Last Updated:
Rakul Preet Singh: ಐಟಿ ದಾಳಿ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿದ ಗಿಲ್ಲಿ ನಟಿ! ರಾಕುಲ್ ಪ್ರೀತ್ ಸಿಂಗ್ ಹೇಳಿದ್ದೇನು?
ಇತ್ತೀಚೆಗೆ ಗಿಲ್ಲಿ ನಟಿ ರಾಕುಲ್ ಪ್ರೀತ್ ಸಿಂಗ್ (Rakul Preet Singh) ಅವರಿಗೆ ಸಂಬಂಧಿಸಿದ ಕೆಲವು ಕಡೆ ಐಟಿ ದಾಳಿಯಾಗಿತ್ತು (IT raid). ಅದರ ಬೆನ್ನಲ್ಲೇ ಅವರ ಮಾವ ಲಂಡನ್ನಲ್ಲಿ ಆಸ್ಪತ್ರೆಗೆ (Hospital) ದಾಖಲಾಗಿದ್ದರು. ಇದೀಗ ಈ ಎಲ್ಲ ಬೆಳವಣಿಗೆಗಳ ನಂತರ ನಟಿ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುದ್ದಿಗಳನ್ನು ಸೆನ್ಸೇಷನಲ್ ಮಾಡುವ ಪ್ರವೃತ್ತಿಯು ಸ್ವಯಂ-ಘೋಷಿತ ಆನ್ಲೈನ್ ವರದಿಗಾರರು ಮತ್ತು ಮುಖ್ಯವಾಹಿನಿಯ ಮಾಧ್ಯಮದ ಕೆಲವು ಪತ್ರಕರ್ತರ ನಡುವೆ ಹೆಚ್ಚುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಆದ್ದರಿಂದ, ಈ ವಿಷಯಕ್ಕೆ ಸಂಬಂಧಿಸಿದ ಸತ್ಯಾಂಶವನ್ನು ಒಮ್ಮೆ ಮತ್ತು ಎಲ್ಲರಿಗೂ ಸ್ಪಷ್ಟಪಡಿಸಲು ನಾನು ಬಯಸುತ್ತೇನೆ.
ಆ ಶೋಧ ಕಾರ್ಯಾಚರಣೆಯು ನನ್ನೊಂದಿಗೆ ಸಂಬಂಧ ಹೊಂದಿರಲಿಲ್ಲ. ನಾನು ಸಶಸ್ತ್ರ ಪಡೆಗಳ ಹಿನ್ನೆಲೆಯಿಂದ ಬಂದವನು. ಚಿತ್ರರಂಗದಲ್ಲಿ ನನಗೆ ಯಾವುದೇ ಪ್ರಭಾವಿ ಬೆಂಬಲಿಗರು ಇರಲಿಲ್ಲ ಎಂಬುದನ್ನು ತಿಳಿಸಲು ಬಯಸುತ್ತೇನೆ. ನಾನು ಕೇವಲ ಕಠಿಣ ಪರಿಶ್ರಮದಿಂದ ಮೇಲೆ ಬಂದಿದ್ದೇನೆ ಮತ್ತು ಜವಾಬ್ದಾರಿಯುತ ಹಾಗೂ ಕಾನೂನು ಪಾಲಿಸುವ ಪ್ರಜೆಯಾಗಿ, ನನ್ನ 20ನೇ ವಯಸ್ಸಿನಿಂದಲೂ ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇನೆ ಎಂದಿದ್ದಾರೆ.
ವೈಯಕ್ತಿಕವಾಗಿ ಅಥವಾ ಯಾವುದೇ ನಿರ್ಮಾಣ ಸಂಸ್ಥೆಯ ಪರವಾಗಿ ಯಾವುದೇ ರೀತಿಯ ಕಾನೂನುಬಾಹಿರ ವಿದೇಶಿ ಹಣ ವರ್ಗಾವಣೆಯಲ್ಲಿ ನಾನು ಭಾಗಿಯಾಗಿಲ್ಲ. ದೇಶದಲ್ಲಿ ಅಥವಾ ವಿದೇಶದಲ್ಲಿ ಬೇರೆಯವರ ಪರವಾಗಿ ನಾನು ಯಾವುದೇ ‘ಬೆನಾಮಿ’ ಆಸ್ತಿಯನ್ನು ಹೊಂದಿಲ್ಲ ಎಂಬುದನ್ನೂ ಇಲ್ಲಿ ಸ್ಪಷ್ಟಪಡಿಸುತ್ತೇನೆ. ಯಾರೂ ನನಗೆ ಎಂದಿಗೂ ಯಾವುದೇ ಆಸ್ತಿಯನ್ನು ಉಡುಗೊರೆಯಾಗಿ ನೀಡಿಲ್ಲ ಮತ್ತು ಅಂತಹ ದುಬಾರಿ ಉಡುಗೊರೆಗಳನ್ನು ಸ್ವೀಕರಿಸದಿರುವುದು ನನ್ನ ಪಾಲಿಸಿ ಎಂದಿದ್ದಾರೆ.
ಈ ಸುಳ್ಳು, ದುರುದ್ದೇಶಪೂರಿತ ಮತ್ತು ಊಹಾಪೋಹದ ವರದಿಗಳನ್ನು ಪ್ರಕಟಿಸಿದ ಎಲ್ಲರಿಗೂ ನಾನು ವಿನಂತಿಸುವುದೇನೆಂದರೆ, ದಯವಿಟ್ಟು ಅವುಗಳನ್ನು ತೆಗೆಯಿರಿ. ಸತ್ಯಾಂಶವನ್ನು ಸ್ಪಷ್ಟಪಡಿಸಿ ಎಂದಿದ್ದಾರೆ.
ಮಾಧ್ಯಮ ವ್ಯವಹಾರವನ್ನು ನಡೆಸುವ ಪ್ರತಿಯೊಬ್ಬರಿಗೂ – ಅದು ಎಷ್ಟೇ ದೊಡ್ಡದಾಗಿರಲಿ – ತಮ್ಮದೇ ಆದ ವಾಣಿಜ್ಯ ಒತ್ತಡಗಳಿರುತ್ತವೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ ಅದಕ್ಕೆ ಸತ್ಯ ಬೆಲೆ ತೆರುವಂತಾಗದಿರಲಿ. ಖಂಡಿತವಾಗಿಯೂ, ಇನ್ನೊಬ್ಬರ ಘನತೆ ಹಾಗೂ ಜೀವನೋಪಾಯಕ್ಕೆ ಧಕ್ಕೆ ತರುವ ಮೂಲಕವಂತೂ ಅದನ್ನು ಮಾಡಬಾರದು ಎಂದಿದ್ದಾರೆ.














