Ramayana Trailer: ರಾಕಿಂಗ್ ಸ್ಟಾರ್ ಯಶ್‌ಗೆ ಮತ್ತೊಂದು ಮೈಲಿಗಲ್ಲು; ‘ರಾಮಾಯಣ’ ಟ್ರೈಲರ್ ಹೊಸ ದಾಖಲೆ | | ACTPnews

ರಾಕಿ ಭಾಯ್ 'ರಾಮಾಯಣ' ಟ್ರೈಲರ್ ಹೊಸ ದಾಖಲೆ! ಅದೇನ್ ಗೊತ್ತೇ?


Last Updated:

ರಾಮಾಯಣ ಚಿತ್ರದ ಟ್ರೈಲರ್ ಹೊಸ ದಾಖಲೆ ಮಾಡಿದೆ. ಇದನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ರಾಕಿ ಭಾಯ್ 'ರಾಮಾಯಣ' ಟ್ರೈಲರ್ ಹೊಸ ದಾಖಲೆ! ಅದೇನ್ ಗೊತ್ತೇ?
ರಾಕಿ ಭಾಯ್ ‘ರಾಮಾಯಣ’ ಟ್ರೈಲರ್ ಹೊಸ ದಾಖಲೆ! ಅದೇನ್ ಗೊತ್ತೇ?

ರಾಮಾಯಣ ಚಿತ್ರದ (Ramayana Movie) ಟ್ರೈಲರ್ ಸಂಚಲನ ಮೂಡಿಸಿದೆ. ಈ ಟ್ರೈಲರ್ (Trailer) ನೋಡಿದವರಲ್ಲಿ ಕಾಮೆಂಟ್ ಹೊಡೆದವರೂ ಇದ್ದಾರೆ. ಆದರೆ, ಇದು ಹೊಸ ದಾಖಲೆಯನ್ನೆ ಮಾಡಿದೆ. ರಿಲೀಸ್ (Release) ಆದ ನಾಲ್ಕೇ ದಿನಕ್ಕೇನೆ ಇದು ಹೊಸ ದಾಖಲೆ ಬರೆದಿದೆ. ಈ ಖುಷಿಯನ್ನ ಸ್ವತಃ ಚಿತ್ರ ತಂಡವೇ ಹಂಚಿಕೊಂಡಿದೆ. ಈ ಮೂಲಕ ರಾಮಾಯಣ ಚಿತ್ರದ ಟ್ರೈಲರ್ (Movie Trailer) ಅತಿ ದೊಡ್ಡ ಗೆಲುವಿನ ಭರವಸೆ ಮೂಡಿಸಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.

ರಾಮಾಯಣ ಟ್ರೈಲರ್ ದಾಖಲೆ

ರಾಮಾಯಣ ಚಿತ್ರದ ಟ್ರೈಲರ್ ಜುಲೈ-30 ರಂದು ರಿಲೀಸ್ ಆಗಿದೆ. ಬೆಳಗ್ಗೆ 4.15 ಕ್ಕೆ ಇದು ಬಿಡುಗಡೆ ಆಗಿದೆ. ರಿಲೀಸ್ ಆದ ಕ್ಷಣದಿಂದಲೇ ಇದು ಎಲ್ಲರನ್ನು ಸೆಳೆಯುವ ಕೆಲಸ ಮಾಡಿದೆ. ಸಾಕಷ್ಟು ಜನಕ್ಕೆ ಇದು ಅದ್ಭುತ ಅನುಭವ ಕೊಟ್ಟಿದೆ.
yash ranbir kapoor sai pallavi ramayana movie trailer view record

ರಾಮಾಯಣ ಟ್ರೈಲರ್ ದಾಖಲೆ

4 ನಿಮಿಷ 9 ಸೆಕೆಂಡ್‌ನ ಈ ಟ್ರೈಲರ್ ಎಲ್ಲರ ಗಮನ ಸೆಳೆದಿದೆ. ಆದರೆ, ಈ ಟ್ರೈಲರ್ ಅಲ್ಲಿ ಆಂಜನೇಯ ಎಲ್ಲಿ ಅನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಅದಾಗ್ಯೂ ಇದು ಎಲ್ಲರ ಪ್ಲಾಟ್‌ ಫಾರ್ಮ್ ಅಲ್ಲಿ ಭಾರೀ ಸದ್ದು ಮಾಡಿದೆ.

4 ದಿನ, 800 ಮಿಲಿಯನ್

ರಾಮಾಯಣ ಚಿತ್ರದ ಈ ಟ್ರೈಲರ್ ರಿಲೀಸ್ ಆದ ನಾಲ್ಕು ದಿನಕ್ಕೆ 800 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಈ ವಿಷಯ ಗಾಳಿ ಸುದ್ದಿ ಏನು ಅಲ್ಲ.

ನಿತೇಶ್ ತಿವಾರಿ ಸಿನಿಮಾ

ರಾಮಾಯಣ ಚಿತ್ರವನ್ನ ನಿತೇಶ್ ತಿವಾರಿ ಡೈರೆಕ್ಷನ್ ಮಾಡಿದ್ದಾರೆ. ಇವರು ರಾಮಾಯಣದ ಕತೆಯನ್ನ ಎರಡು ಭಾಗದಲ್ಲಿ ಹೇಳುತ್ತಿದ್ದಾರೆ.

ಮೊದಲ ಭಾಗದ ಟ್ರೈಲರ್ ರಿಲೀಸ್ ಆಗಿ ಕಮಾಲ್ ಮಾಡುತ್ತಿದೆ. ಈ ದೀಪಾವಳಿ ಹಬ್ಬಕ್ಕೆ ಈ ಚಿತ್ರ ರಿಲೀಸ್ ಕೂಡ ಆಗುತ್ತಿದೆ. ಎರಡನೇ ಭಾಗದ ರಾಮಾಯಣ ಮುಂದಿನ ವರ್ಷ 2027ಕ್ಕೆ ತೆರೆ ಕಾಣುತ್ತಿದೆ.

yash ranbir kapoor sai pallavi ramayana movie trailer view record

ರಾವಣನ ಅಬ್ಬರ ಜೋರು
ರಾವಣನ ಅಬ್ಬರ ಜೋರು

ರಾಮಾಯಣದ ಈ ಚಿತ್ರದಲ್ಲಿ ರಾವಣನ ಅಬ್ಬರ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಈ ಒಂದು ರಾವಣನ ರೋಲ್ ಮಾಡ್ತಿದ್ದಾರೆ. ಈ ಒಂದು ಪಾತ್ರದಲ್ಲಿ ಇವರ ಲುಕ್ ಆ್ಯಂಡ್ ಫೀಲ್ ಎರಡೂ ಅದ್ಭುತ ಅನಿಸುತ್ತವೆ.

ಈ ಚಿತ್ರದಲ್ಲಿ ಸೀತೆಯ ಪಾತ್ರವನ್ನ ನಟಿ ಸಾಯಿ ಪಲ್ಲವಿ ಮಾಡಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ಅಭಿನಯಿಸಿದ್ದಾರೆ. ಆಂಜನೇಯನ ರೋಲ್ ಅನ್ನ ಸನ್ನಿ ಡಿಯೋಲ್ ಮಾಡ್ತಿದ್ದಾರೆ.

ಸನ್ನಿ ಡಿಯೋಲ್ ಹೇಳಿದ್ದೇನು

ಸನ್ನಿ ಡಿಯೋಲ್ ಈ ಒಂದು ಚಿತ್ರದಲ್ಲಿ ಆಂಜನೇಯನ ರೋಲ್ ಮಾಡ್ತಿದ್ದಾರೆ. ಆದರೆ, ಈಗ ಸ್ವಲ್ಪ ಕೆಲಸ ಮಾಡಿದ್ದೇನೆ. ಇನ್ನು ಸಾಕಷ್ಟು ಕೆಲಸ ಮಾಡೋದು ಇದೆ ಅಂತಲೂ ಹೇಳಿದ್ದಾರೆ.

ದೆಹಲಿಯಲ್ಲಿ ಈ ಚಿತ್ರದ ಪ್ರಥಮ್ ಸಂಕಲ್ಪ ಅನ್ನುವ ಕಾರ್ಯಕ್ರಮ ನಡೆಯಿತು. ಅಲ್ಲಿಯೇ ಚಿತ್ರದ ಟ್ರೈಲರ್ ಅನ್ನ ಮೊದಲು ಪ್ರದರ್ಶನ ಮಾಡಿದರು. ಅದಾದ್ಮೇಲೆ ಅಮೆರಿಕಾದ ಕಾಮಿಕ್ ಕಾನ್-2026 ಅಲ್ಲೂ ಟ್ರೈಲರ್ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆನೂ ಪಡೆಯಿತು.

ಇದೀಗ ಈ ಟ್ರೈಲರ್ ರಿಲೀಸ್ ಆದ ನಾಲ್ಕೇ ದಿನಕ್ಕೆ 800 ಮಿಲಿಯನ್‌ಗೂ ಅಧಿಕ ವೀವ್ಸ್ ಪಡೆದು, ಹೊಸ ದಾಖಲೆ ಮಾಡಿದೆ ಅಂತಲೇ ಚಿತ್ರ ತಂಡ ಹೇಳಿಕೊಂಡಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed