IRE vs IND: ಅಭಿಷೇಕ್ ಶರ್ಮಾ ಅರ್ಧ ಶತಕ ರದ್ದು, ಕಾರಣವೇನು? | ಕ್ರೀಡಾ ಸುದ್ದಿ | ACTPnews

ಅಭಿಷೇಕ್ ಶರ್ಮಾ ಅರ್ಧ ಶತಕ ರದ್ಧು


Last Updated:

ಐರ್ಲೆಂಡ್ 183 ರನ್ ಗುರಿ ನೀಡಿದ ಪಂದ್ಯದಲ್ಲಿ ಟೀಂ ಇಂಡಿಯಾ 148 ಕ್ಕೆ ಆಲೌಟ್, ಅಭಿಷೇಕ್ ಶರ್ಮಾ 49 ರನ್ ಏಕಾಂಗಿ ಹೋರಾಟ, 11 ಪ್ರಯತ್ನಗಳ ಬಳಿಕ ಐರ್ಲೆಂಡ್ ಗೆ ಭಾರತ ವಿರುದ್ಧ ಮೊದಲ ಜಯ

ಅಭಿಷೇಕ್ ಶರ್ಮಾ ಅರ್ಧ ಶತಕ ರದ್ಧು
ಅಭಿಷೇಕ್ ಶರ್ಮಾ ಅರ್ಧ ಶತಕ ರದ್ಧು

ಐರ್ಲೆಂಡ್ ಪ್ರವಾಸವನ್ನು ಟೀಂ ಇಂಡಿಯಾ (Team India) ಸೋಲಿನೊಂದಿಗೆ ಪ್ರಾರಂಭಿಸಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತ 34 ರನ್​ಗಳೊಂದಿಗೆ ಸೋಲುಂಡಿತ್ತು. ಐರ್ಲೆಂಡ್ (Ireland Cricket) ನೀಡಿದ್ದ 183 ರನ್ ಗುರಿಯನ್ನು ಟೀಂ ಇಂಡಿಯಾ ಚೇಸ್ ಮಾಡುವುದರಲ್ಲಿ ವಿಫಲವಾಗಿತ್ತು. 148 ರನ್​ಗಳಿಗೆ ಟೀಂ ಇಂಡಿಯಾ ಆಲೌಟ್ ಆಗಿತ್ತು. ಭಾರತದ ತಂಡದಲ್ಲಿ ಅಭಿಷೇಕ್ ಶರ್ಮಾ (Abhishek Sharma)  ಹೊರತುಪಡಿಸಿ ಉಳಿದ ಎಲ್ಲಾ ಆಟಗಾರರು ವೈಫಲ್ಯ ಅನುಭವಿಸಿದ್ದರು.

ಆದರೆ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅರ್ಧ ಶತಕ ಅಚ್ಚರಿಯಾಗಿ ರದ್ದಾಗಿತ್ತು. ಐರ್ಲೆಂಡ್ ಬೌಲರ್ ಲಿಯಾಮ್, ಇನ್ನಿಂಗ್ಸ್‌ನ 8ನೇ ಓವರ್ ಬೌಲ್ ಮಾಡಿದ್ದರು. ಈ ಓವರ್​ನಲ್ಲಿ ಸಿಂಗಲ್ ಪಡೆದ ಅಭಿಷೇಕ್ ಶರ್ಮಾ ಅರ್ಧ ಶತಕ ಗಳಿಸಿದ್ದರು. ಈ ವೇಳೆ ಅಭಿಷೇಕ್ ಶರ್ಮಾ ಸ್ಕೋರ್ 50 ಎಂದು ಪ್ರದರ್ಶನ ಮಾಡಿದ್ದರು. ಇದರೊಂದಿಗೆ ಅಭಿಷೇಕ್ ಸೆಲೆಬ್ರೇಟ್ ಮಾಡಿದ್ದರು. ಫೆವಿಲಿಯನ್​ನಲ್ಲಿದ್ದ ಟೀಂ ಇಂಡಿಯಾ ಆಟಗಾರರು ಕೂಡ ನಿಂತು ಅಭಿಷೇಕ್ ಶರ್ಮಾಗೆ ಅಭಿನಂದಿಸಿದ್ದರು.

ಹಫ್ ಸೆಂಚುರಿ ಮಿಸ್ ಆಗಿದ್ದೇನು?

ಅರ್ಧ ಶತಕ ಪೂರ್ಣಗೊಂಡ ಮರು ಎಸೆತದಲ್ಲೇ ಡೀಪ್ ಮಿಡ್ ವಿಕೆಟ್​ನಲ್ಲಿ ಕಲ್ಲಿಸ್​​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಈ ಸಮಯದಲ್ಲೂ ಕೂಡ ಸ್ಕೋರ್ ಕಾರ್ಡ್​ನಲ್ಲಿ ಅರ್ಧ ಶತಕ, 20 ಎಸೆತಗಳಲ್ಲಿ 50 ರನ್ ಎಂದು ತೋರಿಸಿದ್ದರು. ಆದರೆ ಎರಡನೇ ಓವರ್​​ನಲ್ಲಿ ಲೆಗ್ ಬೈ ಎಂದು ಘೋಷಣೆ ಮಾಡಿದ್ದ ಕಾರಣ ಅಭಿಷೇಕ್ ಶರ್ಮಾ ಅರ್ಧ ಶತಕವನ್ನು 49 ರನ್​ಗಳಿಗೆ ಬದಲಿಸಿದ್ದರು.

ಇನ್ನಿಂಗ್ಸ್​​ನ ಎರಡನೇ ಓವರ್​ನಲ್ಲಿ ಐರಿಶ್​ ವೇಗಿ, ಭಾರತೀಯ ಮೂಲದ ಜೇ ಮುಂದ್ರಾ ಎಸೆದ ಕೊನೆಯ ಎಸೆತವನ್ನು ಶಾರ್ಟ್ ಫೈನ್ ಲೆಗ್ ಕಡೆಗೆ ತಳ್ಳಿದ್ದರು. ಇದರೊಂದಿಗೆ ಅಭಿಷೇಕ್ ಶರ್ಮಾ ಸಿಂಗಲ್ ಪಡೆದುಕೊಂಡಿದ್ದರು. ಮೈದಾನದಲ್ಲಿ ಅಂಪೈರ್ ಇದನ್ನು ಬ್ಯಾಟ್​​ನಿಂದ ರನ್ ಬಂತು ಎಂದು ತೀರ್ಪು ನೀಡಿದ್ದರು. ಆದರೆ ಲೆಗ್ ಬೈ ಎಂದು ತಿಳಿದ ಬಳಿಕ ಅಭಿಷೇಕ್ ಶರ್ಮಾ ಅರ್ಧ ಶತಕದಿಂದ ಒಂದು ರನ್ ಕಡಿಮೆ ಮಾಡಿದ್ದರು. ಇದರೊಂದಿಗೆ ಅರ್ಧ ಶತಕಕ್ಕೆ ಒಂದು ರನ್ ಕಡಿಮೆಯಾಗಿ 49 ರನ್​ಗಳಿಗೆ ಸ್ಕೋರ್ ಇಳಿಕೆ ಆಯ್ತು.

ಏಕಾಂಗಿ ಹೋರಾಟ!

183 ರನ್ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ತಂಡದಲ್ಲಿ ಅಭಿಷೇಕ್ ಶರ್ಮಾ ಏಕಾಂಗಿ ಹೋರಾಟ ಮಾಡಿದ್ದರು. ಆರಂಭಿಕ ಸಂಜು 5 ರನ್, ಇಶನ್ 1 ರನ್, ಶ್ರೇಯಸ್ 3 ರನ್​ಗಳೊಂದಿಗೆ ಪವರ್ ಪ್ಲೇ ನಲ್ಲೇ ಔಟಾಗಿದ್ದರು. ಆದರೆ ಮೆಕಾರ್ಥಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಅಭಿಷೇಕ್ ಹಿಂದಿರುಗುವುದರೊಂದಿಗೆ ಭಾರತದ ಪತನ ಶುರುವಾಗಿತ್ತು. ಆ ಬಳಿಕ ತಿಲಕ್ ವರ್ಮಾ 21 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 19 ರನ್ ಗಳಿಸಿದ್ರು, ವಾಷಿಂಗ್ಟನ್ ಸುಂದರ್ 12 ಎಸೆತಗಳಲ್ಲಿ 9 ರನ್ ಗಳಿಸಿ ಹಿಂದಿರುಗಿದ್ದರು. ಶಿವಮ್ ದುಬೆ 25 ರನ್ ಗಳಿಸಿ ಅಲ್ಪ ಹೋರಾಟ ತೋರಿದ್ದರು. ಆದರೆ ಐರ್ಲೆಂಡ್ ಬೌಲರ್​ಗಳು ಯಾವುದೇ ಅವಕಾಶ ನೀಡದೇ ಸತತವಾಗಿ ವಿಕೆಟ್ ಕೀಳುತ್ತಾ ಭಾರತ ಸೋಲಿಗೆ ಕಾರಣವಾದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports