Last Updated:
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾಗಳಲ್ಲಿ ‘R’ ಅಕ್ಷರದಿಂದ ಶುರು ಆಗುವ ಪಾತ್ರಗಳೂ ಇವೆ. ಟಾಕ್ಷಿಕ್ ಚಿತ್ರದಲ್ಲಿ ಎರಡು ಪಾತ್ರಗಳು ಇವೆ. ಆದರೆ, ಇದರಲ್ಲಿ ಒಂದು ಪಾತ್ರದ ಹೆಸರು ‘R’ ಅಕ್ಷರದಿಂದಲೇ ಶುರು ಆಗುತ್ತದೆ. ಈ ಎಲ್ಲ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಸಿನಿಮಾಗಳಲ್ಲಿ ‘R’ ಅಕ್ಷರದಿಂದ ಶುರುವಾಗುವ ಪಾತ್ರಗಳೇ ಸಿಕ್ಕಿವೆ. ಕಿರಾತ ಚಿತ್ರದಿಂದಲೇ ಯಶ್ ಸಕ್ಸಸ್ ಜರ್ನಿ ಶುರು ಆಯಿತು. ಆದರೆ, ಈ ಚಿತ್ರದಲ್ಲಿ ಯಶ್ ಹೆಸರು ‘R’ ಅಕ್ಷರದಿಂದೇನು ಶುರು ಆಗೋದಿಲ್ಲ. ಬದಲಾಗಿ ಇಲ್ಲಿ ನಂದೀಶ ಅನ್ನು ಹೆಸರೇ ಇದೆ. ಆದರೆ, ನಾಯಕ ನಟನಾದ ಮೊಗ್ಗಿನ ಮನಸ್ಸು ಚಿತ್ರದಲ್ಲಿ (Moggina Manasu Movie) ಯಶ್ ಪಾತ್ರದ (Yash Role) ಹೆಸರು ‘R’ ಅಕ್ಷರದಿಂದಲೇ ಶುರು ಆಗುತ್ತದೆ. ರಾಧಿಕಾ ಪಂಡಿತ್ (Radhika Pandit) ಜೋಡಿ ಆಗಿದ್ದ ಯಶ್ ಇಲ್ಲಿ ರಾಹುಲ್ ಅನ್ನುವ ರೋಲ್ ಮಾಡಿದ್ದರು. ಇನ್ನು ಹಲವು ಚಿತ್ರಗಳಿವೆ. ಅವುಗಳ ವಿವರ ಇಲ್ಲಿದೆ ಓದಿ.














