Reliance Foundation: ತಿರುಮಲ ತಿರುಪತಿ ದೇವಸ್ಥಾನಕ್ಕೆ 25 ಎಲೆಕ್ಟ್ರಿಕ್ ಬಸ್‌ಗಳನ್ನ ದೇಣಿಗೆ ನೀಡಿದ ರಿಲಯನ್ಸ್ ಫೌಂಡೇಶನ್‌ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಟಿಟಿಡಿಗೆ ರಿಯಲನ್ಸ್ ದೇಣಿಗೆ ನೀಡಿದ 25 ಬಸ್​ಗಳಿಗೆ ಚಾಲನೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು


Last Updated:

ತಿರುಮಲದಲ್ಲಿ ಈ ಸಂಬಂಧ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ರಿಲಯನ್ಸ್ ಫೌಂಡೇಷನ್ ದೇಣಿಗೆ ನೀಡಿದ 25 ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು.

ಟಿಟಿಡಿಗೆ ರಿಯಲನ್ಸ್ ದೇಣಿಗೆ ನೀಡಿದ 25 ಬಸ್​ಗಳಿಗೆ ಚಾಲನೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು
ಟಿಟಿಡಿಗೆ ರಿಯಲನ್ಸ್ ದೇಣಿಗೆ ನೀಡಿದ 25 ಬಸ್​ಗಳಿಗೆ ಚಾಲನೆ ನೀಡಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ತಿರುಮಲ: ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಾಲಯಕ್ಕೆ (TTD) ಭೇಟಿ ನೀಡುವ ಭಕ್ತರಿಗೆ ಹಸಿರು ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಮಾಜಕಲ್ಯಾಣ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿರುವ ರಿಲಯನ್ಸ್ ಫೌಂಡೇಶನ್ (Reliance Foundation), ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ (TTD) 25 ಅತ್ಯಾಧುನಿಕ ಎಲೆಕ್ಟ್ರಿಕ್ ಬಸ್‌ಗಳು (Electric buses) ಹಾಗೂ ಪ್ರತ್ಯೇಕ ಇವಿ ಚಾರ್ಜಿಂಗ್ ಕೇಂದ್ರವನ್ನು ಹಸ್ತಾಂತರಿಸಿದೆ.

ಬ್ರಹ್ಮೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲ

ತಿರುಮಲದಲ್ಲಿ ಈ ಸಂಬಂಧ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಈ ಬಸ್‌ಗಳಿಗೆ ಹಸಿರು ನಿಶಾನೆ ತೋರಿದರು. ತಿರುಪತಿಯಲ್ಲಿ ಮುಂಬರುವ ಎರಡು ಶ್ರೀವಾರಿಯ ಬ್ರಹ್ಮೋತ್ಸವಗಳಿಗೂ ಮುನ್ನ ಈ ಬಸ್‌ಗಳನ್ನು ನೀಡಲಾಗಿದ್ದು, ಇದು ಲಕ್ಷಾಂತರ ಯಾತ್ರಾರ್ಥಿಗಳಿಗೆ ಸುಲಭ ಮತ್ತು ಸ್ವಚ್ಛ ಪ್ರಯಾಣ ಒದಗಿಸಲು ಸಹಕಾರಿಯಾಗಿದೆ.

ಭರವಸೆ ಈಡೇರಿಸಿದ ಅನಂತ್ ಅಂಬಾನಿ

ಕಳೆದ ಜೂನ್ 2026ರಲ್ಲಿ ತಿರುಮಲಕ್ಕೆ ಭೇಟಿ ನೀಡಿದ್ದ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಈ ಬಸ್‌ಗಳನ್ನು ನೀಡುವುದಾಗಿ ನೀಡಿದ್ದ ಭರವಸೆಯನ್ನು ಈಗ ಈಡೇರಿಸಿದ್ದಾರೆ.

ಜಿಯೋ-ಬಿಪಿ ಸಹಯೋಗ

ರಿಲಯನ್ಸ್ ಫೌಂಡೇಶನ್‌ನ ಆರ್ಥಿಕ ನೆರವಿನೊಂದಿಗೆ ಹಾಗೂ ಜಿಯೋ-ಬಿಪಿ ಸಂಸ್ಥೆಯ ತಾಂತ್ರಿಕ ಪರಿಣತಿಯೊಂದಿಗೆ ಈ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅನಂತ್ ಅಂಬಾನಿ, “ತಿರುಮಲದ ಪವಿತ್ರ ಗಿರಿಧಾಮಕ್ಕೆ ಬರುವ ಭಕ್ತರ ಪ್ರಯಾಣವನ್ನು ಸುಖಕರವಾಗಿಸುವುದು ಮತ್ತು ಈ ಪ್ರದೇಶದ ಜೀವವೈವಿಧ್ಯವನ್ನು ಸಂರಕ್ಷಿಸಲು ಟಿಟಿಡಿ ಕೈಗೊಳ್ಳುತ್ತಿರುವ ಪ್ರಯತ್ನಗಳಿಗೆ ನಾವು ಶ್ರದ್ಧಾಪೂರ್ವಕವಾಗಿ ಈ ಕೊಡುಗೆಯನ್ನು ನೀಡುತ್ತಿದ್ದೇವೆ ” ಎಂದು ತಿಳಿಸಿದರು. ಈ ಗ್ರೀನ್ ಮೊಬಿಲಿಟಿ ಉಪಕ್ರಮವು ತಿರುಮಲದಲ್ಲಿ ಮಾಲಿನ್ಯವನ್ನು ತಡೆಯಲು ಮತ್ತು ಪರಿಸರ ಸಂರಕ್ಷಣೆಗೆ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed