Last Updated:
ಜಗ ಮೆಚ್ಚಿದ ಮಗ ಚಿತ್ರ 54 ವರ್ಷದ ಹಿಂದೆ ತೆರೆ ಕಂಡಿತ್ತು. ಆದರೆ, ಈಗ ಈ ಚಿತ್ರ ಬಣ್ಣದಲ್ಲಿ ಬರ್ತಿದೆ. ಅಣ್ಣಾವ್ರ ಅಪ್ಪಟ ಅಭಿಮಾನಿ ಈ ಚಿತ್ರವನ್ನ ಕಪ್ಪು ಬಿಳುಪಿನಿಂದ ಕಲರ್ ಮಾಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿನೂ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಡಾಕ್ಟರ್ ರಾಜ್‌ಕುಮಾರ್ (Rajkumar) ಅವರು ಅಭಿನಯಿಸಿದ್ದ ಜಗ ಮೆಚ್ಚಿದ ಮಗ ಚಿತ್ರ (Jaga Mechida Maga Movie) ಮತ್ತೆ ರಿಲೀಸ್ ಆಗುತ್ತಿದೆ. ಕಳೆದ ಒಂದು ವರ್ಷದಿಂದಲೂ ಈ ಚಿತ್ರದ ಕೆಲಸ ಚೆನ್ನೈನ ಪ್ರಸಾದ್ ಲ್ಯಾಬ್‌ನಲ್ಲಿ ನಡೀತಾನೇ ಇತ್ತು. ಇದೀಗ ಬಹುತೇಕ ಎಲ್ಲ ಕೆಲಸ ಪೂರ್ಣ ಆಗಿದೆ. ರಾಜ್‌ಕುಮಾರ್ ಅಭಿಮಾನಿ (Rajkumar Fan) ಹಾಗೂ ನಿರ್ಮಾಪಕ ಮತ್ತು ವಿತರಕ ಎಸ್.ಉದಯಶಂಕರ್ (S. Udayashankar) ಅವರು ಈ ಚಿತ್ರವನ್ನ ಕಲರ್ ಅಲ್ಲಿ ಬಿಡುಗಡೆ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಈ ಚಿತ್ರದ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಜಗ ಮೆಚ್ಚಿದ ಮಗ ಚಿತ್ರ ಕಪ್ಪು ಬಿಳುಪಿನಲ್ಲಿಯೇ ಇತ್ತು. 1972 ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಅಣ್ಣಾವ್ರಿಗೆ ಭಾರತಿ ವಿಷ್ಣುವರ್ಧನ್ ಅವರ ಜೋಡಿ ಆಗಿದ್ದಾರೆ. ಕೆ.ಎಸ್. ಅಶ್ವಥ್ ಅವರೂ ಈ ಸಿನಿಮಾದಲ್ಲಿದ್ದಾರೆ.
ಕಲರ್ ಅಲ್ಲಿ ಜಗ ಮೆಚ್ಚಿದ ಮಗ
(ಚಿತ್ರ ಕೃಪೆ: ನಿರ್ಮಾಪಕ ಎಸ್.ಉದಯಶಂಕರ)
ಈ ಚಿತ್ರ ಇದೀಗ ಕಲರ್ ಅಲ್ಲಿ ಬರ್ತಿದೆ. ಸಿನಿಮಾ ಸ್ಕೋಪ್ ಕೂಡ ಆಗಿದೆ. 5.1 ಸೌಂಡ್ ಎಫೆಕ್ಟ್ ಬಂದಿದೆ. ಇಂದಿನ ತಂತ್ರಜ್ಞಾನಕ್ಕೆ ತಕ್ಕನಾಗಿಯೇ ಈ ಚಿತ್ರ ರೆಡಿ ಆಗುತ್ತಿದೆ.
ಈ ಚಿತ್ರವನ್ನ ಎಸ್.ಭಾವನಾರಾಯಣ್ ನಿರ್ಮಾಣ ಮಾಡಿದ್ದರು. ಹುಣಸೂರು ಕೃಷ್ಣಮೂರ್ತಿಗಳು ಇದನ್ನ ಡೈರೆಕ್ಷನ್ ಮಾಡಿದ್ದರು. ಸತ್ಯನಾರಾಯಣ್ ರಾವ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದರು.
ರಾಜ್‌ಕುಮಾರ್ ಅವರು ಅಭಿನಯಿಸರೋ ಸತ್ಯಹರಿಶ್ಚಂದ್ರ ಹಾಗೂ ಕಸ್ತೂರಿ ನಿವಾಸ ಕಲರ್ ಆಗಿದೆ. ಇದೀಗ ಜಗ ಮೆಚ್ಚಿದ ಮಗ ಚಿತ್ರ ಬಣ್ಣದಲ್ಲಿ ಬರ್ತಿದೆ.
ಕನ್ನಡ ರಾಜ್ಯೋತ್ಸವಕ್ಕೆ ರಿಲೀಸ್ ಪ್ಲಾನ್
(ಚಿತ್ರ ಕೃಪೆ: ನಿರ್ಮಾಪಕ ಎಸ್.ಉದಯಶಂಕರ)
ಈ ಚಿತ್ರವನ್ನ ಕಲರ್ ಅಲ್ಲಿ ತರ್ತಿರೋ ಎಸ್.ಉದಯಶಂಕರ್ ಅವರಿಗೆ ಒಂದಷ್ಟು ಪ್ಲಾನ್ಸ್ ಇದೆ. ಆ ಪ್ಲಾನ್ ಅಲ್ಲಿ ಡಾಕ್ಟರ್ ರಾಜ್‌ಕುಮಾರ್ ಅವರ “ಮಂತ್ರಾಲಯ ಮಹಾತ್ಮೆ” ಚಿತ್ರವನ್ನು ಕಲರ್ ಅಲ್ಲಿ ರಿಲೀಸ್ ಮಾಡುವ ಯೋಚನೆ ಇದೆ ಅಂತ ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನರಸಿಂಹ ರಾಜು ಇದ್ದಾರೆ. ಎಂ.ವಿ.ರಾಜಮ್ಮ ನಟಿಸಿದ್ದಾರೆ. ಕೆ.ಎಸ್.ಅಶ್ವಥ್, ಭಾರತಿ ಮತ್ತು ರಾಜ್‌ಕುಮಾರ್ ಅಭಿನಯಿಸಿದ್ದಾರೆ.
ಜಗ ಮೆಚ್ಚಿದ ಮಗ ಕಲರ್ ಫೋಟೋಸ್ ಗಮನ ಸೆಳೆಯುತ್ತಿವೆ. ಎಸ್.ಉದಯಶಂಕರ್ ಅವರೇ ಈ ಫೋಟೊಗಳನ್ನ ಮಾಧ್ಯಮಗಳಿಗೆ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ರಾಜ್‌ಕುಮಾರ್ ಹಾಗೂ ಭಾರತಿಯವರು ಅಷ್ಟೆ ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂತ ಹೇಳಬಹುದು.














