Last Updated:
Re-Marriage: ಈಗಾಗಲೇ ಮದುವೆಯಾಗಿ ಸಂಸಾರ ನಡೆಸುತ್ತಿದ್ದ 9 ಮಂದಿ ಗಂಡ ಹೆಂಡತಿ ಮತ್ತೆ ಮರುಮದುವೆಯಾಗಿದ್ದಾರೆ! ಅದೇ 9 ಮಂದಿ ಗಂಡಂದಿರು, ತಮ್ಮದೇ ಪತ್ನಿಯರನ್ನು ಮರುವಿವಾಹವಾಗಿದ್ದಾರೆ! ಇದರ ಹಿಂದಿದ್ಯಂತೆ ಆ ಖ್ಯಾತ ಜ್ಯೋತಿಷಿ ಸಲಹೆ!
ಆಂಧ್ರಪ್ರದೇಶ: ಪ್ರಸಿದ್ಧ ಯಾತ್ರಾ ಸ್ಥಳವಾದ ಅನ್ನಾವರಂ ರತ್ನಗಿರಿ ಬೆಟ್ಟಗಳಲ್ಲಿ (Annavaram Ratnagiri Hills) ಒಂದು ಕುತೂಹಲಕಾರಿ ಘಟನೆ ನಡೆದಿದೆ. ಏಳು ಹೆಜ್ಜೆ ನಡೆದು ತಮ್ಮ ವಿವಾಹ ಬಂಧದೊಂದಿಗೆ ಮುಂದೆ ಸಾಗುತ್ತಿದ್ದ ದಂಪತಿಗಳು (couple), ಮತ್ತೊಮ್ಮೆ ಮದುವೆ ಮಂಟಪವನ್ನು ಪ್ರವೇಶಿಸಿದ್ದಾರೆ. ಶ್ರೀ ಸತ್ಯನಾರಾಯಣ ಸ್ವಾಮಿಯನ್ನು (Sri Satyanarayana Swamy) ಸಾಕ್ಷಿಯಾಗಿಟ್ಟುಕೊಂಡು, ಅವರು ಮತ್ತೆ ವಧು-ವರರಾಗಿ ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಅದೇ 9 ಮಂದಿ ಗಂಡಂದಿರು (husband), ತಮ್ಮದೇ ಪತ್ನಿಯರನ್ನು (Wife) ಮರುವಿವಾಹವಾಗಿದ್ದಾರೆ!














