Last Updated:
ರಶ್ಮಿಕಾ ಮಂದಣ್ಣ ಅವರ ವರ್ಕೌಟ್ ವಿಡಿಯೋ ಮೋಟಿವೇಟ್ ಮಾಡುತ್ತಿದೆ. ಇದನ್ನ ಸ್ವತಃ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಇದರ ಕಂಪ್ಲಿಟ್ ವಿವರ ಇಲ್ಲಿದೆ ಓದಿ.
ರಶ್ಮಿಕಾ ಮಂದಣ್ಣ (Rashmika Mandanna) ಮೊದಲನಿಂದಲೂ ವರ್ಕೌಟ್ ಮಾಡ್ತಾನೇ ಇದ್ದಾರೆ. ಕಿರಿಕ್ ಪಾರ್ಟಿ (Kirik Party) ಟೈಮ್ ಅಲ್ಲಿ ಅಷ್ಟೇನು ವರ್ಕೌಟ್ ಫ್ರೀಕ್ (Workout Freak) ಆಗಿರಲಿಲ್ಲ ಬಿಡಿ. ಆದರೆ, ತೆಲುಗು ಚಿತ್ರರಂಗದಲ್ಲಿ ಮಿಂಚೋಕೆ ಶುರು ಮಾಡಿದ್ಮೇಲೆ ರಶ್ಮಿಕಾ ತಮ್ಮ ಫಿಜಿಕ್ ಮೇಲೆ ವರ್ಕೌಟ್ ಮಾಡೋಕೆ ಶುರು ಮಾಡಿದ್ದಾರೆ. ನಾನು ಎಲ್ಲೂ ಕಾಣದೇ ಇದ್ದರೆ ಆಯಿತು. ಜಿಮ್ ಅಲ್ಲಿ ಪಕ್ಕಾ ಸಿಗುತ್ತೇನೆ ಅಂತಲೂ ಹೇಳಿಕೊಳ್ತಾರೆ. ಅಂದ್ರೆ ಟೈಮ್ ಸಿಕ್ಕರೆ ಆಯಿತು. ಜಿಮ್ ಅಲ್ಲಿಯೇ ಕಳೆದು ಹೋಗ್ತಾರೆ. ಆದರೆ, ಇವರು ಪ್ರೊಟೀನ್ ಶೇಕ್ (Protein Shake) ಕುಡಿಯುತ್ತಾರೆ. ಇನ್ನು ಏನೆಲ್ಲ ಇರುತ್ತದೆ ಅನ್ನೋದು ಇಲ್ಲಿದೆ ಓದಿ.
ರಶ್ಮಿಕಾ ವರ್ಕೌಟ್
(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್)
ಇದಕ್ಕೆ ಅವರೇ ಹೇಳಿದ ಒಂದು ಮಾತು ಹೆಚ್ಚು ಇಂಟ್ರಸ್ಟಿಂಗ್ ಆಗಿದೆ. ನಾನು ಒಂದು ವೇಳೆ ನಿಮಗೆ ಕಾಣಿಸಲಿಲ್ಲಅಂದ್ರೆ ಜಿಮ್ ಅಲ್ಲಿ ಪಕ್ಕಾ ಸಿಗುತ್ತೇನೆ ಅಂತಲೇ ಹೇಳಿದ್ದಾರೆ. ಈ ಮಾತನ್ನ ರಶ್ಮಿಕಾ ಮಂದಣ್ಣ ಇಂಗ್ಲಿಷ್ ಹೀಗೆ ಬರೆದುಕೊಂಡಿದ್ದಾರೆ. “You know where to find me if I go missing”
ರಶ್ಮಿಕಾ ಮಂದಣ್ಣ ಸುಮ್ನೆ ಅಲ್ಲ ಬಿಡಿ. ಸುಮ್ನೆ ಹೋಗಿ ಜಿಮ್ ಅಲ್ಲಿ ಟೈಮ್ ಸ್ಪೆಂಡ್ ಮಾಡೋದಿಲ್ಲ. ಪ್ರಾಪರ್ ಆಗಿಯೇ ವರ್ಕೌಟ್ ಮಾಡ್ತಾರೆ.
