Last Updated:
ರಾಮಾಯಣ ಚಿತ್ರದ ಟ್ರೈಲರ್ ಹೊಸ ದಾಖಲೆ ಮಾಡಿದೆ. ಇದನ್ನ ಸಿನಿಮಾ ತಂಡವೇ ಹೇಳಿಕೊಂಡಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ರಾಮಾಯಣ ಚಿತ್ರದ (Ramayana Movie) ಟ್ರೈಲರ್ ಸಂಚಲನ ಮೂಡಿಸಿದೆ. ಈ ಟ್ರೈಲರ್ (Trailer) ನೋಡಿದವರಲ್ಲಿ ಕಾಮೆಂಟ್ ಹೊಡೆದವರೂ ಇದ್ದಾರೆ. ಆದರೆ, ಇದು ಹೊಸ ದಾಖಲೆಯನ್ನೆ ಮಾಡಿದೆ. ರಿಲೀಸ್ (Release) ಆದ ನಾಲ್ಕೇ ದಿನಕ್ಕೇನೆ ಇದು ಹೊಸ ದಾಖಲೆ ಬರೆದಿದೆ. ಈ ಖುಷಿಯನ್ನ ಸ್ವತಃ ಚಿತ್ರ ತಂಡವೇ ಹಂಚಿಕೊಂಡಿದೆ. ಈ ಮೂಲಕ ರಾಮಾಯಣ ಚಿತ್ರದ ಟ್ರೈಲರ್ (Movie Trailer) ಅತಿ ದೊಡ್ಡ ಗೆಲುವಿನ ಭರವಸೆ ಮೂಡಿಸಿದೆ. ಇದರ ಇತರ ಮಾಹಿತಿ ಇಲ್ಲಿದೆ ಓದಿ.
ರಾಮಾಯಣ ಟ್ರೈಲರ್ ದಾಖಲೆ
4 ನಿಮಿಷ 9 ಸೆಕೆಂಡ್ನ ಈ ಟ್ರೈಲರ್ ಎಲ್ಲರ ಗಮನ ಸೆಳೆದಿದೆ. ಆದರೆ, ಈ ಟ್ರೈಲರ್ ಅಲ್ಲಿ ಆಂಜನೇಯ ಎಲ್ಲಿ ಅನ್ನುವ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಅದಾಗ್ಯೂ ಇದು ಎಲ್ಲರ ಪ್ಲಾಟ್ ಫಾರ್ಮ್ ಅಲ್ಲಿ ಭಾರೀ ಸದ್ದು ಮಾಡಿದೆ.
ರಾಮಾಯಣ ಚಿತ್ರದ ಈ ಟ್ರೈಲರ್ ರಿಲೀಸ್ ಆದ ನಾಲ್ಕು ದಿನಕ್ಕೆ 800 ಮಿಲಿಯನ್ಗೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಈ ವಿಷಯ ಗಾಳಿ ಸುದ್ದಿ ಏನು ಅಲ್ಲ.
ರಾಮಾಯಣ ಚಿತ್ರವನ್ನ ನಿತೇಶ್ ತಿವಾರಿ ಡೈರೆಕ್ಷನ್ ಮಾಡಿದ್ದಾರೆ. ಇವರು ರಾಮಾಯಣದ ಕತೆಯನ್ನ ಎರಡು ಭಾಗದಲ್ಲಿ ಹೇಳುತ್ತಿದ್ದಾರೆ.
ಮೊದಲ ಭಾಗದ ಟ್ರೈಲರ್ ರಿಲೀಸ್ ಆಗಿ ಕಮಾಲ್ ಮಾಡುತ್ತಿದೆ. ಈ ದೀಪಾವಳಿ ಹಬ್ಬಕ್ಕೆ ಈ ಚಿತ್ರ ರಿಲೀಸ್ ಕೂಡ ಆಗುತ್ತಿದೆ. ಎರಡನೇ ಭಾಗದ ರಾಮಾಯಣ ಮುಂದಿನ ವರ್ಷ 2027ಕ್ಕೆ ತೆರೆ ಕಾಣುತ್ತಿದೆ.
ರಾವಣನ ಅಬ್ಬರ ಜೋರು
ರಾಮಾಯಣದ ಈ ಚಿತ್ರದಲ್ಲಿ ರಾವಣನ ಅಬ್ಬರ ಜೋರಾಗಿದೆ. ರಾಕಿಂಗ್ ಸ್ಟಾರ್ ಯಶ್ ಈ ಒಂದು ರಾವಣನ ರೋಲ್ ಮಾಡ್ತಿದ್ದಾರೆ. ಈ ಒಂದು ಪಾತ್ರದಲ್ಲಿ ಇವರ ಲುಕ್ ಆ್ಯಂಡ್ ಫೀಲ್ ಎರಡೂ ಅದ್ಭುತ ಅನಿಸುತ್ತವೆ.
ಈ ಚಿತ್ರದಲ್ಲಿ ಸೀತೆಯ ಪಾತ್ರವನ್ನ ನಟಿ ಸಾಯಿ ಪಲ್ಲವಿ ಮಾಡಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ಅಭಿನಯಿಸಿದ್ದಾರೆ. ಆಂಜನೇಯನ ರೋಲ್ ಅನ್ನ ಸನ್ನಿ ಡಿಯೋಲ್ ಮಾಡ್ತಿದ್ದಾರೆ.
ಸನ್ನಿ ಡಿಯೋಲ್ ಈ ಒಂದು ಚಿತ್ರದಲ್ಲಿ ಆಂಜನೇಯನ ರೋಲ್ ಮಾಡ್ತಿದ್ದಾರೆ. ಆದರೆ, ಈಗ ಸ್ವಲ್ಪ ಕೆಲಸ ಮಾಡಿದ್ದೇನೆ. ಇನ್ನು ಸಾಕಷ್ಟು ಕೆಲಸ ಮಾಡೋದು ಇದೆ ಅಂತಲೂ ಹೇಳಿದ್ದಾರೆ.
ದೆಹಲಿಯಲ್ಲಿ ಈ ಚಿತ್ರದ ಪ್ರಥಮ್ ಸಂಕಲ್ಪ ಅನ್ನುವ ಕಾರ್ಯಕ್ರಮ ನಡೆಯಿತು. ಅಲ್ಲಿಯೇ ಚಿತ್ರದ ಟ್ರೈಲರ್ ಅನ್ನ ಮೊದಲು ಪ್ರದರ್ಶನ ಮಾಡಿದರು. ಅದಾದ್ಮೇಲೆ ಅಮೆರಿಕಾದ ಕಾಮಿಕ್ ಕಾನ್-2026 ಅಲ್ಲೂ ಟ್ರೈಲರ್ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆನೂ ಪಡೆಯಿತು.
ಇದೀಗ ಈ ಟ್ರೈಲರ್ ರಿಲೀಸ್ ಆದ ನಾಲ್ಕೇ ದಿನಕ್ಕೆ 800 ಮಿಲಿಯನ್ಗೂ ಅಧಿಕ ವೀವ್ಸ್ ಪಡೆದು, ಹೊಸ ದಾಖಲೆ ಮಾಡಿದೆ ಅಂತಲೇ ಚಿತ್ರ ತಂಡ ಹೇಳಿಕೊಂಡಿದೆ.
Bangalore [Bangalore],Bangalore,Karnataka














