್ಟ್ಸ್ ಟಕ್’ ಜೊತೆ ಮಾತನಾಡಿದ ಬಿಸಿಸಿಐ ಮೂಲಗಳು ರೋಹಿತ್ ಬಗ್ಗೆ ಆಡಳಿತ ಮಂಡಳಿಯ ನಿಲುವಿನ ಬಗ್ಗೆ ಪ್ರಮುಖ ಮಾಹಿತಿಯನ್ನ ಹಂಚಿಕೊಂಡಿದೆ.

ಗಂಭೀರ್ ಅವರ ಅಚ್ಚರಿಯ ಹೇಳಿಕೆ

ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಮಾಜಿ ನಾಯಕ ರೋಹಿತ್ ಶರ್ಮಾ ಅವರಿಗೆ 2027 ಒಡಿಐ ವಿಶ್ವಕಪ್ ಬಗ್ಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ರೋಹಿತ್ ಅವರು ತಮ್ಮ ಸಹಜ ಆಟದ ಶೈಲಿಯನ್ನು ಮುಂದುವರಿಸಬೇಕು. ಹೊರಗಿನ ಟೀಕೆಗಳು ಅಥವಾ ಭವಿಷ್ಯದ ಒತ್ತಡವಿಲ್ಲದೆ ಮುಕ್ತವಾಗಿ ನೈಸರ್ಗಿಕ ಆಡಬೇಕು. ಗಂಭೀರ್ ಅವರು ರೋಹಿತ್ ಅವರನ್ನು ತಂಡದ ಮುಖ್ಯ ಆಟಗಾರನಾಗಿ ಪರಿಗಣಿಸುತ್ತಿದ್ದಾರೆ. ಭವಿಷ್ಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಪ್ರಸ್ತುತದ ಮೇಲೆ ಗಮನ ಹರಿಸಬೇಕು. ರೋಹಿತ್ ಅವರು ಮನಸ್ಸು ಸ್ವಚ್ಛವಾಗಿಟ್ಟುಕೊಂಡು ತಮ್ಮ ಉತ್ತಮ ಪ್ರದರ್ಶನ ನೀಡಲಿ” ಎಂದು ತಂಡದ ಮೂಲಗಳು ತಿಳಿಸಿವೆ.

ರೋಹಿತ್ ಒತ್ತಡದಲ್ಲಿದ್ದಾಗ ಏನಾಗುತ್ತದೆ ಎಂದು ನಾವು ನೋಡಿದ್ದೇವೆ. ಆದ್ದರಿಂದ, ಮ್ಯಾನೇಜ್‌ಮೆಂಟ್ ಈಗ ಅವರ ಪ್ರತಿಯೊಂದು ಇನ್ನಿಂಗ್ಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಬಯಸುವುದಿಲ್ಲ. ರೋಹಿತ್​​ ಶರ್ಮಾ  ಸಾಮರ್ಥ್ಯದ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ.

ರೋಹಿತ್ ಶಾಂತವಾಗಿ ಮತ್ತು ಒತ್ತಡವಿಲ್ಲದೆ ಆಡುವಾಗ ಯಾವ ರೀತಿಯ ಫಲಿತಾಂಶಗಳನ್ನು ನೀಡಬಹುದು ಎಂದು ಎಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಮ್ಯಾನೇಜ್‌ಮೆಂಟ್ ಸದ್ಯಕ್ಕೆ ಅವರ ಮೇಲೆ ನಂಬಿಕೆ ಇಟ್ಟಿದೆ. ಅವರು ಸಣ್ಣ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಸಾಧ್ಯವಾದರೆ, ಅವರನ್ನ ಯಾರಿಂದಲೂ ತಡೆಯಲಾಗದು” ಎಂದು ಮೂಲಗಳು ತಿಳಿಸಿವೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Rohit Sharma: 2027ರ ವಿಶ್ವಕಪ್ ಗೊಂದಲದ ಬಗ್ಗೆ ರೋಹಿತ್‌ಗೆ ಗಂಭೀರ್​ರಿಂದಲೇ ಸಿಕ್ತು ಬಿಗ್ ರಿಲೀಫ್! ಇನ್ಮೇಲೆ ಹಿಟ್‌ಮ್ಯಾನ್ ತಡೆಯೋರು ಯಾರಿಲ್ಲ



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed