Last Updated:
ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್, ವೈಭವ್ ಸೂರ್ಯವಂಶಿ ಐದು ಅವಾರ್ಡ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಭಾರೀ ಪ್ರಶಂಸೆ, ಟೀಂ ಇಂಡಿಯಾ ಎ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.
ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) (ಆರ್ಸಿಬಿ) ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಭಾನುವಾರ ಅಹಮದಾಬಾದ್ ಕ್ರೀಡಾಂಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡ ಗುಜರಾತ್ ತಂಡವನ್ನು (Gujarat Titans) ಮಣಿಸಿ 5 ವಿಕೆಟ್ ಗಳ ಗೆಲುವು ಪಡೆದುಕೊಂಡಿತು. ಆದರೆ ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ (Rajasthan Royals) ಯುವ ಆಟಗಾರ ವೈಭವ್ ಸೂರ್ಯವಂಶಿ (Vaibhav Suryavanshi) ಕ್ರೀಡಾಂಗಣದಲ್ಲಿ ಹಾಜರಿದ್ದರು. ಇದರೊಂದಿಗೆ ಎಲ್ಲರ ದೃಷ್ಟಿ ವೈಭವ್ ಅವರ ಮೇಲೆ ಬಿದ್ದಿತ್ತು.
ಸಚಿನ್ ತೆಂಡೂಲ್ಕರ್ ಅವರಿಂದ ಪ್ರಶಂಸೆಯನ್ನು ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಮತ್ತೊಂದು ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕೂಡ ವೈಭವ್ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಫೈನಲ್ ಪಂದ್ಯದ ಬಳಿಕ ವಿರಾಟ್ ಕೊಹ್ಲಿಗೆ, ಸೂರ್ಯವಂಶಿ ಶುಭಾಶಯ ತಿಳಿಸಿದ್ದು, ಕೊಹ್ಲಿ ಈ ವೇಳೆ ಅವರನ್ನು ಆತ್ಮೀಯವಾಗಿ ಹಗ್ ಮಾಡಿದ್ದರು.
ಐಪಿಎಲ್ ಫೈನಲ್ ಪಂದ್ಯದ ಮುನ್ನಕ್ಕೂ ಮುನ್ನ ಸಚಿನ್ ಅವರು ಕೂಡ ವೈಭವ್ ಅವರನ್ನು ಹಾಡಿಹೊಗಳಿದ್ದರು. ಕೂಡಲೇ ವೈಭವ್ ಸೂರ್ಯವಂಶಿಯನ್ನು ಟೆಸ್ಟ್ ಕ್ರಿಕೆಟ್ ಗೆ ಆಯ್ಕೆ ಮಾಡಬೇಕು ಎಂದು ಬಿಸಿಸಿಐ ಮುಖ್ಯ ಆಯ್ಕೆ ಸಮಿತಿಗೆ ಸೂಚನೆ ನೀಡಿದ್ದರು. ಐಪಿಎಲ್ ಆವೃತ್ತಿಯ ಆರಂಭದಲ್ಲಿಯೇ ಗುವಾಹಟಿಯಲ್ಲಿ ನಡೆದ ಮ್ಯಾಚ್ ಬಳಿಕ ವೈಭವ್ ಟ್ರೋಫಿ ಮೇಲೆ ಕೊಹ್ಲಿ ಆಟೋಗ್ರಾಫ್ ನೀಡಿದ್ದರು.
ಈ ಐಪಿಎಲ್ ಆವೃತ್ತಿಯಲ್ಲಿ ಸೂಯವಂಶಿ ಐದು ಅವಾರ್ಡ್ ಗಳನ್ನು ಪಡೆದುಕೊಂಡು ದಾಖಲೆ ಬರೆದಿದ್ದು, ಆರೆಂಜ್ ಕ್ಯಾಪ್ ಜೊತೆಗೆ ಹೆಚ್ಚು ಸಿಕ್ಸರ್, ಸೂಪರ್ ಸ್ಟ್ರೈಕರ್, ಮೋಸ್ಟ್ ವ್ಯಾಲೂಬಲ್ ಪ್ಲೇಯರ್, ಉದಯೋನ್ಮುಖ ಆಟಗಾರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಆವೃತ್ತಿಯಲ್ಲಿ 72 ಸಿಕ್ಸರ್ ಸಿಡಿಸಿರುವ ವೈಭವ್, ಐಪಿಎಲ್ ಆವೃತತ್ತಿಯೊಂದರಲ್ಲಿ (59 ಸಿಕ್ಸರ್) ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರ ಎಂದು ದಾಖಲೆ ನಿರ್ಮಿಸಿದ್ದ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ಹೊಸ ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಕಡಿಮೆ ವಯಸ್ಸಿನಲ್ಲಿ ವೇಗವಾಗಿ ಸಾವಿರ ರನ್ ಗಳಿಸಿದ ಭಾರತ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಹಿಂದೆ ರಿಷಭ್ ಪಂತ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಐಪಿಎಲ್ ಫೈನಲ್ ಬಳಿಕ ಕ್ರಿಕೆಟ್ ವಿಶ್ಲೇಷಕ ರವಿಶಾಸ್ತ್ರಿ ಅವರೊಂದಿಗೆ ಮಾತನಾಡಿದ ವೈಭವ್, ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ. ‘ಸುದೀರ್ಘ ಸಮಯದ ವರೆಗೂ ನಾನು ಕ್ರಿಕೆಟ್ ಆಡಬೇಕು. ಫಿಟ್ನೆಸ್ ಬಗ್ಗೆ ವಿಶೇಷ ಕಳಜಿ ವಹಿಸಬೇಕು. ಗಾಯ ಸಮಸ್ಯೆಗೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು. ಭವಿಷ್ಯದಲ್ಲಿ ಫಿಟ್ನೆಸ್ ಬಗ್ಗೆ ಮತ್ತಷ್ಟು ಎಚ್ಚರಿಕೆ ವಹಿಸುವುದಾಗಿ’ ವೈಭವ್ ತಿಳಿಸಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದ ಸಂದರ್ಭದಲ್ಲಿ ವೈಭವ್, ವಿಐಪಿ ಬಾಕ್ಸ್ ನಲ್ಲಿ ಜೈ ಶಾ ಅವರ ಪಕ್ಕದಲ್ಲೇ ಕುಳಿತುಕೊಂಡಿದ್ದು ಎಲ್ಲರ ಗಮನ ಸೆಳೆಯಿತು. ಇದರೊಂದಿಗೆ ವೈಭವ್ ಶೀಘ್ರವೇ ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ ಎಂಬ ಪ್ರಚಾರವೂ ನಡೆಯುತ್ತಿದೆ. ಭಾರತ ಎ ತಂಡದ ಪರ ವೈಭವ್ ಸೂರ್ಯವಂಶಿ ಶ್ರೀಲಂಕಾ ಪ್ರವಾಸದಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿ ವೈಭವ್ ತಮ್ಮ ಸಾಮರ್ಥ್ಯ ಸಾಬೀತು ಮಾಡಿದರೆ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡೋದು ಮತ್ತಷ್ಟು ಹತ್ತಿರವಾಗಲಿದೆ ಎಂದು ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Bangalore [Bangalore],Bangalore,Karnataka













