Last Updated:
ರಂಗಾಯನ ರಘು ನಗ್ತಾನೆ ನಗಿಸ್ತಾನೆ ಬೇಸರ ವ್ಯಕ್ತಪಡಿಸಿದ್ದಾರೆ. ನಾವು ವಿಶಾಲ ಹೃದಯದವರು ನೋಡಿ. ಎಲ್ಲ ಭಾಷೆಯ ಚಿತ್ರಗಳನ್ನು ಬಿಟ್ಟುಕೊಳ್ಳುತ್ತೇವೆ. ಆದರೆ, ನಮ್ಮ ಚಿತ್ರಗಳು ಬೇರೆ ಕಡೆಗೆ ಹೋಗ್ಬೇಕು ಅಂದ್ರೆ ಬೇಡಿಕೊಳ್ಳುವ ಸ್ಥಿತಿ ಇದೆ ಅಂತಲೇ ಹೇಳಿದ್ದಾರೆ. ಇವರ ಮಾತುಗಳ ವಿವರ ಮುಂದೆ ಇದೆ ಓದಿ.
ಕನ್ನಡ ಚಿತ್ರಗಳಿಗೆ (Kannada Movies) ಕರ್ನಾಟಕದಲ್ಲಿ ಥಿಯೇಟರ್ಗಳೇ (Theaters) ಇಲ್ಲ. ತೆಲುಗು ಚಿತ್ರಗಳೂ ಬರುತ್ತವೆ. ತಮಿಳು ಸಿನಿಮಾಗಳು (Tamil Movies) ಆವರಿಸಿಕೊಳ್ಳುತ್ತವೆ. ಅಷ್ಟೆ ಯಾಕೆ ಮಲೆಯಾಳಂ ಚಿತ್ರಗಳೂ ಬರ್ತಿವೆ. ಆದರೆ, ನಮ್ಮ ಚಿತ್ರಗಳನ್ನ ನಾವು ಪರ ಭಾಷೆಯಲ್ಲಿ ರಿಲೀಸ್ ಮಾಡೋಕೆ ಬೇಡಿಕೊಳ್ಳಬೇಕಿದೆ. ಆ ರೀತಿಯ ಸ್ಥಿತಿನೇ ಇದೆ ಅಂತ ಬೇಸರದಲ್ಲಿಯೇ ಹೇಳಿದ್ದಾರೆ. ಆದರೆ, ತಮ್ಮ ಎಂದಿನ ಹಾಸ್ಯದ ಶೈಲಿಯಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಇವರ ಮಾತುಗಳಿಗೆ ನಟ ಸಾಧು ಕೋಕಿಲ (Sadhu Kokila) ಕೂಡ ಸಾಥ್ ಕೊಟ್ಟಿದ್ದಾರೆ. ಈ ಹಾಸ್ಯ ಕಲಾವಿದರ ಬೇಸರದ ಮಾತುಗಳು ಇಂತಿವೆ ಓದಿ..
ನಮ್ಮ ಪಿನಾಕ ಚಿತ್ರ ಚೆನ್ನಾಗಿ ಬಂದಿದೆ. ಟೀಸರ್ ನೋಡಿದಾಗ ಖುಷಿ ಆಯಿತು. ಇದನ್ನ ಪ್ಯಾನ್ ಇಂಡಿಯಾ ಅಂತಿದ್ದಾರೆ. ನಮ್ಮ ಚಿತ್ರಕ್ಕೆ ಪರ ಭಾಷೆಯಲ್ಲಿ ಜಾಗವೇ ಇಲ್ಲ.
ತೆಲಗಮ್ಮ ಪೆದ್ದಮ್ಮ..
ನಾವು ವಿಶಾಲ ಹೃದಯದವರು ನೋಡಿ. ತಮಿಳರಿಗೆ, ತೆಲಗರಿಗೆ, ಈಗ ಮಲೆಯಾಳಿಗಳೂ ಬಂದಿದ್ದಾರೆ. ಆದರೆ, ನಾವು ನಮ್ಮ ಚಿತ್ರಗಳನ್ನ ಬೇರೆ ಭಾಷೆಯಲ್ಲಿ ರಿಲೀಸ್ ಮಾಡಲು ಕೇಳಿಕೊಳ್ಳಬೇಕಿದೆ. ತೆಲಗಮ್ಮ ಪೆದ್ದಮ್ಮ ನಮ್ಮ ಚಿತ್ರ ರಿಲೀಸ್ ಮಾಡೋಕೆ ಜಾಗ ಕೊಡಮ್ಮ ಅಂತ ಕೇಳುವ ಸ್ಥಿತಿಯಲ್ಲಿಯೇ ಇದ್ದೇವೆ ಅಂತಲೇ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ರಂಗಾಯಣ ರಘು ಅವರು ಹೇಳಿಯೇ ಬಿಟ್ಟರೆ, ನನ್ನ ಮುಖದಲ್ಲಿ ಏನು ಖುಷಿ ಕಾಣ್ತಾ ಇದಿಯಾ ಅಂತಲೇ ಕೇಳಿದರು. ಒಟ್ಟಾರೆ, ರಂಗಾಯಣ ರಘು ನಗಿಸ್ತಾನೇ ತಮ್ಮ ಬೇಸರ ವ್ಯಕ್ತಪಡಿಸಿದರು.
ಪಿನಾಕ ಚಿತ್ರವನ್ನ ಪ್ಯಾನ್ ಅಂತಲೇ ಪ್ರಚಾರ ಮಾಡಲಾಗುತ್ತಿದೆ. ಆದರೆ, ಗಣೇಶ್ ಅವರ ಮಾತು ಕೇಳಿದರೆ ಬೇರೇನೆ ಇದೆ. ಪಿನಾಕ ಚಿತ್ರ ಕನ್ನಡದಲ್ಲಿಯೇ ಬರುತ್ತದೆ.
ಕನ್ನಡ ಇಂಡಸ್ಟ್ರಿಯಲ್ಲಿ ಪರ ಭಾಷೆ ಅಬ್ಬರ
ಈ ಚಿತ್ರ ಮೊದಲು ಕನ್ನಡದಲ್ಲಿಯೇ ಬರುತ್ತದೆ. ಇಲ್ಲಿ ಚೆನ್ನಾಗಿ ಆದರೆ ಮುಂದೆ ಬೇರೆ ಭಾಷೆಗೆ ಬರುತ್ತದೆ ಅಂತ ಹೇಳಿದರು. ಅಂದ್ಹಾಗೆ ಈ ಚಿತ್ರ ಅಕ್ಟೋಬರ್-2 ರಂದು ರಿಲೀಸ್ ಆಗುತ್ತಿದೆ.
ಪಿನಾಕ ಚಿತ್ರವನ್ನ ಧನಂಜಯ್ ಡೈರೆಕ್ಷನ್ ಮಾಡುತ್ತಿದ್ದಾರೆ. ಡ್ಯಾನ್ಸ್ ಮಾಸ್ಟರ್ ಧನಂಜಯ್ ಈ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ ಗಣೇಶ್ ಕೂಡ ನಟಿಸಿದ್ದಾರೆ.
ಚಿತ್ರದ ಮಕ್ಕಳ ಗುಂಪಿನ ನಾಯಕ ಈ ವಿಹಾನ್ ಅಂತಲೇ ಡೈರೆಕ್ಟರ್ ಧನಂಜಯ್ ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಗೌರ ಹರಿ ಸಂಗೀತ ಕೊಟ್ಟಿದ್ದಾರೆ. ಬಹುವೆಚ್ಚದಲ್ಲಿಯೇ ಈ ಚಿತ್ರ ರೆಡಿ ಆಗಿದೆ.
ಈ ಚಿತ್ರದ ಟೀಸರ್ ಜುಲೈ-6 ರಂದು ರಿಲೀಸ್ ಆಗಿದೆ. ಹಾಗೆ ಇದು ಪ್ರಾಮಿಸಿಂಗ್ ಆಗಿಯೇ ಇದೆ. ನೋಡಿದವರು ಮೆಚ್ಚಿಕೊಳ್ಳುವ ರೀತಿನೇ ಇದೆ. ಇಡೀ ಸಿನಿಮಾ ಹೇಗೆ ಇರುತ್ತದೆ ಅನ್ನುವ ಕುತೂಹಲವನ್ನೂ ಮೂಡಿಸಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jul 06, 2026 11:02 PM IST













