Ram Charan: ಓಡೋಡಿ ಬಂದು ರಾಮ್‌ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ? | | ACTPnews

Ram Charan: ಓಡೋಡಿ ಬಂದು ರಾಮ್‌ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ?


Last Updated:

ರಾಮ್ ಚರಣ್ ಒಂದು ಸ್ಪೆಷಲ್ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಪೆದ್ದಿ ಇವೆಂಟ್ ಅಲ್ಲಿ ರಾಮ್ ಚರಣ್ ಈ ಒಂದು ಕೆಲಸ ಮಾಡಿದ್ದಾರೆ. ಅದು ಎಲ್ಲರ ಹೃದಯ ಗೆದ್ದಿದೆ. ಅದೇನು ಅನ್ನೋದು ಇಲ್ಲಿದೆ ಓದಿ.

Ram Charan: ಓಡೋಡಿ ಬಂದು ರಾಮ್‌ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ?
Ram Charan: ಓಡೋಡಿ ಬಂದು ರಾಮ್‌ ಚರಣ್ ತಪ್ಪಿಕೊಂಡ ಪುಟ್ಟ ಫ್ಯಾನ್; ಮುಂದೇನಾಯ್ತು ಗೊತ್ತಾ?

ಪೆದ್ದಿ ಚಿತ್ರದ (Peddi Movie) ನಾಯಕ ರಾಮ್ ಚರಣ್ (Ram Charan) ಅವರಿಗೆ ಮಕ್ಕಳೆಂದರೆ ತುಂಬಾನೆ ಪ್ರೀತಿ ಬಿಡಿ. ದೇವನಹಳ್ಳಿಯಲ್ಲಿರೋ ತಮ್ಮ ಫಾರ್ಮ್‌ಹೌಸ್‌ಗೂ ಆಗಾಗ ಬರ್ತಾನೇ ಇರ್ತಾರೆ. ತಮ್ಮ ಈ ಫಾರ್ಮ್‌ ಹೌಸ್‌ (Farmhouse) ಸುತ್ತ ಇರೋ ಹಳ್ಳಿಯ ಹುಡುಗರ ಜೊತೆಗೆ ಆಟವಾಡೋದು ಇದೆ. ಮಕ್ಕಳ ಜೊತೆಗೆ ಟೈಮ್ ಕಳೆಯೋದು ಇದೆ. ಆ ರೀತಿಯ ರಾಮ್ ಚರಣ್ ಒಂದು ಕೆಲಸ ಮಾಡಿದ್ದಾರೆ. ಅದು ಪೆದ್ದಿ ಚಿತ್ರದ (Peddi Movie) ಪ್ರಚಾರದ ಸಮಯದಲ್ಲಿಯೇ ಅನ್ನೋದು ಮತ್ತೊಂದು ವಿಶೇಷವೇ ಆಗಿದೆ. ಅದೇನು ಅನ್ನೋ ವಿವರ ಮುಂದೆ ಇದೆ ಓದಿ.

ಇದು ನನಗಾ….

ರಾಮ್ ಚರಣ್ ಎಲ್ಲರ ಗಮನ ಸೆಳೆಯೋ ಕೆಲಸ ಮಾಡಿದ್ದಾರೆ. ಮಕ್ಕಳ ಬಗ್ಗೆ ತಮಗೆ ಇರೋ ಪ್ರೀತಿಯನ್ನೂ ತೋರಿಸಿದ್ದಾರೆ. ತಮ್ಮನ್ನ ನೋಡಲು ಬಂದ ಅಭಿಮಾನಿಗಳಲ್ಲಿ ಪುಟ್ಟ ಅಭಿಮಾನಿ ಇವರನ್ನ ಸೆಳೆದು ಬಿಟ್ಟಿದ್ದಾನೆ.
ram charan gifted bat to little fan at bengaluru peddi promotional event

ಆ ಹುಡುಗನ ಕರೀರಿ…

ಬೆಂಗಳೂರಿನಲ್ಲಿ ನಡೆದ ಚಿತ್ರ ಪ್ರಚಾರದ ಇವೆಂಟ್ ಅಲ್ಲಿ ಈ ಒಂದು ಕೆಲಸ ಮಾಡಿದ್ದಾರೆ. ಕಾರ್ಯಕ್ರಮ ಇನ್ನೇನು ಪೂರ್ಣಗೊಳ್ಳುತ್ತಿತ್ತು. ಅಷ್ಟರಲ್ಲಿಯೇ ರಾಮ್ ಚರಣ್ ಈ ಕೆಲಸ ಮಾಡಿಯೇ ಬಿಟ್ಟರು.

ಆ ಹುಡುಗನ ಕರೀರಿ…

ರಾಮ್ ಚರಣ್ ಈ ಮಾತು ಹೇಳಿದರು. ಆ ಹುಡುಗನ ಕರೀರಿ ಅಂದಾಗ ಆ ಪುಟ್ಟ ಅಭಿಮಾನಿ ಓಡೋಡಿ ವೇದಿಕೆ ಮೇಲೆ ಬಂದೆ ಬಿಟ್ಟ. ಬಂದವ್ನೆ ರಾಮ್ ಚರಣ್ ಅವರನ್ನ ತಬ್ಬಿಕೊಂಡು ಬಿಟ್ಟ ನೋಡಿ.

ಈ ಒಂದು ಕ್ಷಣದ ಬಳಿಕ ರಾಮ್ ಚರಣ್ ಈ ಪುಟ್ಟ ಹುಡುಗನಿಗೆ ಒಂದು ಬ್ಯಾಟ್ ಗಿಫ್ಟ್ ಮಾಡಿದರು. ಇದರ ಮೇಲೆ ತಮ್ಮ ಸಹಿ ಕೂಡ ಹಾಕಿಕೊಟ್ಟರು. ಆಗಲೇ ಇನ್ನೂ ಈ ಪುಟ್ಟ ಅಭಿಮಾನಿ ತೆಲುಗು ಭಾಷೆಯಲ್ಲಿ “ಈ ಬ್ಯಾಟ್ ನನಗಾ” ಅಂತಲೇ ಕೇಳ್ತಾ ಇದ್ದ. ಇದನ್ನ ಆ್ಯಂಕರ್ ಅನುಶ್ರೀ ರಿಪೀಟ್ ಮಾಡ್ತಾನೇ ಇದ್ದರು.

ರಾಮ್ ಚರಣ್ ಫ್ಯಾನ್ಸ್

ರಾಮ್ ಚರಣ್ ಅವರಿಗೆ ಮಕ್ಕಳು ಅಂದ್ರೆ ತುಂಬಾನೆ ಇಷ್ಟ ಆಗುತ್ತಾರೆ. ಹಳ್ಳಿಯ ಮಕ್ಕಳು ಅಂದ್ರೂ ಅಷ್ಟೆ ಇಷ್ಟ ಆಗುತ್ತಾರೆ. ಇದಕ್ಕೆ ಉದಾಹರಣೆ ಕೂಡ ಇದೆ.

ದೇವನಹಳ್ಳಿಯಲ್ಲಿ ಇವರ ಒಂದು ಫಾರ್ಮ್ ಹೌಸ್‌ ಇದೆ. ಇದನ್ನ ಚಿರಂಜೀವಿ ಅವರಿಗೆ ರವಿಚಂದ್ರನ್ ಅವರು ಕೊಟ್ಟಿದ್ದಾರೆ. ಸಿಪಾಯಿ ಸಿನಿಮಾದಲ್ಲಿ ನಟಿಸಿರೋದಕ್ಕೇನೆ ಈ ಒಂದು ಫಾರ್ಮ್‌ ಹೌಸ್‌ ಅನ್ನ ರವಿಚಂದ್ರನ್ ಅವರು ಕೊಟ್ಟಿದ್ದಾರೆ. ಅದೇ ಈ ಫಾರ್ಮ್‌ ಹೌಸ್‌ಗೆ ರಾಮ್ ಚರಣ್ ಆಗಾಗ ಬರ್ತಾನೇ ಇರ್ತಾರೆ.

ram charan gifted bat to little fan at bengaluru peddi promotional event

ಇದು ನನಗಾ….
ಹಳ್ಳಿ ಮಕ್ಕಳ ಜೊತೆಗೆ ಆಟ

ರಾಮ್ ಚರಣ್ ತಮ್ಮ ಈ ಫಾರ್ಮ್‌ ಹೌಸ್ ಸುತ್ತ ಮುತ್ತ ಇರೋ ಹಳ್ಳಿ ಹುಡುಗರ ಜೊತೆಗೆ ಆಟವಾಡೋದು ಇದೆ. ಸೈಕ್ಲಿಂಗ್ ಮಾಡ್ತಾನೇ ಹಳ್ಳಿಕಡೆಗೆ ಹೋಗೋದು ಇದೆ.

ಬ್ಯಾಟ್ ಕೊಟ್ಟ ಕ್ಷಣ

ರಾಮ್ ಚರಣ್ ತಮ್ಮ ಪುಟ್ಟ ಅಭಿಮಾನಿಗೆ ಬ್ಯಾಟ್ ಕೊಟ್ಟರು. ಆ ಕ್ಷಣ ನಿಜಕ್ಕೂ ವಿಶೇಷ ಅನಿಸಿತು. ಕಾರಣ, ಯಾರೂ ಇದನ್ನ ನಿರೀಕ್ಷೆ ಮಾಡಿರಲಿಲ್ಲ. ಅಭಿಮಾನಿಗಳ ಪ್ರೀತಿಯನ್ನ ಎದುರು ನೋಡುವ ರಾಮ್ ಚರಣ್, ಅದಕ್ಕೆ ಅಷ್ಟೆ ಗೌರವ ಕೂಡ ಕೊಡ್ತಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed