Rajkumar Movie: ಕನ್ನಡ ರಾಜ್ಯೋತ್ಸವಕ್ಕೆ ಅಣ್ಣಾವ್ರ ಮೂವಿ, ಕಲರ್​ಫುಲ್ ಆಗಿ ಬರ್ತಿದೆ ಜಗ ಮೆಚ್ಚಿದ ಮಗ ಸಿನಿಮಾ! | | ACTPnews

ಕನ್ನಡ ರಾಜೋತ್ಸವಕ್ಕೆ ಅಣ್ಣಾವ್ರ ಸಿನಿಮಾ;ಬಣ್ಣದಲ್ಲಿ ಬರ್ತಿದೆ ಜಗ ಮೆಚ್ಚಿದ ಮಗ ಸಿನಿಮಾ!(ಚಿತ್ರ ಕೃಪೆ: ನಿರ್ಮಾಪಕ ಎಸ್.ಉದಯಶಂಕರ)


Last Updated:

ಜಗ ಮೆಚ್ಚಿದ ಮಗ ಚಿತ್ರ 54 ವರ್ಷದ ಹಿಂದೆ ತೆರೆ ಕಂಡಿತ್ತು. ಆದರೆ, ಈಗ ಈ ಚಿತ್ರ ಬಣ್ಣದಲ್ಲಿ ಬರ್ತಿದೆ. ಅಣ್ಣಾವ್ರ ಅಪ್ಪಟ ಅಭಿಮಾನಿ ಈ ಚಿತ್ರವನ್ನ ಕಪ್ಪು ಬಿಳುಪಿನಿಂದ ಕಲರ್‌ ಮಾಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿನೂ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ಕನ್ನಡ ರಾಜೋತ್ಸವಕ್ಕೆ ಅಣ್ಣಾವ್ರ ಸಿನಿಮಾ;ಬಣ್ಣದಲ್ಲಿ ಬರ್ತಿದೆ ಜಗ ಮೆಚ್ಚಿದ ಮಗ ಸಿನಿಮಾ!(ಚಿತ್ರ ಕೃಪೆ: ನಿರ್ಮಾಪಕ ಎಸ್.ಉದಯಶಂಕರ)
ಕನ್ನಡ ರಾಜೋತ್ಸವಕ್ಕೆ ಅಣ್ಣಾವ್ರ ಸಿನಿಮಾ;ಬಣ್ಣದಲ್ಲಿ ಬರ್ತಿದೆ ಜಗ ಮೆಚ್ಚಿದ ಮಗ ಸಿನಿಮಾ!(ಚಿತ್ರ ಕೃಪೆ: ನಿರ್ಮಾಪಕ ಎಸ್.ಉದಯಶಂಕರ)

ಡಾಕ್ಟರ್ ರಾಜ್‌ಕುಮಾರ್ (Rajkumar) ಅವರು ಅಭಿನಯಿಸಿದ್ದ ಜಗ ಮೆಚ್ಚಿದ ಮಗ ಚಿತ್ರ (Jaga Mechida Maga Movie) ಮತ್ತೆ ರಿಲೀಸ್ ಆಗುತ್ತಿದೆ. ಕಳೆದ ಒಂದು ವರ್ಷದಿಂದಲೂ ಈ ಚಿತ್ರದ ಕೆಲಸ ಚೆನ್ನೈನ ಪ್ರಸಾದ್ ಲ್ಯಾಬ್‌ನಲ್ಲಿ ನಡೀತಾನೇ ಇತ್ತು. ಇದೀಗ ಬಹುತೇಕ ಎಲ್ಲ ಕೆಲಸ ಪೂರ್ಣ ಆಗಿದೆ. ರಾಜ್‌ಕುಮಾರ್ ಅಭಿಮಾನಿ (Rajkumar Fan) ಹಾಗೂ ನಿರ್ಮಾಪಕ ಮತ್ತು ವಿತರಕ ಎಸ್.ಉದಯಶಂಕರ್ (S. Udayashankar) ಅವರು ಈ ಚಿತ್ರವನ್ನ ಕಲರ್‌ ಅಲ್ಲಿ ಬಿಡುಗಡೆ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಈ ಚಿತ್ರದ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕಲರ್ ಅಲ್ಲಿ ಜಗಮೆಚ್ಚಿದ ಮಗ

ಜಗ ಮೆಚ್ಚಿದ ಮಗ ಚಿತ್ರ ಕಪ್ಪು ಬಿಳುಪಿನಲ್ಲಿಯೇ ಇತ್ತು. 1972 ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಅಣ್ಣಾವ್ರಿಗೆ ಭಾರತಿ ವಿಷ್ಣುವರ್ಧನ್ ಅವರ ಜೋಡಿ ಆಗಿದ್ದಾರೆ. ಕೆ.ಎಸ್‌. ಅಶ್ವಥ್ ಅವರೂ ಈ ಸಿನಿಮಾದಲ್ಲಿದ್ದಾರೆ.

Rajkumar Bharathi Jaga Mechida Maga Movie colored version Release Soon

ಕಲರ್ ಅಲ್ಲಿ ಜಗ ಮೆಚ್ಚಿದ ಮಗ

(ಚಿತ್ರ ಕೃಪೆ: ನಿರ್ಮಾಪಕ ಎಸ್.ಉದಯಶಂಕರ)

ಈ ಚಿತ್ರ ಇದೀಗ ಕಲರ್‌ ಅಲ್ಲಿ ಬರ್ತಿದೆ. ಸಿನಿಮಾ ಸ್ಕೋಪ್ ಕೂಡ ಆಗಿದೆ. 5.1 ಸೌಂಡ್ ಎಫೆಕ್ಟ್ ಬಂದಿದೆ. ಇಂದಿನ ತಂತ್ರಜ್ಞಾನಕ್ಕೆ ತಕ್ಕನಾಗಿಯೇ ಈ ಚಿತ್ರ ರೆಡಿ ಆಗುತ್ತಿದೆ.

ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಪ್ಲಾನ್

ಅಣ್ಣಾವ್ರ ಈ ಚಿತ್ರ ಇದೇ ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಆಗುತ್ತಿದೆ. ಈ ನಿಟ್ಟಿನಲ್ಲಿ ರಿಲೀಸ್ ತಯಾರಿ ನಡೆದಿದೆ. ಈ ಒಂದು ಚಿತ್ರವನ್ನ ಮತ್ತೆ ರಿಲೀಸ್ ಮಾಡ್ಬೇಕು ಅನ್ನುವ ಕನಸು ಇತ್ತು.

ಈ ಚಿತ್ರವನ್ನ ಎಸ್.ಭಾವನಾರಾಯಣ್ ನಿರ್ಮಾಣ ಮಾಡಿದ್ದರು. ಹುಣಸೂರು ಕೃಷ್ಣಮೂರ್ತಿಗಳು ಇದನ್ನ ಡೈರೆಕ್ಷನ್ ಮಾಡಿದ್ದರು. ಸತ್ಯನಾರಾಯಣ್ ರಾವ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದರು.

ಸತ್ಯಹರಿಶ್ಚಂದ್ರ ಕಲರ್

ರಾಜ್‌ಕುಮಾರ್ ಅವರು ಅಭಿನಯಿಸರೋ ಸತ್ಯಹರಿಶ್ಚಂದ್ರ ಹಾಗೂ ಕಸ್ತೂರಿ ನಿವಾಸ ಕಲರ್ ಆಗಿದೆ. ಇದೀಗ ಜಗ ಮೆಚ್ಚಿದ ಮಗ ಚಿತ್ರ ಬಣ್ಣದಲ್ಲಿ ಬರ್ತಿದೆ.

Rajkumar Bharathi Jaga Mechida Maga Movie colored version Release Soon

ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಪ್ಲಾನ್

(ಚಿತ್ರ ಕೃಪೆ: ನಿರ್ಮಾಪಕ ಎಸ್.ಉದಯಶಂಕರ)

ಈ ಚಿತ್ರವನ್ನ ಕಲರ್‌ ಅಲ್ಲಿ ತರ್ತಿರೋ ಎಸ್.ಉದಯಶಂಕರ್ ಅವರಿಗೆ ಒಂದಷ್ಟು ಪ್ಲಾನ್ಸ್ ಇದೆ. ಆ ಪ್ಲಾನ್ ಅಲ್ಲಿ ಡಾಕ್ಟರ್ ರಾಜ್‌ಕುಮಾರ್ ಅವರ “ಮಂತ್ರಾಲಯ ಮಹಾತ್ಮೆ” ಚಿತ್ರವನ್ನು ಕಲರ್‌ ಅಲ್ಲಿ ರಿಲೀಸ್ ಮಾಡುವ ಯೋಚನೆ ಇದೆ ಅಂತ ಹೇಳಿಕೊಂಡಿದ್ದಾರೆ.

ಜಗ ಮೆಚ್ಚಿದ ಮಗ

ಈ ಚಿತ್ರದಲ್ಲಿ ನರಸಿಂಹ ರಾಜು ಇದ್ದಾರೆ. ಎಂ.ವಿ.ರಾಜಮ್ಮ ನಟಿಸಿದ್ದಾರೆ. ಕೆ.ಎಸ್.ಅಶ್ವಥ್, ಭಾರತಿ ಮತ್ತು ರಾಜ್‌ಕುಮಾರ್ ಅಭಿನಯಿಸಿದ್ದಾರೆ.

ರಾಜ್‌ ಫೋಟೋಸ್

ಜಗ ಮೆಚ್ಚಿದ ಮಗ ಕಲರ್‌ ಫೋಟೋಸ್ ಗಮನ ಸೆಳೆಯುತ್ತಿವೆ. ಎಸ್.ಉದಯಶಂಕರ್ ಅವರೇ ಈ ಫೋಟೊಗಳನ್ನ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ರಾಜ್‌ಕುಮಾರ್ ಹಾಗೂ ಭಾರತಿಯವರು ಅಷ್ಟೆ ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports