Real Star Upendra: ಶೋಧನೆ ಇಲ್ಲದೆ ಸಾಧನೆ ಇಲ್ಲ, ಉಪ್ಪಿಗೆ ರಜನಿ ಮಾತು | | ACTPnews

ಶೋಧನೆ ಇಲ್ಲದೆ ಸಾಧನೆ ಇಲ್ಲ; ಉಪ್ಪಿಗೆ ರಜನಿ ಹೀಗೆ ಹೇಳಿದ್ಯಾಕೆ?


Last Updated:

ರಿಯಲ್ ಸ್ಟಾರ್ ಉಪೇಂದ್ರ ಅವರು ಮಹಾನ್ ನಟರ ಮುಂದೆ ಮಗು ಆಗಿ ಬಿಡ್ತಾ ಇದ್ದರು. ತಾವು ಬುದ್ಧಿವಂತರಾದರೂ ಅಂಬಿ, ರಾಜ್, ವಿಷ್ಣು, ರಜನಿಕಾಂತ್ ಅವರ ಎದುರು ಶರಣಾಗಿ ಕುಳಿತು ಬಿಡ್ತಾ ಇದ್ದರು. ಏನೂ ಕೇಳದೆ ಅವರ ಮಾತುಗಳನ್ನ ಕೇಳ್ತಾನೇ ಇರ್ತಾ ಇದ್ದರು. ಇದನ್ನ ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಹೇಳಿಕೊಂಡಿದ್ದಾರೆ. ಇದರ ಸಂಪೂರ್ಣ ವಿವರ ಇಲ್ಲಿದೆ ಓದಿ.

ಶೋಧನೆ ಇಲ್ಲದೆ ಸಾಧನೆ ಇಲ್ಲ; ಉಪ್ಪಿಗೆ ರಜನಿ ಹೀಗೆ ಹೇಳಿದ್ಯಾಕೆ?
ಶೋಧನೆ ಇಲ್ಲದೆ ಸಾಧನೆ ಇಲ್ಲ; ಉಪ್ಪಿಗೆ ರಜನಿ ಹೀಗೆ ಹೇಳಿದ್ಯಾಕೆ?

ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಬುದ್ಧಿವಂತರು ಅನ್ನೋದು ಗೊತ್ತೇ ಇದೆ. ಬೇರೆ ರೀತಿನೆ ಯೋಚನೆ ಮಾಡ್ತಾರೆ. “A” ಸಿನಿಮಾವನ್ನ ತುಂಬಾನೆ ವಿಭಿನ್ನವಾಗಿಯೇ ತೋರಿಸಿದ್ದಾರೆ. ಆದರೆ, ಇವರು ಮಹಾನ್ ಕಲಾವಿದರ ಎದುರು ಬುದ್ಧಿವಂತರಾಗೋಕೆ ಹೋಗ್ತಾ ಇರಲಿಲ್ಲ. ಮಗು ತರ ಶರಣಾಗಿ ಬಿಡ್ತಾ ಇದ್ದರು. ರಾಜಕುಮಾರ್, (Rajkumar) ವಿಷ್ಣುವರ್ಧನ್, (Vishnuvardhan) ರಜನಿಕಾಂತ್, (Rajinikanth) ಅಂಬರೀಶ್ ಅವರ ಎದುರು ಕುಳಿತು ಮಾತು ಕೇಳಿಸಿಕೊಳ್ತಾನೇ ಇರ್ತಾ ಇದ್ದರು. ಅದನ್ನ ಕೇಳೋದೇ ಒಂದು ಚೆಂದ, ಒಂದು ಖುಷಿ ಅಂತಲೂ ಹೇಳಿಕೊಳ್ತಾ ಇದ್ದರು. ಹಾಗೆ ಈ ಕಲಾವಿದರ ಅಂದಿನ ಮಾತುಗಳನ್ನ ಉಪೇಂದ್ರ ಈಗ ಮತ್ತೆ ಮೆಲುಕು ಹಾಕಿದ್ದಾರೆ. ಅದೇನು ಅನ್ನೊದು ಮುಂದೆ ಇದೆ ಓದಿ.

ಶೋಧನೆ ಇಲ್ಲದೆ ಸಾಧನೆ ಇಲ್ಲ..

ಜೀವನದಲ್ಲಿ ಎಲ್ಲವೂ ಇರಬೇಕು. ಕಷ್ಟ-ನಷ್ಟ, ಸುಖ-ದುಃಖ ಹೀಗೆ ಎಲ್ಲವು ಇರಬೇಕು. ಅಂದಾಗಲೆ ಅದಕ್ಕೆ ಜೀವನ ಅಂತಲೇ ಹೇಳ್ತಾರೆ.

real star upendra share interesting experience with legendary actors

ಉಪ್ಪಿಗೆ ರಜನಿ ಹೀಗೆ ಹೇಳಿದ್ಯಾಕೆ?

(ಚಿತ್ರ ಕೃಪೆ: ಉಪೇಂದ್ರ ಇನ್‌ಸ್ಟಾಗ್ರಾಮ್)

ಜೀವನದಲ್ಲಿ ಶೋಧನೆ ಇಲ್ದೆ ಸಾಧನೆ ಇಲ್ಲ. ಅದಕ್ಕೆ ಜೀವನದಲ್ಲಿ ಎಲ್ಲವೂ ಇರಬೇಕು ಅನ್ನೋದನ್ನ ಸೂಪರ್ ಸ್ಟಾರ್ ರಜಿಕಾಂತ್ ಹೇಳುತ್ತಾರೆ ಅನ್ನೋದನ್ನ ಉಪೇಂದ್ರ ಈಗ ನೆನಪಿಸಿಕೊಳ್ಳುತ್ತಾರೆ.

ಕೂಲಿ ಚಿತ್ರದ ಆ ಒಂದು ಸೀನ್

ಕೂಲಿ ಚಿತ್ರದಲ್ಲಿ ಉಪೇಂದ್ರ ಒಂದು ರಿಯಾಕ್ಷನ್ ಕೊಡ್ತಾರೆ. ರಜನಿಯನ್ನ ನೋಡಿ ತಿರುಗುವ ಸೀನ್ ಅದಾಗಿದೆ. ಆದರೆ, ರಜನಿಕಾಂತ್ ಹೇಳಿದ್ದರು. ಹಾಗೆ ಸುಮ್ನೆ ಮಾಡ್ಬೇಡಿ. ಪ್ಲೈಯಿಂಗ್ ಕಿಸ್ ಕೊಟ್ಟು ಎಂಡ್ ಮಾಡಿ ಅಂತಲೇ ಹೇಳಿದ್ದರು.

ಹೀಗೆ ರಜನಿಕಾಂತ್ ಪ್ರತಿಯೊಂದು ಕ್ಷಣವನ್ನು ಎಂಜಾಯ್ ಮಾಡ್ತಾ ಇದ್ದರು. ಆದರೆ, ಇವರು ತಮ್ಮ ಜೊತೆಗೆ ತಾವೇ ಇರೋದನ್ನ ಕಲಿತುಕೊಂಡಿದ್ದಾರೆ. ಅದು ಎಲ್ಲರಿಗೂ ಬರೋದಿಲ್ಲ. ನಮ್ಮನ್ನ ನಾವು ಸಹಿಸಿಕೊಳ್ಳಬೇಕು ಅನ್ನುವ ಮಾತು ಇದೆ ನೋಡಿ ಅನ್ನೋದನ್ನು ಉಪೇಂದ್ರ ಇಲ್ಲಿ ನೆನಪಿಸಿಕೊಂಡಿದ್ದಾರೆ.

ಅಣ್ಣಾವ್ರು ಹೇಳಿದ ಸಮಾಜ ಸೇವೆ ಮಾತು

ಡಾಕ್ಟರ್ ರಾಜಕುಮಾರ್ ಅವರ ಮುಂದೆ ಕುಳಿತುಕೊಳ್ಳುವುದೇ ಒಂದು ಅತಿ ದೊಡ್ಡ ಅನುಭವ ಆಗಿರುತ್ತದೆ. ಅವರಿಗೆ ಏನು ಕೇಳೋದೇ ಬೇಡ. ಅವರ ಮಾತು ಕೇಳ್ತಾ ಹೋದರೆ ಅದೇನೋ ಖುಷಿ ಆಗ್ತಾ ಇತ್ತು.

real star upendra share interesting experience with legendary actors

ಶೋಧನೆ ಇಲ್ಲದೆ ಸಾಧನೆ ಇಲ್ಲ..

(ಚಿತ್ರ ಕೃಪೆ: ಉಪೇಂದ್ರ ಇನ್‌ಸ್ಟಾಗ್ರಾಮ್)

ಆದರೂ ಉಪೇಂದ್ರ ಒಂದು ಪ್ರಶ್ನೆ ಕೇಳಿದ್ದರು. ಸಮಾಜ ಸೇವೆ ಅಂದರೆ ಏನು ಅಂತಲೆ ಉಪ್ಪಿ ಅಣ್ಣಾವ್ರಿಗೆ ಆ ದಿನ ಪ್ರಶ್ನೆ ಮಾಡಿದ್ದರು. ಅದಕ್ಕೆ ಅಣ್ಣಾವ್ರು ಉತ್ತರ ಕೊಟ್ಟಿದ್ದರು. ನಾನು, ನೀವು, ಅಲ್ಲಿ ಕಾರ್ ತೊಳೆಯೋನು, ಗಿಡಕ್ಕೆ ನೀರು ಹಾಕುವವನು ಹೀಗೆ ಇವರೆಲ್ಲ ತಮ್ಮ ಸೇವೆ ಮಾಡಿದರೆ ಆಯಿತು. ಅದೇ ಸಮಾಜ ಸೇವೆ ಅಂತ ಹೇಳಿದ್ದರು.

ಅಂಬಿ-ವಿಷ್ಣು ಮನೆಗೂ ಹೋಗ್ತಿದ್ದರು

ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ವಿಷ್ಣುವರ್ಧನ್ ಅಂದರೆ ತುಂಬಾನೆ ಇಷ್ಟ ಆಗ್ತಾ ಇತ್ತು. ಅಂಬರೀಶ್ ಅವರ ಮನೆಗೂ ಹೋಗ್ತಾ ಇದ್ದರು. ಏನೋ ಒಂದು ಉದೇಶ ಇಟ್ಟುಕೊಂಡು ಹೋಗ್ತಾನೇ ಇರಲಿಲ್ಲ.

ಪ್ರೀತಿ ಪುಸ್ತಕದ ಬದನೆಕಾಯಿ..

ಉಪೇಂದ್ರ ಅವರು ತಮ್ಮ “A” ಚಿತ್ರದಲ್ಲಿ ಈ ಪ್ರೀತಿ ಈ ಪ್ರೇಮ ಎಲ್ಲಾ ಪುಸ್ತಕದ ಬದನೆಕಾಯಿ ಅಂತ ಹೇಳಿದ್ದಾರೆ. ಆದರೆ, ನಿಜ ಜೀವನದಲ್ಲಿ ಇವರು ಪ್ರೀತಿಸಿಯೇ ಮದುವೆ ಆಗಿದ್ದಾರೆ.

ಇದಕ್ಕೆ ಉಪ್ಪಿ ಏನ್ ಹೇಳ್ತಾರೆ ಅನ್ನುವ ಅಭಿಮಾನಿಗಳ ಪ್ರಶ್ನೆಯನ್ನ ರಶ್ಮಿ ಅವರು ಇಲ್ಲಿ ಕೇಳ್ತಾರೆ. ಇದಕ್ಕೆ ಉಪ್ಪಿ ಉತ್ತರ ಕೊಟ್ಟಿದ್ದಾರೆ. ಈ ಪ್ರಶ್ನೆ ಕೇಳಿದವರು ಬಹುಶಃ “A” ಚಿತ್ರವನ್ನ ಪೂರ್ತಿ ನೋಡಿಲ್ಲ ಅನಿಸುತ್ತದೆ ಅನ್ನೋ ಉತ್ತರವನ್ನೆ ಉಪೇಂದ್ರ ಇಲ್ಲಿ ಕೊಟ್ಟಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed