Namma Metro: ಬೆಂಗಳೂರಿಗರೇ ರೆಡಿಯಾಗಿ, ನಗರದ ಅತಿ ಉದ್ದದ ಮೆಟ್ರೋ ಮಾರ್ಗಕ್ಕೆ ಮುಹೂರ್ತ ಫಿಕ್ಸ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ಮೆಟ್ರೋ ವಿಸ್ತರಣೆ


Last Updated:

ಬೆಂಗಳೂರು BMRCL 73 ಕಿಮೀ ಹೊಸ Metro ಕಾರಿಡಾರ್ ಯೋಜನೆ ಪೂರ್ಣ ಅಧ್ಯಯನ, ಕಲೇನ ಅಗ್ರಹಾರದಿಂದ ಕಾಡುಗೋಡಿ Tree Park, ಜಿಗಣಿ Spur ಮೂಲಕ ಕ್ರಿಕೆಟ್ ಕ್ರೀಡಾಂಗಣಕ್ಕೂ ಸಂಪರ್ಕ.

ಬೆಂಗಳೂರು ಮೆಟ್ರೋ ವಿಸ್ತರಣೆ
ಬೆಂಗಳೂರು ಮೆಟ್ರೋ ವಿಸ್ತರಣೆ

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್‍ನಲ್ಲಿ (Traffic) ಸಿಲುಕಿ ಬೇಸತ್ತಿರುವ ಜನರಿಗೆ ನಮ್ಮ ಮೆಟ್ರೋ (Metro) ಒಂದು ಸಿಹಿ ಸುದ್ದಿ ನೀಡಿದೆ. ಬೆಂಗಳೂರಿನ (Bengaluru) ಇತಿಹಾಸದಲ್ಲೇ ಅತಿ ಉದ್ದದ ಸಿಂಗಲ್ ಕಾರಿಡಾರ್ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್ (BMRCL) ಈಗ ಕಾರ್ಯಸಾಧ್ಯತಾ ಅಧ್ಯಯನವನ್ನು ಪೂರ್ಣಗೊಳಿಸಿದೆ. ಇದು ಬರೋಬ್ಬರಿ 73 ಕಿಲೋಮೀಟರ್ ಉದ್ದದ ಬೃಹತ್ ಯೋಜನೆಯಾಗಿದ್ದು, ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳನ್ನು ಬೆಸೆಯಲಿದೆ.

ಎಲ್ಲಿಂದ ಎಲ್ಲಿಗೆ ಈ ಪ್ರಯಾಣ?

ದಕ್ಷಿಣದ ಕಲೇನ ಅಗ್ರಹಾರದಿಂದ ಆರಂಭವಾಗಿ, ವೇಗವಾಗಿ ಬೆಳೆಯುತ್ತಿರುವ ಸರ್ಜಾಪುರ ಟೆಕ್ ಕಾರಿಡಾರ್ ಮೂಲಕ ಹಾದು, ಪೂರ್ವದ ಕಾಡುಗೋಡಿ ಟ್ರೀ ಪಾರ್ಕ್‍ಗೆ ಈ ಮೆಟ್ರೋ ಸಂಪರ್ಕ ಕಲ್ಪಿಸಲಿದೆ. ಇದು ಕೇವಲ ಒಂದು ಮಾರ್ಗವಲ್ಲ, ಬದಲಿಗೆ ಬೆಂಗಳೂರಿನ ಐಟಿ ವಲಯದ ಜೀವನಾಡಿಯಾಗಲಿದೆ. ವಿಶೇಷವೆಂದರೆ, ಆನೇಕಲ್ ತಾಲ್ಲೂಕಿನಲ್ಲಿ ನಿರ್ಮಾಣವಾಗಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಂಪರ್ಕ ನೀಡಲು ಜಿಗಣಿಯಿಂದ 5 ಕಿಲೋಮೀಟರ್ ನ ಒಂದು ಪ್ರತ್ಯೇಕ ‘ಸ್ಪರ್’ ಮಾರ್ಗವನ್ನು ಕೂಡ ಸೇರಿಸಲಾಗಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಕ್ರೀಡಾಂಗಣದ ಪಕ್ಕದಲ್ಲೇ ಮೆಟ್ರೋ ನಿಲ್ದಾಣ

ಇತ್ತೀಚೆಗೆ ಕೈಗಾರಿಕೋದ್ಯಮಿ ಕಿರಣ್ ಮಜುಂದಾರ್-ಶಾ ಅವರು 80,000 ಆಸನಗಳ ಕ್ರೀಡಾಂಗಣಕ್ಕೆ ಮೆಟ್ರೋ ಸಂಪರ್ಕವಿಲ್ಲದಿದ್ದರೆ ಅದು ವ್ಯರ್ಥವದಂತೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಆದರೆ ಈಗಿನ ಯೋಜನೆಯಂತೆ ಕ್ರೀಡಾಂಗಣದ ಪಕ್ಕದಲ್ಲೇ ಒಂದು ನಿಲ್ದಾಣ ಮತ್ತು ಇಂಡ್ಲವಾಡಿಯಲ್ಲಿ ಮತ್ತೊಂದು ನಿಲ್ದಾಣ ನಿರ್ಮಾಣವಾಗಲಿದೆ. ಇಡೀ 73 ಕಿ.ಮೀ ಮಾರ್ಗವು ಎತ್ತರಿಸಿದ ಮಾರ್ಗ ಆಗಿರಲಿದೆ ಎಂಬುದು ಗಮನಾರ್ಹ.

ಒಂದು ಕಡೆ ಬೆಂಗಳೂರಿನಲ್ಲಿ ಮೆಟ್ರೋ ವಿಸ್ತರಣೆಯಾಗುತ್ತಿದ್ದರೆ, ಬೊಮ್ಮಸಂದ್ರದಿಂದ ಹೊಸೂರು ನಡುವಿನ ಅಂತರಾಜ್ಯ ಮೆಟ್ರೋ ಯೋಜನೆಗೆ ಕರ್ನಾಟಕ ಸರ್ಕಾರ ಅಷ್ಟೇನೂ ಆಸಕ್ತಿ ತೋರಿಸಿಲ್ಲ. ಅದರ ಬದಲು ನಗರದ ಒಳಗಿನ ಸಂಪರ್ಕಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed