Last Updated:
Ranu Mondal: ವೈರಲ್ ಆಗಿದ್ದ ರಾನು ಈಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಮತ್ತೆ ಅವರ ಹಾಡು ವೈರಲ್ ಆಗಿದ್ದು ಭರ್ಜರಿ ವ್ಯೂಸ್ ಗಳಿಸಿದೆ.
ರೈಲ್ವೆ ನಿಲ್ದಾಣದಲ್ಲಿ (Railway Station) ತನ್ನ ಸುಮಧುರ ಗಾಯನದ ಧ್ವನಿಯಿಂದ ಭಾರೀ ವೈರಲ್ (Viral) ಆಗಿದ್ದ ರಾನು ಮಂಡಲ್ (Ranu Mandal) ಮತ್ತೆ ಸುದ್ದಿಯಲ್ಲಿದ್ದಾರೆ. ಅವರ ಹೊಸ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಕಾಣಿಸಿಕೊಂಡಿದ್ದು, ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಈ ಇತ್ತೀಚಿನ ಕ್ಲಿಪ್‌ನಲ್ಲಿ, ಅವರು 90 ರ ದಶಕದ ಸೂಪರ್‌ಹಿಟ್ ರೊಮ್ಯಾಂಟಿಕ್ ಟ್ರ್ಯಾಕ್ “ಲಾಲ್ ದುಪಟ್ಟಾ ವಾಲಿ” ಹಾಡುತ್ತಿದ್ದಾರೆ. ಅವರ ವಿಡಿಯೋ ಇಂಟರ್ನೆಟ್ ಬಳಕೆದಾರರ ಗಮನ ಸೆಳೆದಿದೆ.














