Last Updated:
ಧರ್ಮಶಾಲಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿರುವ ಆರ್ಸಿಬಿ ಕಳಪೆ ಆರಂಭ ಪಡೆದರೂ, ಕೊಹ್ಲಿ, ವೆಂಕಟೇಶ್ ಅಯ್ಯರ್ ಅರ್ಧಶತಕಗಳ ನೆರವಿನಿಂದ ಆರ್ಸಿಬಿ ಪಂಜಾನ್ ತಂಡಕ್ಕೆ 223 ರನ್ಗಳ ಕಠಿಣ ಸವಾಲು ನಿಗದಿ ಮಾಡಿದೆ.
2026ರ ಐಪಿಎಲ್ನ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Punjab Kings vs Royal Challengers Bengaluru) ತಂಡಗಳು ಮುಖಾಮುಖಿಯಾಗಿವೆ. ಧರ್ಮಶಾಲಾ ಮೈದಾನದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿರುವ ಆರ್ಸಿಬಿ ಕಳಪೆ ಆರಂಭ ಪಡೆದರೂ, ಪಂಜಾಬ್ ಕಿಂಗ್ಸ್ಗೆ 223 ರನ್ಗಳ ಕಠಿಣ ಗುರಿ ನಿಗದಿಮಾಡಿದೆ. ವಿರಾಟ್ ಕೊಹ್ಲಿ (58), ವೆಂಕಟೇಶ್ ಅಯ್ಯರ್ (ಅಜೇಯ 73) ಅರ್ಧಶತಕ ಹಾಗೂ ದೇವದತ್ ಪಡಿಕ್ಕಲ್ (45) ಅಬ್ಬರದ ನೆರವಿನಿಂದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದಿದ್ದ ಆರ್ಸಿಬಿ 3ನೇ ಓವರ್ನಲ್ಲೆ ಮೊದಲ ವಿಕೆಟ್ ಕಳೆದುಕೊಂಡಿತು. ಟೂರ್ನಿ ಪೂರ್ತಿ ವಿಫಲರಾಗಿರುವ ಜೇಕಬ್ ಬೆಥೆಲ್ ಇಂದೂ ಕೂಡ ವಿಫಲರಾದರು. ಕೇವಲ 11 ರನ್ಗಳಿಸಿ ಹರ್ಪ್ರೀತ್ ಬ್ರಾರ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ಆದರೆ ವಿರಾಟ್ ಕೊಹ್ಲಿ 2ನೇ ವಿಕೆಟ್ಗೆ ಪಡಿಕ್ಕಲ್ ಜೊತೆಗೂಡಿ ಅತ್ಯುತ್ತಮ ಪ್ರದರ್ಶನ ತೋರಿದರು. ಈ ಜೋಡಿ 76 ರನ್ಗಳ ಜೊತೆಯಾಟ ನಡೆಸಿದರು. ಪಡಿಕ್ಕಲ್ 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 45 ರನ್ಗಳಿಸಿ 10ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಪಡಿಕ್ಕಲ್ ವಿಕೆಟ್ ಕೂಡ ಬ್ರಾರ್ ಪಾಲಾಯಿತು.
ನಂತರ 4ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದ ವೆಂಕಟೇಶ್ ಅಯ್ಯರ್ ರಜತ್ ಪಾಟೀದಾರ್ ಲೋಪವನ್ನ ಸರಿದೂಗಿಸಿದರು. ಕೊಹ್ಲಿ ಜೊತೆಗೂಡಿ 4ನೇ ವಿಕೆಟ್ ಜೊತೆಗೂಡಿ 35 ಎಸೆತಗಳಲ್ಲಿ 60 ರನ್ ಸೇರಿಸಿದರು. ಆರಂಭದಿಂದಲೂ ಪಂಜಾಬ್ ಬೌಲರ್ಗಳನ್ನ ಸಮರ್ಥವಾಗಿ ಎದುರಿಸುತ್ತಿದ್ದ ಕೊಹ್ಲಿ 15ನೇ ಓವರ್ನ ಕೊನೆಯ ಎಸೆತದಲ್ಲಿ ಯುಜ್ವೇಂದ್ರ ಚಹಲ್ ಬೌಲಿಂಗ್ನಲ್ಲಿ ಶ್ರೇಯಸ್ ಅಯ್ಯರ್ಗೆ ಕ್ಯಾಚ್ ನೀಡಿ ಔಟ್ ಆದರು. ಕೊಹ್ಲಿ 37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ 58 ರನ್ಗಳಿಸಿದರು.
ಕೊನೆಯಲ್ಲಿ ಅಬ್ಬರಿಸಿದ ವೆಂಕಟೇಶ್ ಅಯ್ಯರ್ ಹಾಗೂ ಟಿಮ್ ಡೇವಿಡ್ 30 ಎಸೆತಗಳಲ್ಲಿ 65 ರನ್ಗಳಿಸಿ ತಂಡದ ಮೊತ್ತವನ್ನ 222ಕ್ಕೆ ಏರಿಸಿದರು. ವೆಂಕಟೇಶ್ ಅಯ್ಯರ್ ಬಡ್ತಿ ಪಡೆದು ಬಂದು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡರು. 40 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ಗಳ ಸಹಿತ ಅಜೇಯ 73 ರನ್ಗಳಿಸಿದರು. ಟಿಮ್ ಡೇವಿಡ್ 12 ಎಸೆತಗಳಲ್ಲಿ ತಲಾ 2 ಬೌಂಡರಿ, ಸಿಕ್ಸರ್ಗಳ ಸಹಿತ 28 ರನ್ಗಳಿಸಿ ಕೊನೆಯ ಎಸೆತದಲ್ಲಿ ಕ್ಯಾಚ್ ಔಟ್ ಆದರು.
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ಶಶಾಂಕ್ ಸಿಂಗ್, ಅಜ್ಮತ್ವುಲ್ಲಾ ಒಮರ್ಝೈ , ಹರ್ಪ್ರೀತ್ ಬ್ರಾರ್, ಲಾಕಿ ಫರ್ಗುಸನ್, ಅರ್ಷ್ದೀಪ್ ಸಿಂಗ್, ಯುಜ್ವೇಂದ್ರ ಚಹಲ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ (ನಾಯಕ), ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್ವುಡ್, ಸುಯಾಶ್ ಶರ್ಮಾ.











