ರಾಮರಸ ಚಿತ್ರದಲ್ಲಿ ಹಲವು ಪಾತ್ರಗಳಿವೆ. ಅವುಗಳನ್ನ ಕನ್ನಡ ಕಲಾವಿದರೂ ಮಾಡಿದ್ದಾರೆ. ಪರ ಭಾಷೆಯ ಕಲಾವಿದರು ಜೀವ ತುಂಬಿದ್ದಾರೆ.
ರಾಮರಸ ಸಿನಿಮಾ
(ಚಿತ್ರ ಕೃಪೆ: ರಾಮರಸ ಸಿನಿಮಾ ಟೀಮ್)
ಆದರೆ, ಚಿತ್ರದ ಡೈರೆಕ್ಟರ್ ಗಿರಿರಾಜ್ ಅವರು ಒಂದೊಂದೇ ಪಾತ್ರವನ್ನ ರಿವೀಲ್ ಮಾಡುತ್ತಿದ್ದಾರೆ. ಈ ಚಿತ್ರದ ವಿಷಯ ನಮ್ಮ ನೆಲದ ಕತೇನೆ ಆಗಿದೆ. ಸಾಂಪ್ರದಾಯಿಕ ಜಾನಪದ ಮತ್ತು ಸ್ಥಳೀಯ ಆಧ್ಯಾತ್ಮಿಕ ಆಚರಣೆಗಳಿಂದ ಇದು ಸ್ಫೂರ್ತಿ ಪಡೆದಿದೆ.
ಈ ಚಿತ್ರದಲ್ಲಿ ಡೆಡ್ಲಿ ಚಿತ್ರದ ಖ್ಯಾತಿಯ ನಟ ಆದಿತ್ಯ ವೀರ ದುರ್ಮುರ್ಗಿ ಪಾತ್ರ ಮಾಡಿದ್ದಾರೆ. ಈ ಪಾತ್ರದ ಪೋಸ್ಟರ್ ಹೊರ ಬಂದಿವೆ. ಫೋಟೋಸ್ ಕೂಡ ಅಧಿಕೃತವಾಗಿಯೇ ರಿಲೀಸ್ ಆಗಿವೆ.
ರಾಮರಸ ಚಿತ್ರದ ಕತೆ ಬೇರೆ ಇದೆ. ಡೈರೆಕ್ಟರ್ ಬಿ.ಎಂ. ಗಿರಿರಾಜ್ ಯೋಚನಾ ಲಹರಿ ಬೇರೆ ಇದೆ. ಅದನ್ನ ಅವರು ತಮ್ಮದೇ ರೀತಿಯಲ್ಲಿಯೇ ಹೇಳುತ್ತಲೇ ಸಾಗ್ತಾರೆ.
ಇವರ ಈ ಹಿಂದಿನ ಜಟ್ಟ ಚಿತ್ರ ಇದಕ್ಕೆ ಸಾಕ್ಷಿ ಆಗುತ್ತದೆ. ಹಾಗೆ ಈಗ ರಾಮರಸ ಚಿತ್ರ ಮಾಡಿದ್ದಾರೆ. ಈ ಚಿತ್ರದ ಕೆಲಸ ಇನ್ನು ನಡೀತಾ ಇದೆ. ಇದರ ನಡುವೆ ಸಿನಿಮಾದ ಪಾತ್ರಗಳ ಪೋಸ್ಟರ್ ಅನ್ನ ಒಂದೊಂದಾಗಿಯೇ ರಿಲೀಸ್ ಮಾಡ್ತಿದ್ದಾರೆ.
ಡೆಡ್ಲಿ ಆದಿತ್ಯ
(ಚಿತ್ರ ಕೃಪೆ: ರಾಮರಸ ಸಿನಿಮಾ ಟೀಮ್)
ಈ ಚಿತ್ರದಲ್ಲಿ ಕನ್ನಡದ ಹಲವು ಕಲಾವಿರು ನಟಿಸಿದ್ದಾರೆ. ಹಾಸ್ಯ ನಾಯಕ ನಟ ಶರಣ್ ಅಭಿನಯಿಸಿದ್ದಾರೆ. ಇವರು ಈ ಚಿತ್ರದಲ್ಲಿ ಇಂದ್ರ ದೇವೇಂದ್ರ ಪಾತ್ರ ಮಾಡಿದ್ದಾರೆ.
ಈ ಪಾತ್ರದ ಲುಕ್ ಆ್ಯಂಡ್ ಫೀಲ್ ಹೇಗೆ ಇರುತ್ತದೆ ಅನ್ನುವ ಕುತೂಹಲ ಇದೆ. ಡೈನಾಮಿಕ್ ಪ್ರಜ್ವಲ್ ದೇವರಾಜ್ ಈ ಚಿತ್ರದಲ್ಲಿ ಗುರು ಸಿದ್ಧನಾಗಿ ಅಭಿನಯಿಸಿದ್ದಾರೆ. ಈ ಪಾತ್ರದ ಲುಕ್ ರಿವೀಲ್ ಆಗಿದೆ. ಎಲ್ಲರ ಗಮನ ಕೂಡ ಸೆಳೆದಿದೆ.
ಈ ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ಕೊಟ್ಟಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್, ನಾಗಾರ್ಜುನ್ ಶರ್ಮಾ, ಪುನೀತ್ ರಂಗಸ್ವಾಮಿ ಅವರು ಸಾಹಿತ್ಯ ಬರೆದಿದ್ದಾರೆ.
ಕೃಷ್ಣ ಕುಮಾರ್ (ಕೆಕೆ) ಅವರು ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರವನ್ನ ಗುರು ದೇಶಪಾಂಡೆ ಮತ್ತು ವಿಕ್ರಂ ಆರ್ಯ ನಿರ್ಮಾಣ ಮಾಡಿದ್ದಾರೆ. ಗುರು ದೇಶಪಾಂಡೆ ಈ ಚಿತ್ರಕ್ಕೆ ಕ್ರಿಯೇಟಿವ್ ಹೆಡ್ ಆಗಿದ್ದಾರೆ ಅಂತ ಹೇಳಬಹುದು.













