Last Updated:
S Janaki: ಗಾನ ನಿಲ್ಲಿಸಿದ ಹಾಡು ಕೋಗಿಲೆಗೆ ಇಂಡಸ್ಟ್ರಿಯ ಗಣ್ಯರು ಅಕ್ಷರ ನಮನ ಸಲ್ಲಿಸಿದ್ದಾರೆ. ರಜನಿ, ಸುದೀಪ್, ಚಿರಂಜೀವಿ ಸೇರಿ ಬಹಳಷ್ಟು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಗಾನ ಕೋಗಿಲೆ ಹಾಡು ನಿಲ್ಲಿಸಿಯಾಗಿದೆ. ಭಾರತೀಯ ಸಂಗೀಯ ಲೋಕಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ. ಬಹು ಭಾಷೆಗಳಲ್ಲಿ ಹಾಡಿ ಸಂಗೀತ ಪ್ರಿಯರ ಕಣ್ಮಣಿಯಾಗಿದ್ದ ಎಸ್ ಜಾನಕಿ (S Janaki) ಅವರು ನಿಧನರಾಗಿದ್ದಾರೆ. ಹಿರಿಯ ಖ್ಯಾತ ಗಾಯಕಿಯ (Singer) ಸಾವಿನ ಸುದ್ದಿ ಕೇಳಿ ಬಣ್ಣದ ಲೋಕದ ಬಹಳಷ್ಟು ಜನರು ಸಂತಾಪ ಸೂಚಿಸಿದ್ದಾರೆ.
ಅನೇಕ ಹಾಡುಗಳ ಹಿಂದೆ ಜಾನಕಮ್ಮ ಮಧುರ ಧ್ವನಿಯಿದೆ. ಅವರ ಹಾಡುಗಳು ಕೇಳಿದಾಗೆಲ್ಲಾ ಆ ದಿನಗಳು ನೆನಪಾಗುತ್ತೆ. ಅವರು ಹಾಡಿದ ಪ್ರತಿಯೊಂದು ಹಾಡೂ ಒಂದು ನೆನಪು ಒಂದು ಭಾವನೆ.. ಜೀವನಪೂರ್ತಿ ಉಳಿಯುವ ಬಂಧ, ಸಂಗೀತ ಲೋಕದ ಶಿಖರವನ್ನ ಕಳೆದುಕೊಂಡಿದ್ದೇವೆ ಎಂದಿದ್ದಾರೆ.
ತಮ್ಮ ಮಧುರ ಕಂಠಸಿರಿಯಿಂದ ಜನರನ್ನ ರಂಜಿಸಿದರು. ಜಾನಕಮ್ಮನವರ ಅಗಲಿಕೆ ತೀವ್ರ ದುಃಖ ತಂದಿದೆ. ಜಾನಕಮ್ಮನವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಾನಕಮ್ಮರನ್ನ ರಜನೀಕಾಂತ್ ನೆನಪಿಸಿಕೊಂಡಿದ್ದಾರೆ.
ನಮ್ಮ ಹೆಮ್ಮೆಯ ಗಾನಕೋಗಿಲೆ ಜಾನಕಮ್ಮ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಆಘಾತವಾಗಿದೆ. ಅಪ್ಪಾಜಿಯವರ ಜೊತೆ ನೂರಾರು ಹಾಡು ಹಾಡಿದ್ರು. ಅವರ ನೂರಾರು ಹಾಡುಗಳು ಎಂದಿಗೂ ಅಮರ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.
ಸಂಗೀತ ಲೋಕದ ಸುವರ್ಣ ಅಧ್ಯಾಯ ಮುಗಿದಿದೆ. ಜಾನಕಮ್ಮ ಅವರ ಧ್ವನಿ ಮರೆಯಲು ಆಗೋದಿಲ್ಲ. ಈ ಧ್ವನಿ ತಲೆಮಾರುಗಳ ಕಾಲ ನಮ್ಮನ್ನು ಆಳಿದೆ. ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ.. ಓಂ ಶಾಂತಿ ಎಂದಿದ್ದಾರೆ.
ಅಪ್ರತಿಮ ಗಾಯಕಿ ಎಸ್ ಜಾನಕಿ ಅಗಲಿದ್ದಾರೆ. ಜಾನಕಿ ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ. ಅವರ ಧ್ವನಿಯಲ್ಲಿನ ಮಾಧುರ್ಯ ಮರೆಯಲಾಗಲ್ಲ. ಸಂಗೀತ ಪ್ರೇಮಿಗಳ ಹೃದಯದಲ್ಲಿ ಅವರು ಚಿರಸ್ಥಾಯಿ ಎಂದಿದ್ದಾರೆ.
ಎಸ್ ಜಾನಕಿ ಅಮ್ಮ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿ. ಅವರ ನಿಧನದಿಂದ ಸಂಗೀತ ಲೋಕ ಬಡವಾಗಿದೆ. ಅವರ ಅದ್ಭುತ ಗಾಯನ ನಮಗೆ ಪ್ರೇರಣೆ. ಜಾನಕಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದಿದ್ದಾರೆ.
ಕುಟುಂಬಸ್ಥರೆಲ್ಲಾ ಹೈದ್ರಾಬಾದ್, ಕೇರಳ, ವಿದೇಶದಲ್ಲಿದ್ದಾರೆ. ಹೀಗಾಗಿ ನವೀನ್ ಎಂಬಾತ ಜಾನಕಿಯವ್ರ ಜವಾಬ್ದಾರಿಯನ್ನ ಹೊಂದಿದ್ದರು.
Bangalore,Karnataka