ವೇಟ್ ಲಿಫ್ಟ್ ಮಾಡ್ತಾರೆ, ವೇಟ್ ಹಾಕಿಕೊಂಡು ಸ್ಕ್ವಾಟ್ ಮಾಡ್ತಾರೆ. ಅಷ್ಟೆ ಯಾಕೆ? ರಶ್ಮಿಕಾ ಪುಲ್ ಅಪ್ಸ್ ಕೂಡ ಮಾಡ್ತಾರೆ. ಫಿಟ್ ಆಗಿರಲು ಏನೆಲ್ಲ ಮಾಡ್ಬೇಕು ಅದನ್ನೆಲ್ಲ ರಶ್ಮಿಕಾ ಮಂದಣ್ಣ ಮಾಡ್ತಾರೆ.
ಭಾನುವಾರ ಜೂನ್-28.06.2026 ರಂದು ರಶ್ಮಿಕಾ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ರಶ್ಮಿಕಾ ಮಂದಣ್ಣ ಅದೆಷ್ಟು ರೆಡಿ ಆಗಿ ವರ್ಕೌಟ್ ಮಾಡಲು ಬರ್ತಾರೆ ಅನ್ನೋದರ ಝಲಕ್ ಇದೆ.
ವರ್ಕೌಟ್ ಮಾಡಲು ಬೇಕಿರೋ ಶೂ ಧರಿಸಿಕೊಳ್ಳುತ್ತಾರೆ. ಪ್ರೊಟೀನ್ ಶೇಕ್ ಇರೊ ಬಾಟೆಲ್ ಕೂಡ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಒಂಚೂರು ಕುಡಿದೇ ಜಿಮ್ಗೆ ಬರ್ತಾರೆ.
ನಿಮ್ಮ ಫ್ಯಾನ್ಸ್ಗೆ ಇದು ಗೊತ್ತು(ಚಿತ್ರ ಕೃಪೆ: ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್)
ರಶ್ಮಿಕಾ ಮಂದಣ್ಣ ಅವರ ವರ್ಕೌಟ್ ವಿಡಿಯೋ ಅಭಿಮಾನಿಗಳಿಗೆ ಮೋಟಿವೇಟ್ ಮಾಡುತ್ತದೆ. ಇದನ್ನ ಸ್ವತಃ ಅಭಿಮಾನಿಗಳ ಈ ವಿಡಿಯೋದ ಕಾಮೆಂಟ್ ಬಾಕ್ಸ್ ಅಲ್ಲಿ ಬರೆದುಕೊಂಡಿದ್ದಾರೆ.
ನಾನು ಎಲ್ಲೂ ಸಿಗದೇ ಇದ್ದರೆ ಜಿಮ್ ಅಲ್ಲಿ ಪಕ್ಕಾ ಇರುತ್ತೇನೆ ಅಂತ ರಶ್ಮಿಕಾ ಬರೆದಿರೋದು ಗೊತ್ತೇ ಆಗಿದೆ. ಆದರೆ, ಅಭಿಮಾನಿ ಒಬ್ಬರು ಇದಕ್ಕೂ ಒಂದು ಮಾತು ಹೇಳಿದ್ದಾರೆ.
ನಿಮ್ಮ ನಿಜವಾದ ಅಭಿಮಾನಿಗಳಿಗೆ ಈ ವಿಷಯ ಗೊತ್ತಿದೆ. ನೀವು ಇದೇ ರೀತಿ ವರ್ಕೌಟ್ ಕಂಟೆಂಟ್ ಹಾಕ್ತಾನೇ ಇರಿ ಅಂತಲೂ ಬರೆದಿದ್ದಾರೆ. ಒಟ್ನಲ್ಲಿ ರಶ್ಮಿಕಾ ಮಂದಣ್ಣ ಸಿನಿಮಾಗಳ ಮೂಲಕ ಜನರನ್ನ ರಂಜಿಸುತ್ತಿದ್ದಾರೆ. ವರ್ಕೌಟ್ ಮಾಡುವ ವಿಡಿಯೋ ಶೇರ್ ಮಾಡುವುದರೊಂದಿಗೆ ಎಲ್ಲರಿಗೂ ಮೋಟಿವೇಟ್ ಮಾಡ್ತಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka













