Ramya: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ; ಬೆಸ್ಟ್ ನ್ಯೂಸ್ ಎಂದ ರಮ್ಯಾ! | | ACTPnews

ಬೆಸ್ಟ್ ನ್ಯೂಸ್ ಎಂದು ರಮ್ಯಾ ಪೋಸ್ಟ್!


Last Updated:

ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಇದು ‘Best News Ever’ ಅಂತಲೇ ರಮ್ಯಾ ಪೋಸ್ಟ್ ಮಾಡಿದ್ದಾರೆ. ಇನ್ನು ಏನ್ ಹೇಳಿದ್ದಾರೆ ಅನ್ನುವುದು ಇಲ್ಲಿದೆ.

ಬೆಸ್ಟ್ ನ್ಯೂಸ್ ಎಂದು ರಮ್ಯಾ ಪೋಸ್ಟ್!
ಬೆಸ್ಟ್ ನ್ಯೂಸ್ ಎಂದು ರಮ್ಯಾ ಪೋಸ್ಟ್!

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Union Education Minister Dharmendra Pradhan) ರಾಜೀನಾಮೆ (Resignation) ನೀಡಿದ್ದಾರೆ. ಈ ಸುದ್ದಿ ಹೊರ ಬೀಳ್ತಿದ್ದಂತೇನೆ ನಟಿ ರಮ್ಯಾ ಪೋಸ್ಟ್ ಹಾಕಿದ್ದಾರೆ. Best news ever ಅಂತಲೂ ಬರೆದುಕೊಂಡಿದ್ದಾರೆ. ದೆಹಲಿಯ ಜಂತರ್ ಮಂತರ್ ಅಲ್ಲಿ ವಿದ್ಯಾರ್ಥಿಗಳು ನೀಟ್ ಅಕ್ರಮ ವಿರೋಧಿಸಿ ತೀವ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ರಮ್ಯಾ ಕೂಡ ಸಪೋರ್ಟ್ ಮಾಡಿದ್ದಾರೆ. ಧರ್ಮೇಂದ್ರ ಪ್ರಧಾನ್ (Dharmendra Pradhan) ರಾಜೀನಾಮೆ ಕೊಡುತ್ತಿದ್ದಂತೇನೆ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಿಕ್ಕಿದೆ ಅಂತಲೂ ಬರೆದುಕೊಂಡಿದ್ದಾರೆ.

ಬೆಸ್ಟ್ ನ್ಯೂಸ್ ಎವರ್

ಈ ಒಂದು ಮಾತನ್ನೆ ರಮ್ಯಾ ಬರೆದುಕೊಂಡಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಕೊಡ್ಬೇಕು ಅಂತಲೇ ವಿದ್ಯಾರ್ಥಿಗಳು ಹೋರಾಟ ಮಾಡ್ತಾ ಇದ್ದರು. ಇವರ ಈ ಹೋರಾಟ ತೀವ್ರ ಸ್ವರೂಪವೂ ತೆಗೆದುಕೊಂಡಿದೆ.
actress ramya instagram post best news ever dharmendra pradhan resignation

ಬೆಸ್ಟ್ ನ್ಯೂಸ್ ಎವರ್

(ಚಿತ್ರ ಕೃಪೆ: ರಮ್ಯಾ ಇನ್‌ಸ್ಟಾಗ್ರಾಮ್)

ಆದರೆ, ಈ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಒಂದು ಸುದ್ದಿ ಹೊರ ಬೀಳ್ತಿದ್ದಂತೇನೆ ರಮ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.

ರಮ್ಯಾ ಪೋಸ್ಟ್ ಅಲ್ಲಿ ಏನಿದೆ

ಇನ್‌ಸ್ಟಾಗ್ರಾಮ್ ಅಲ್ಲಿ ರಮ್ಯಾ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಹಿಂದುಸ್ತಾನ್ ಟೈಮ್ಸ್ ವೆಬ್‌ಸೈಟ್‌ನ “ಧರ್ಮೇಂದ್ರ ಪ್ರಧಾನ್ ರಾಜೀನಾಮೆ” ಅನ್ನುವ ಸುದ್ದಿಯ ಸ್ಕ್ರೀನ್ ಶಾಟ್ ಕೂಡ ಹಾಕಿದ್ದಾರೆ. ಇಂಗ್ಲಿಷ್ ಅಲ್ಲಿ ಹೀಗೂ ಬರೆದುಕೊಂಡಿದ್ದಾರೆ.

“Best news ever! Yayy! All the students and people who protested and @incindia @rahulgandhi @cockroachjantaparty all your efforts paid off!!”

actress ramya instagram post best news ever dharmendra pradhan resignation

ರಮ್ಯಾ ಪೋಸ್ಟ್ ಅಲ್ಲಿ ಏನಿದೆ

(ಚಿತ್ರ ಕೃಪೆ: ರಮ್ಯಾ ಇನ್‌ಸ್ಟಾಗ್ರಾಮ್)

ಇದರ ಅರ್ಥ ಹೀಗಿದೆ

ಇಲ್ಲಿವರೆಗಿನ ಸುದ್ದಿಗಳಲ್ಲಿ ಇದು ಅತ್ಯುತ್ತಮ ಸುದ್ದಿನೇ ಆಗಿದೆ. ವಿದ್ಯಾರ್ಥಿಗಳು ಹಾಗೂ ಜನರು ರಾಹುಲ್ ಗಾಂಧಿ ಹಾಗೂ ಕಾಕ್ರೊಚ್ ಜನತಾ ಪಾರ್ಟಿ ನಿಮ್ಮೆಲ್ಲರ ಶ್ರಮಕ್ಕೆ ಕೊನೆಗೂ ಪ್ರತಿಫಲ ಸಿಕ್ಕಿದೆ ಅಂತಲೇ ರಮ್ಯಾ ಬರೆದಿದ್ದಾರೆ.

ಕಾಕ್ರೋಚ್ ಜನತಾ ಪಾರ್ಟಿ ಸಂಭ್ರಮ

ಧಮೇಂದ್ರ ಪ್ರಧಾನ್ ಅವರ ರಾಜೀನಾಮೆ ಕೊಡೋದೇ ತಡ, ಕಾಕ್ರೋಚ್ ಜನತಾ ಪಾರ್ಟಿ ಸಂಭ್ರಮಿಸಿದೆ. ನಾವೇ ಗೆದ್ದಿದ್ದೇವೆ ಅಂತಲೂ ಸಡಗರ ಪಟ್ಟಿದೆ.

ಧಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ. ರಾಜೀನಾಮೆ ಕೊಟ್ಟಿರೋ ವಿಚಾರವನ್ನು ಇದರಲ್ಲಿ ಹಿಂದಿ ಭಾಷೆಯಲ್ಲಿ ಬರೆದಿದ್ದಾರೆ. ಕಳೆದ 40 ವರ್ಷಗಳಿಂದಲೂ ವಿದ್ಯಾರ್ಥಿಗಳ ಹಿತಾಶಕ್ತಿ ಮತ್ತು ಶೈಕ್ಷಣಿಕ ವಲಯದ ಏಳಿಗೆಗಾಗಿ ದುಡಿದಿರೋದನ್ನ ನೆನಪಿಸಿಕೊಂಡಿದ್ದಾರೆ.

ಇನ್ನು ಏನಿದೆ ಗೊತ್ತಾ?

ಯುವ ಜನತೆಯ ಆಶೋತ್ತರಗಳನ್ನ ಈಡೇರಿಸುವುದು ಸಾರ್ವಜನಿಕ ಜೀವನದಲ್ಲಿ ತಮ್ಮ ಮುಖ್ಯ ಕರ್ತವ್ಯವಾಗಿದೆ ಅಂತಲೂ ಹೇಳಿದ್ದಾರೆ. ತಮಗೆ ದೇಶ ಸೇವೆ ಜವಾಬ್ದಾರಿ ನೀಡಿದ್ದ ಪ್ರಧಾನಿ ಮೋದಿ ಅವರಿಗೆ ಇವರು ಧನ್ಯವಾದ ಕೂಡ ಹೇಳಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports