Last Updated:
ರಾಜಕುಮಾರ್ ಅವರು 50 ನೇ ವಯಸ್ಸಿಗೆ ಯೋಗಾಭ್ಯಾಸ ಆರಂಭಿಸಿದರು. ಪ್ರತಿ ದಿನವೂ ಐದಾರು ಗಂಟೆ ಕಠಿಣ ಯೋಗಾಭ್ಯಾಸ ಮಾಡುತ್ತಿದ್ದರು. ಕಾಮನ ಬಿಲ್ಲು ಮತ್ತು ಕೆರಳಿದ ಸಿಂಹ ಚಿತ್ರದಲ್ಲಿ ಇವರ ಯೋಗಾಭ್ಯಾಸದ ದೃಶ್ಯಗಳು ಇವೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಜ್ಕುಮಾರ್ (Rajkumar) ಅವರು ಎರಡು ಚಿತ್ರದಲ್ಲಿ ಯೋಗಾಭ್ಯಾಸ (Yoga Practice) ಮಾಡಿದ್ದಾರೆ. ಕಾಮನ ಬಿಲ್ಲು ಚಿತ್ರದ (Kaamana Billu) ಮೊದಲ ದೃಶ್ಯದಲ್ಲಿಯೇ ಇವರು ಯೋಗಾಭ್ಯಾಸ ಮಾಡುವ ದೃಶ್ಯ ಇದೆ. ಕೆರಳಿದ ಸಿಂಹ ಚಿತ್ರದಲ್ಲೂ (Keralida Simha Movie) ಒಂದು ದೃಶ್ಯ ಬರುತ್ತದೆ. ತಮ್ಮ 50 ನೇ ವಯಸ್ಸಿನಲ್ಲಿ ಯೋಗಾಭ್ಯಾಸ ಶುರು ಮಾಡಿದ್ದ ರಾಜ್ಕುಮಾರ್ ಅವರು, ನಿತ್ಯವೂ ಕಠಿಣ ಅಭ್ಯಾಸ ಮಾಡ್ತಾ ಇದ್ದರು. ವಿವಿಧ ಆಸನಗಳನ್ನ ಹಾಕುತ್ತಿದ್ದರು. ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಅಣ್ಣಾವ್ರ ಯೋಗಾಭ್ಯಾಸದ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಕಾಮನ ಬಿಲ್ಲು ಚಿತ್ರ ಮೇ-26,1983 ರಲ್ಲಿ ರಿಲೀಸ್ ಆಗಿತ್ತು. 43 ವರ್ಷದ ಹಿಂದೆ ಬಂದ ಈ ಚಿತ್ರದಲ್ಲಿ ಅಣ್ಣಾವ್ರ ಯೋಗಾಭ್ಯಾಸದ ದೃಶ್ಯ ಇಂದಿಗೂ ಜನಮಾನಸದಲ್ಲಿದೆ.
ರಾಜ್ ಯೋಗ ಮಾಡಿದ ಆ ಚಿತ್ರಗಳು; ಯಾವ ಚಿತ್ರದಲ್ಲಿ ಯಾವ್ ಸೀನ್ ಇದೆ ಗೊತ್ತಾ?
ಅಷ್ಟು ಪರಿಣಾಮಕಾರಿ ಆಗಿಯೇ ಇವರು ಈ ಚಿತ್ರದಲ್ಲಿ ಯೋಗಾಭ್ಯಾಸ ಮಾಡಿದ್ದರು. ಕ್ಯಾಮರಾಗೋಸ್ಕರವೇ ಈ ಯೋಗ ಅಭ್ಯಾಸವನ್ನ ಇವರು ಮಾಡಿರಲಿಲ್ಲ. ನಿಜವಾಗಲು ಅಣ್ಣಾವ್ರು ತಮ್ಮ ಪಾಡಿಗೆ ತಾವು ಯೋಗಾಭ್ಯಾಸ ಮಾಡಿದ್ದಾರೆ. ಅದು ಅಷ್ಟೆ ಅದ್ಭುತವಾಗಿಯೇ ಕ್ಯಾಪ್ಚರ್ ಆಗಿದೆ. ನೋಡುಗರಿಗೆ ಅದ್ಭುತ ಅನುಭವ ಕೊಟ್ಟಿದೆ.
ರಾಜ್ಕುಮಾರ್ ಅವರು ನಿತ್ಯವು 5 ರಿಂದ 6 ಗಂಟೆ ಯೋಗಾಭ್ಯಾಸ ಮಾಡ್ತಾ ಇದ್ದರು. ಕಠಿಣ ಆಸನಗಳನ್ನು ಹಾಕುತ್ತಿದ್ದರು. ಕಾಡುಗಳ್ಳ ವೀರಪ್ಪನ್ ಇವರನ್ನ ಅಪರಿಸಿದಾಗ ಕಾಡಿನಲ್ಲೂ ಅಣ್ಣಾವ್ರು ಯೋಗಾಭ್ಯಾಸ ಮಾಡಿದ್ದರು. ಇದರಿಂದ ಮನಸ್ಸು ಮತ್ತು ದೇಹವನ್ನ ಸಮತೋಲನದಲ್ಲಿಯೇ ಇಟ್ಟುಕೊಂಡಿದ್ದರು.
50 ನೇ ವಯಸ್ಸಿನಲ್ಲಿ ಯೋಗಾಭ್ಯಾಸ
ಡಾಕ್ಟರ್ ರಾಜ್ಕುಮಾರ್ ಅವರು ಕೆರಳಿದ ಸಿಂಹದಲ್ಲೂ ಯೋಗಾಭ್ಯಾಸ ಮಾಡಿದ್ದಾರೆ. ಆದರೆ, ಇದನ್ನ ಇವರು Flexibility ಗಾಗಿಯೇ ಬಳಕೆ ಮಾಡ್ತಾರೆ.
ಅಣ್ಣಾವ್ರು ಯೋಗಾಭ್ಯಾಸವನ್ನ ಮನೆಯಲ್ಲೂ ಮಾಡುತ್ತಿದ್ದರು. ಕನಕಪುರ ರಸ್ತೆಯ ಸಮೀಪದ ಯೋಗ ಗುರು ಹೊನ್ನಪ್ಪ ಅವರ ಆಶ್ರಮಕ್ಕೂ ಹೋಗುತ್ತಿದ್ದರು. ಅಲ್ಲಿ ಇವರಿಗೆ ಪತ್ನಿ ಪಾರ್ವತಮ್ಮ ರಾಜ್ಕುಮಾರ್ ಅವರ ಸಾಥ್ ಕೊಡ್ತಾ ಇದ್ದರು.
ಕೆರಳಿದ ಸಿಂಹ ಚಿತ್ರ
ರಾಜ್ಕುಮಾರ್ ಅವರ ಯೋಗಾಸನದ ಫೋಟೋಗಳು ಇಂದಿಗೂ ಗಮನಸ ಸೆಳೆಯುತ್ತವೆ. ಹೊನ್ನಪ್ಪ ಅವರ ಯೋಗಾಭ್ಯಾಸದ ಪುಸ್ತಕದಲ್ಲೂ ಈ ಫೋಟೋಗಳನ್ನ ನೋಡಬಹುದು. ಈ ಅಪರೂಪದ ಫೊಟೋಗಳು ತುಂಬಾನೆ ಚೆನ್ನಾಗಿವೆ. ವಿರಳಾತಿ ವಿರಳ ಫೋಟೋಗಳು ಇವಾಗಿವೆ.
ರಾಜ್ಕುಮಾರ್ ಅವರು ಜೂನ್-21 ರಂದು ಆಚರಿಸುವ ವಿಶ್ವ ಯೋಗ ದಿನಾಚರಣೆ ಮೊದಲೇ ಯೋಗಾಭ್ಯಾಸ ಶುರು ಮಾಡಿದವರು.
ಕಾಮನ ಬಿಲ್ಲು ಚಿತ್ರ ನೋಡಿದವರಿಗೆ ಅಣ್ಣಾವ್ರು ಆಗಲೇ ಯೋಗದ ಮಹತ್ವವನ್ನ ತಿಳಿಸುವ ಪ್ರಯತ್ನ ಮಾಡಿದ್ದರು. ಯೋಗ ತುಂಬಾನೆ ಉತ್ತಮ ಅನ್ನೋದನ್ನು ಅವರು ಹೀಗೆ ತೋರಿಸಿಕೊಟ್ಟಿದ್ದರು ಅಂತ ಹೇಳಬಹುದು.













