Foreign Trip: 22 ಸಾವಿರಕ್ಕಿಂತ ಕಡಿಮೆ ದರದಲ್ಲಿ ಫ್ಲೈಟ್ ಟಿಕೆಟ್, ಈ ಮೂರು ದೇಶಗಳಿಗೆ ಹಾರಲು ಭಾರತೀಯರಿಗೆ ವೀಸಾ ಕಿರಿಕಿರಿ ಇಲ್ಲ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಭಾರತದಿಂದ ಬಜೆಟ್ ವಿದೇಶಿ ಪ್ರವಾಸಗಳು


Last Updated:

ಜೂನ್ ಟ್ರಿಪ್ ಪ್ಲಾನ್ ಮಾಡ್ತಿರಾ, ಕಡಿಮೆ ಖರ್ಚಿನಲ್ಲಿ ವಿಯೆಟ್ನಾಂ, ನೇಪಾಳ, ಮಲೇಷ್ಯಾ ಗೆ ಬೆಂಗಳೂರುನಿಂದ ವಿಮಾನ ದರ 20 ಸಾವಿರದೊಳಗೆ, ಭಾರತೀಯರಿಗೆ ವೀಸಾ ಫ್ರೀ ಅಥವಾ ಇ ವೀಸಾ.

ಭಾರತದಿಂದ ಬಜೆಟ್ ವಿದೇಶಿ ಪ್ರವಾಸಗಳು
ಭಾರತದಿಂದ ಬಜೆಟ್ ವಿದೇಶಿ ಪ್ರವಾಸಗಳು

ಬೆಂಗಳೂರು: ಟ್ರಿಪ್ ಹೋಗುವ ಪ್ಲಾನ್ ಮಾಡ್ತಾ ಇದ್ದೀರಾ? ಅದರಲ್ಲೂ ವಿದೇಶ ಪ್ರವಾಸ (Foreign Trip) ಮಾಡಬೇಕಾ? ಬಜೆಟ್ ಕಮ್ಮಿ ಇರಬೇಕಾ? ಎಲ್ಲದಕ್ಕೂ ಅವಕಾಶ ಇದೆ. ಕಡಿಮೆ ಖರ್ಚಿನಲ್ಲಿ ನೀವು ಈಗ ವಿದೇಶಿ ಸುಂದರ ತಾಣಗಳನ್ನು (Places) ಸುತ್ತಿ ಬರಬಹುದು. ಅದರಲ್ಲೂ ಭಾರತೀಯರಿಗೆ (Indians) ವೀಸಾ ಇಲ್ಲದೆಯೇ ಪ್ರವೇಶ ನೀಡುವ ದೇಶಗಳು ಇವೆ. ಈ ಜೂನ್‍ನಲ್ಲಿ (June) ಈ 3 ದೇಶಗಳನ್ನು ಸುತ್ತಿಕೊಂಡು ಬನ್ನಿ.

ವಿಯೆಟ್ನಾಂ

ನೀವು ಸಾಹಸ ಮತ್ತು ಸಂಸ್ಕೃತಿಯನ್ನು ಇಷ್ಟಪಡುವವರಾದರೆ ವಿಯೆಟ್ನಾಂ ನಿಮಗಾಗಿ ಕಾಯುತ್ತಿದೆ. ಹನೋಯ್‍ನ ಹಳೆಯ ಬೀದಿಗಳಲ್ಲಿ ಕಾಫಿ ಹೀರುತ್ತಾ ಅಲೆಯುವುದು, ಹೊಯ್ ಆನ್‍ನ ಲ್ಯಾಂಟರ್ನ್ ಬೆಳಕಿನಲ್ಲಿ ರಾತ್ರಿ ಕಳೆಯುವುದು ಒಂಥರಾ ಮ್ಯಾಜಿಕ್. ಅಂದಹಾಗೆ, ಬೆಂಗಳೂರಿನಿಂದ ಹೋ ಚಿ ಮಿನ್ಹ್ ಸಿಟಿಗೆ ಹೋಗಿ ಬರಲು ವಿಮಾನ ದರ ಕೇವಲ ರೂ. 20,675. ಇಲ್ಲಿ ಭಾರತೀಯರಿಗೆ ಇ-ವೀಸಾ ಸೌಲಭ್ಯವಿದೆ ಎಂದು ಕಾಂಡೆ ನಾಸ್ಟ್ ಟ್ರಾವೆಲರ್ ಇಂಡಿಯಾ ವರದಿ ಮಾಡಿದೆ. (ನೆನಪಿರಲಿ: ಏಪ್ರಿಲ್ 15, 2026 ರಿಂದ ಡಿಜಿಟಲ್ ವಲಸೆ ಘೋಷಣೆ ಕಡ್ಡಾಯವಾಗಿದೆ).

ನೇಪಾಳ

ಸದ್ದಿಲ್ಲದ, ನಿಧಾನಗತಿಯ ಪ್ರವಾಸ ಬೇಕೆನ್ನುವವರಿಗೆ ನೇಪಾಳವೇ ಬೆಸ್ಟ್. ಕಾಠ್ಮಂಡುವಿನ ಕೆಫೆಗಳಲ್ಲಿ ಕುಳಿತು ಮಳೆ ನೋಡುತ್ತಾ ಬಿಸಿ ಬಿಸಿ ಥುಕ್ಪಾ ಸವಿಯುವ ಮಜವೇ ಬೇರೆ. ಪ್ರವಾಸಿಗರ ಸಂಖ್ಯೆ ಕಡಿಮೆ ಇರುವ ಈ ಸಮಯದಲ್ಲಿ ನೀವು ಹುಲಿ ಮತ್ತು ಮೃಗಗಳನ್ನು ಹತ್ತಿರದಿಂದ ನೋಡಬಹುದು.

ವಿಮಾನ ದರ: ರೂ. 21,286 (ರಿಟರ್ನ್)

ಸ್ಪೆಷಲ್: ಭಾರತೀಯರಿಗೆ ಯಾವುದೇ ವೀಸಾ ಬೇಕಾಗಿಲ್ಲ

ಮಲೇಷ್ಯಾ

ಮಲೇಷ್ಯಾದ ಪೂರ್ವ ಕರಾವಳಿಯಲ್ಲಿ ಈಗ ಸೂರ್ಯನ ಆಟ, ನೀಲಿ ಆಕಾಶದ ನೋಟ, ಪೆಹೆರ್ಂಟಿಯನ್ ಅಥವಾ ಟಿಯೋಮನ್ ದ್ವೀಪಗಳಲ್ಲಿ ಸ್ನಾರ್ಕೆಲಿಂಗ್ ಮತ್ತು ಡೈವಿಂಗ್ ಮಾಡಲು ಇದು ಸಕಾಲ. ಸಮುದ್ರದಾಳದ ಅದ್ಭುತ ಜಗತ್ತನ್ನು ನೋಡಲು ಮಲೇಷ್ಯಾಕ್ಕೆ ಇಂದೇ ಪ್ಲಾನ್ ಮಾಡಿ.

ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ.

ಬಜೆಟ್ ಬೆಲೆಯಲ್ಲಿ ವಿದೇಶ ಸುತ್ತುವ ಇಂತಹ ಚಾನ್ಸ್ ಮತ್ತೆ ಸಿಗಲ್ಲ. ನಿಮ್ಮ ಪಾಸ್‌ಪೋರ್ಟ್ ರೆಡಿ ಮಾಡಿಕೊಳ್ಳಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports