Last Updated:
ಪ್ರಧಾನಿ ಮೋದಿ ಜನ್ಮದಿನ: ಆಲಿಯಾ ಭಟ್, ರಣ್‌ಬೀರ್ ಕಪೂರ್ ಸೇವಾ ಸಂಕಲ್ಪ ಅಭಿಯಾನಕ್ಕೆ ಬೆಂಬಲ, ಮುಂಬೈನ 20 ಶಾಲೆಗಳ ನವೀಕರಣಕ್ಕೆ ಸಂಕಲ್ಪ.
ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಅವರ 76ನೇ ಜನ್ಮದಿನದ ಹಿನ್ನೆಲೆಯಲ್ಲಿ ಬಾಲಿವುಡ್ ತಾರಾ ದಂಪತಿ ಆಲಿಯಾ ಭಟ್ (Alia Bhatt) ಮತ್ತು ರಣ್‌ಬೀರ್ ಕಪೂರ್ (Ranbir Kapoor) ವಿಶೇಷ ಸಾಮಾಜಿಕ ಕಾರ್ಯವೊಂದಕ್ಕೆ ಕೈಜೋಡಿಸಿದ್ದಾರೆ. ಪ್ರಧಾನಿ ಮೋದಿ ಅವರ ಸಾರ್ವಜನಿಕ ಸೇವೆಯ 25 ವರ್ಷಗಳನ್ನು ಗುರುತಿಸಿ ಆರಂಭವಾಗಿರುವ ಸೇವಾ ಸಂಕಲ್ಪ ಅಭಿಯಾನಕ್ಕೆ (Seva Sankalp Abhiyan) ಬೆಂಬಲ ಸೂಚಿಸಿರುವ ಈ ಜೋಡಿ, ಮುಂಬೈನ 20 ಶಾಲೆಗಳ ನವೀಕರಣಕ್ಕೆ ಸಂಕಲ್ಪ ಮಾಡಿದೆ.
ಆಲಿಯಾ ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸುವುದರ ಜೊತೆಗೆ, ತಾವು ಮತ್ತು ರಣ್‌ಬೀರ್ ಕೈಗೊಂಡಿರುವ ಸಾಮಾಜಿಕ ಕಾರ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಬೃಹನ್ಮುಂಬೈ ಮಹಾನಗರ ಪಾಲಿಕೆಯ ಶಿಫಾರಸುಗಳ ಆಧಾರದ ಮೇಲೆ 20 ಶಾಲೆಗಳನ್ನು ನವೀಕರಿಸಲು ತಾವು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
Happy Birthday to our Hon’ble Prime Minister @narendramodi ji! Wishing you a healthy and fulfilling year ahead. The spirit of #SevaSankalpAbhiyaan reflects a wonderful vision of collective action and giving back. To mark this day and support the cause, Ranbir and I are pledging…
— Alia Bhatt (@aliaa08) September 17, 2026
ಸೇವಾ ಸಂಕಲ್ಪ ಅಭಿಯಾನವು ಪ್ರಧಾನಿ ಮೋದಿಯವರ ಸಾರ್ವಜನಿಕ ಸೇವೆಯ 25 ವರ್ಷಗಳನ್ನು ಗುರುತಿಸುವ ಉದ್ದೇಶದಿಂದ ಆರಂಭಿಸಲಾಗಿದೆ. ಸೆಪ್ಟೆಂಬರ್ 17ರಿಂದ ಆರಂಭವಾಗಿರುವ ಈ ಅಭಿಯಾನದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
1,000 ಹೆಣ್ಣುಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಪ್ರಧಾನಿ ಮೋದಿಯವರ ಜನ್ಮದಿನದ ಸಂದರ್ಭದಲ್ಲಿ ಬಾಲಿವುಡ್ ತಾರೆಯರಿಂದ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಉಪಕ್ರಮಗಳು ಘೋಷಣೆಯಾಗಿವೆ.














