Last Updated:
ರಾಮಾಯಣ ಚಿತ್ರದ ಇಂಗ್ಲಿಷ್ ಟ್ರೈಲರ್ ರಿಲೀಸ್ ಆಗಿದೆ. ಆದರೆ,ಇದರಲ್ಲಿ ಯಶ್ ಧ್ವನಿ ಮಿಸ್ ಆಗಿದೆ. ರಣಬೀರ್ ಕಪೂರ್ ತಮ್ಮ ಪಾತ್ರಕ್ಕೆ ಧ್ವನಿ ಕೊಟ್ಟಿದ್ದಾರೆ. ಈ ಟ್ರೈಲರ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಮಾಯಣ ಚಿತ್ರದ (Ramayana Movie) ರಿಲೀಸ್ ಡೇಟ್ ಅನೌನ್ಸ್ (Release Date Announce) ಆಗಿದೆ. ನವೆಂಬರ್-6 ರಂದು ಈ ಚಿತ್ರ ರಿಲೀಸ್ ಆಗುತ್ತಿದೆ. ಇದರೊಟ್ಟಿಗೆ ಈ ಸಿನಿಮಾದ ಇಂಗ್ಲಿಷ್ ಟ್ರೈಲರ್ ಕೂಡ ರಿಲೀಸ್ ಆಗಿದೆ. ಕನ್ನಡ ಟ್ರೈಲರ್ ಕೂಡ ಹೊರ ಬಂದಿದೆ. ಕನ್ನಡ ಟ್ರೈಲರ್ (Kannada Trailer) ಅಲ್ಲಿ ಯಶ್ ಧ್ವನಿ ಇದೆ. ಆದರೆ, ಇಂಗ್ಲಿಷ್ ಟ್ರೈಲರ್ ಅಲ್ಲಿ ಯಶ್ ಧ್ವನಿ (Yash Voice) ಇಲ್ವೇ ಇಲ್ಲ. ಬೇರೆ ಕಲಾವಿದರು ಧ್ವನಿ ಕೊಟ್ಟಿದ್ದಾರೆ. ರಣಬೀರ್ ಕಪೂರ್ ಇಲ್ಲಿ ಇಂಗ್ಲಿಷ್ ಡಬ್ ಮಾಡಿದ್ದಾರೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ.
ಯಶ್ ಧ್ವನಿ ಇಲ್ವೇ ಇಲ್ಲ
ಕಲಾವಿದರ ಧ್ವನಿಗಳಲ್ಲಿ ಸ್ಪಷ್ಟತೆನೂ ಕಾಣಿಸುತ್ತದೆ. ಮಾತನಾಡುವ ಇಂಗ್ಲಿಷ್ ಪದಗಳು ಕ್ಲೀಯರ್ ಆಗಿಯೇ ಕೇಳಿಸುತ್ತವೆ. ಆದರೆ, ಫೀಲಿಂಗ್ ಇಲ್ವೆ ಇಲ್ಲ ಅನಿಸುತ್ತದೆ.
ಈ ಒಂದು ಟ್ರೈಲರ್ ಅಲ್ಲಿ ಯಶ್ ಅಭಿನಯದ ರಾವಣನ ಪಾತ್ರಕ್ಕೆ ಯಶ್ ಧ್ವನಿ ಇಲ್ಲ ಬಿಡಿ. ಈ ಪಾತ್ರಕ್ಕೆ ಬೇರೆ ಯಾರೋ ಡಬ್ ಮಾಡಿದ್ದಾರೆ ಅಂತ ಗೊತ್ತಾಗುತ್ತದೆ.
ಇದೇ ಇಂಗ್ಲಿಷ್ ಟ್ರೈಲರ್ ಅಲ್ಲಿ ರಣಬೀರ್ ಕಪೂರ್ ಧ್ವನಿ ಇದೆ. ರಣಬೀರ್ ತಮ್ಮ ಪಾತ್ರಕ್ಕೆ ತಾವೆ ಡಬ್ ಮಾಡಿದ್ದಾರೆ. ಇದು ಚೆನ್ನಾಗಿಯೇ ಬಂದಿದೆ.
ಇಂಗ್ಲಿಷ್ ಟ್ರೈಲರ್ ರಿಲೀಸ್
ಆದರೆ, ಯಶ್ ಪಾತ್ರಕ್ಕೇನೆ ಯಾಕೋ ಇಂಗ್ಲಿಷ್ ವಾಯ್ಸ್ ಕೂಡ ಸೂಟ್ ಆಗಿಲ್ಲ ಅನ್ನುವ ಅಭಿಪ್ರಾಯ ನೋಡಿದಾಕ್ಷಣ ಬಂದೇ ಬಿಡುತ್ತದೆ. ಆದರೆ, ಕನ್ನಡ ಅದ್ಭುತ ನೋಡಿ.
ರಾಮಾಯಣದ ಕನ್ನಡ ಟ್ರೈಲರ್ ಕೂಡ ಹೊರ ಬಂದಿದೆ. ಈ ಟ್ರೈಲರ್ ಅಲ್ಲಿ ಯಶ್ ಧ್ವನಿ ಚೆನ್ನಾಗಿದೆ. ರಾವಣನ ಪಾತ್ರಕ್ಕೆ ಸೂಕ್ತ ಅನಿಸುತ್ತದೆ.
ಆ ರೀತಿನೇ ಯಶ್ ಈ ಒಂದು ಪಾತ್ರಕ್ಕೆ ಡಬ್ ಮಾಡಿದ್ದಾರೆ. ಇದು ನಿಜಕ್ಕೂ ಚೆನ್ನಾಗಿ ಆಗಿದೆ ಅನ್ನುವ ಭಾವನೆ ಮೂಡುತ್ತದೆ. ಇನ್ನುಳಿದಂತೆ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ.
ನವೆಂಬರ್-6 ಚಿತ್ರ ರಿಲೀಸ್
ರಾಮಾಯಣ ಚಿತ್ರ ವಿಶ್ವದಾದ್ಯಂತ ನವೆಂಬರ್-6 ರಂದು ರಿಲೀಸ್ ಆಗುತ್ತಿದೆ. ದೀಪಾವಳಿ ಹಬ್ಬ ನವೆಂಬರ್-8 ರಂದು ಭಾನುವಾರ ಬರುತ್ತದೆ.
ಸಾಯಿ ಪಲ್ಲವಿ, ರಣಬೀರ್ ಕಪೂರ್, ಯಶ್, ಸನ್ನಿ ಡಿಯೋಲ್ ಸೇರಿದಂತೆ ಇನ್ನು ಹಲವು ಹೆಸರಾಂತ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಚಿತ್ರದ ಎರಡನೇ ಭಾಗ 2027 ರಂದು ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka














