ಯಶ್ ಫ್ಯಾನ್ಸ್ ಎಲ್ಲೆಡೆ ಇದ್ದಾರೆ. ದೂರದ ಉತ್ತರ ಪ್ರದೇಶದಲ್ಲೂ ರಾಕಿ ಭಾಯ್ ಹವಾ ಇದೆ. ಅದಕ್ಕೆ ಸಾಕ್ಷಿ ಈಗೀನ ಈ ವೈರಲ್ ವಿಡಿಯೋ ಅಂತ ಹೇಳಬಹುದು.
ಈ ಯುವತಿ ಯಾರು
ಅಂದ್ಹಾಗೆ ಈ ವಿಡಿಯೋ ಉತ್ತರ ಪ್ರದೇಶದ ವಿಡಿಯೋ ಆಗಿದೆ. ಇಲ್ಲಿಯ ಗೋರಖಪುರದ ಮಲ್ಟಿಪ್ಲೆಕ್ಸ್ ಅಲ್ಲಿಯೇ ತೆಗೆದಿರೋ ವಿಡಿಯೋ ಆಗಿದೆ.
ಇದರಲ್ಲಿ ಯುವತಿ ಯಶ್ ಬಗ್ಗೆ ಇರೋ ತಮ್ಮ ಅಭಿಮಾನವನನ್ನ ತೋರಿದ್ದಾರೆ. ಕಟೌಟ್‌ಗೆ ಮುತ್ತುಕೊಟ್ಟಿದ್ದಾರೆ. ಹಾಗೆ ಕೊಟ್ಟಿರೋ ವಿಡಿಯೋ ವೈರಲ್ ಆಗುತ್ತಿದೆ. ಎಲ್ಲರ ಗಮನ ಸೆಳೆಯುತ್ತಿದೆ.
ವೈರಲ್ ವಿಡಿಯೋ ಮತ್ತು ಫೋಟೋದಲ್ಲಿ ಕಾಣಿಸುವ ಯುವತಿ ಯಾರು ಅಂತ ಗೊತ್ತಾಗಿದೆ. ಸಲೋನಿ ಪಾಂಡೆ ಅನ್ನೋದು ಇವರ ಹೆಸರು. ರೀಲ್ ಕ್ರಿಯೇಟರ್ ಅಂತಲೇ ಇವರು ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಹಾಕಿಕೊಂಡಿದ್ದಾರೆ. ಈ ಒಂದು ವಿಡಿಯೋವನ್ನು ಇಲ್ಲಿಯೇ ಹಂಚಿಕೊಂಡಿದ್ದಾರೆ.
ಮಲ್ಟಿಪ್ಲೆಕ್ಸ್ ಕಟೌಟ್
ಹಾಗೆ ಈ ವಿಡಿಯೋದಲ್ಲಿ ಜೂನ್-4 ರಂದು ಟಾಕ್ಸಿಕ್ ಚಿತ್ರ ಬರ್ತಿದೆ ಅನ್ನುವ ವಿಷಯ ಇದೆ. ಈ ದಿನಕ್ಕಾಗಿಯೆ ವೇಟಿಂಗ್ ಅನ್ನೋದನ್ನು ಸಲೋನಿ ಪಾಂಡೆ ಇಲ್ಲಿ ಬರೆದುಕೊಂಡಿದ್ದಾರೆ.
ಟಾಕ್ಸಿಕ್ ಚಿತ್ರ ಮುಂದೆ ಹೋಗಿದೆ. ಇದು ಎಲ್ಲರಿಗೂ ಗೊತ್ತೇ ಇದೆ. ಬಹುಶಃ ಈ ಯುವತಿಗೆ ಗೊತ್ತಿಲ್ಲ ಅನಿಸುತ್ತದೆ. ಹಾಗಾಗಿಯೇ ತಮ್ಮ ರೀಲ್ಸ್ ವಿಡಿಯೋದಲ್ಲಿ ವೇಟಿಂಗ್ ಫಾರ್ ಟಾಕ್ಸಿಕ್ ಅನ್ನುವ ಅರ್ಥದಲ್ಲಿಯೇ ಬರೆದುಕೊಂಡಿದ್ದಾರೆ.
ಟಾಕ್ಸಿಕ್ ಚಿತ್ರದ ಕೆಲಸ ಇನ್ನು ನಡೀತಾನೇ ಇದೆ. ಶೂಟಿಂಗ್ ಮುಗಿದಿಲ್ಲ ಅನ್ನುವ ಮಾತು ಇದೆ. ಇದರೊಟ್ಟಿಗೆ ಈ ಸಿನಿಮಾವನ್ನ ಮತ್ತೆ ಶೂಟ್ ಮಾಡುತ್ತಿದ್ದಾರೆ.
ಫ್ಯಾನ್ ಮೇಡ್ ಪೋಸ್ಟರ್
ಹಾಗೇನೆ ಈ ವಿಚಾರವಾಗಿ ಪ್ರಶಾಂತ್ ನೀಲ್ ಅವರನ್ನ ಅಪ್ರೋಚ್ ಮಾಡಿದ್ದಾರೆ ಅನ್ನೋ ಸುದ್ದಿನೂ ಇದೆ. ಇದರೊಟ್ಟಿಗೆ ಈ ವರ್ಷದ ಕೊನೆಯಲ್ಲಿ ಈ ಸಿನಿಮಾ ರಿಲೀಸ್ ಪಕ್ಕಾ ಅನ್ನೋ ಮಾತು ಇದೆ.
ಟಾಕ್ಸಿಕ್ ಚಿತ್ರದ ಫ್ಯಾನ್ ಮೇಡ್ ಪೋಸ್ಟರ್ ಒಂದು ಹೆಚ್ಚು ಗಮನ ಸೆಳೆಯುತ್ತಿದೆ. ಇದರಲ್ಲಿ ಚಿತ್ರದ ನಾಯಕಿಯರು ಸುತ್ತಲೂ ಇದ್ದಾರೆ. ನಡುವೆ ರಾಕಿಂಗ್ ಸ್ಟಾರ್ ಯಶ್ ಕುಳಿತಿದ್ದಾರೆ.
ಇದನ್ನ ನೋಡಿದ್ರೆ ಯಶ್ ಹಿಂದೆ ದೊಡ್ಡ ನಾರಿ ಶಕ್ತಿನೇ ಇದೆ ಅನ್ನೋದು ತಿಳಿಯುತ್ತಿದೆ. ಅದ್ಯಾವುದೋ ಒಂದು ದೊಡ್ಡ ಗುರಿ ತಲುಪಲು ಇವರು ಸಜ್ಜಾಗಿದ್ದಾರೆ. ಇವರ ಪರಮ ಗುರಿನೂ ಅದೇ ಅನ್ನೋ ಫೀಲ್ ಅನ್ನೂ ಈ ಪೋಸ್ಟರ್ ಕೊಡ್ತಿದೆ.
ಒಟ್ಟಾರೆ, ಹೇಳೋದಾದ್ರೆ, ಟಾಕ್ಸಿಕ್ ಚಿತ್ರ ಹೊರ ಬಂದ್ಮೇಲೆ ಎಲ್ಲರೂ ಮೆಚ್ಚಿಕೊಳ್ತಾರೆ ಅನ್ನುವ ಭರವಸೆಯನ್ನ ಚಿತ್ರದ ನಟಿಯರೇ ಹೇಳಿಕೊಂಡಿದ್ದಾರೆ ಅಂತಲೂ ಹೇಳಬಹುದು.












