Last Updated:
ಸಾಹಿತ್ಯ ಅಕಾಡೆಮಿಯಲ್ಲಿ ವಿವಿಧ ವಿಭಾಗಗಳ 30 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು, ಬೆಂಗಳೂರು ಸೇರಿದಂತೆ ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ಹುದ್ದೆಗಳು ಲಭ್ಯವಿವೆ
ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಸಾಹಿತ್ಯ ಅಕಾಡೆಮಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 30 ಹುದ್ದೆಗಳಿಗೆ (Jobs) ನೇರ ನೇಮಕಾತಿ ನಡೆಯಲಿದ್ದು, ನವದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು (Bengaluru) ಹಾಗೂ ಚೆನ್ನೈ ಕಚೇರಿಗಳಲ್ಲಿ ಹುದ್ದೆಗಳು ಲಭ್ಯವಿವೆ. ಈ ನೇಮಕಾತಿಯಲ್ಲಿ Deputy Secretary, Assistant Editor, Library & Information Assistant, Translation Officer, Technical Assistant, Programme Assistant, Publication Assistant, Stenographer, Junior Clerk, Van Driver ಹಾಗೂ Multi-Tasking Staff ಸೇರಿದಂತೆ ವಿವಿಧ ಹುದ್ದೆಗಳು ಸೇರಿವೆ.














