Rajinikanth: ರಜನೀಕಾಂತ್ ಕರುಂಗಾಲಿ ಮಾಲೆ ಧರಿಸೋದ್ಯಾಕೆ? ಏನಿದರ ಮಹತ್ವ? | | ACTPnews

ರಜನಿ


Last Updated:

ತುಂಬಾ ಜನ ಸ್ಟಾರ್​​ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್ ಅವರು ಸೇರಿದಂತೆ ತುಂಬಾ ದೊಡ್ಡ ಕಲಾವಿದರು ಕರುಂಗಾಲಿ ಮಾಲೆ ಧರಿಸಿರೋದನ್ನು ನೋಡಿರಬಹುದು. ಇದರ ಹಿಂದಿನ ಪ್ರಾಮುಖ್ಯತೆ ಗೊತ್ತಾ?

ರಜನಿ
ರಜನಿ

ಧನುಷ್ ಸೇರಿದಂತೆ ಸೌತ್ ಸಿನಿಮಾದ ಬಹಳಷ್ಟು ಸ್ಟಾರ್ ನಟರು ಕರುಂಗಾಲಿ ಮಾಲೆ (Karungali Mala) ಧರಿಸೋದನ್ನು ನೀವು ನೋಡಿರಬಹುದು. ತುಂಬಾ ಜನ ಸ್ಟಾರ್​​ಗಳು ರಜನಿ, ಸಾಯಿ ಪಲ್ಲವಿ (Sai Pallavi), ಪವನ್ ಕಲ್ಯಾಣ್ ಅವರು ಸೇರಿದಂತೆ ತುಂಬಾ ದೊಡ್ಡ ಕಲಾವಿದರು ಕರುಂಗಾಲಿ ಮಾಲೆ ಧರಿಸಿರೋದನ್ನು ನೋಡಿರಬಹುದು. ಇದರ ಹಿಂದಿನ ಪ್ರಾಮುಖ್ಯತೆ ಗೊತ್ತಾ?

ಈ ವಿಚಾರವಾಗಿ ರಾಜೇಶ್ ಗೌಡ ಯೂಟ್ಯೂಬ್​ ಚಾನೆಲ್​​ನಲ್ಲಿ ಮಾತನಾಡಲಾಗಿದ್ದು ಕರುಂಗಾಲಿ ಮಾಲೆಯ ರಹಸ್ಯದ ಬಗ್ಗೆ ವಿವರವಾಗಿ ಹೇಳಲಾಗಿದೆ. ರಜನಿ ಇದನ್ನು ಧರಿಸೋದ್ಯಾಕೆ?

ಸ್ಟಾರ್​​ಗಳು ಕರುಂಗಾಲಿ ಹಾಕೋಕೆ ಶುರು ಮಾಡಿದ ನಂತರ ಇದು ಸುದ್ದಿಯಾಯ್ತು. ಭಾರತದಲ್ಲಿರುವಂತಹ ಶಿವನ ಎನರ್ಜಿಗಳು ಎಲ್ಲಾ ಕಡೆ ಹೋಗಿ ಭಾರತಕ್ಕೆ ಬಂದಿದೆ. ಈಗ ಯುವಜನರಲ್ಲಿ ಧಾರ್ಮಿಕ ಮನೋಭಾವ ಹೆಚ್ಚಾಗಿದೆ.

ಒಬ್ಬ ಸ್ಟಾರ್​​ಗೆ ಏನೋ ಒಂದು ಎನರ್ಜಿ ವರ್ಕ್ ಆಯ್ತು ಎಂದರೆ ಅದು ಸುದ್ದಿಯಾಗುತ್ತದೆ. ರಜನಿ ಅವರು ಆಧ್ಯಾತ್ಮಿಕ ವಿಚಾರವಾಗಿ ತುಂಬಾ ಫೇಮಸ್. ಅವರು ತುಂಬಾ ಸರಳ ವ್ಯಕ್ತಿ. ಗುಹೆಯಲ್ಲಿ ತಪಸ್ಸು ಮಾಡುವುದು, ಹೋಮಗಳನ್ನು ಮಾಡುವುದು ಎಲ್ಲ ಮಾಡುತ್ತಾರೆ.

ಅಷ್ಟು ಸರಳತೆ ಇರುವುದಕ್ಕೆ ಅವರು ಎತ್ತರಕ್ಕೆ ತಲುಪಿದ್ದಾರೆ.ಬುಡ ಎಷ್ಟು ಗಟ್ಟಿಯಾಗಿಯೋ ಮರ ಅಷ್ಟು ಗಟ್ಟಿಯಾಗಿರುತ್ತದೆ. ರಜನಿ ಎಲ್ಲವನ್ನೂ ದಾಟಿ ಬರೋದಕ್ಕೆ ಕಾರಣ ಅವರ ಧಾರ್ಮಿಕ ಅಭ್ಯಾಸ. ಅವರು ಮೆಡಿಟೇಷನ್ ಮಾಡೋದು, ಸ್ವಲ್ಪ ದಿನ ಏಕಾಂತವಾಗಿರೋದು, ರಜನಿ ಅಷ್ಟೊಂದು ಸರಳವಾಗಿ ಎಲ್ಲವನ್ನೂ ದಾಟಿ ಬರುವುದರಲ್ಲಿ ಕರುಂಗಾಲಿ ಕಾರಣ ಎಂದಿದ್ದಾರೆ.

ಹಿಂದಿನ ಕಾಲದಲ್ಲಿ ಊರಿನಲ್ಲಿ ಓಡಾಡುವಾಗ ತೆಗೆದುಕೊಂಡು ಹೋಗುವಾಗ ಅದು ಕರುಂಗಲ್ಲಿ ಮರದಲ್ಲಿ ಮಾಡಿರುತ್ತಿದ್ದರು. ಮಲಗೋ ಮಂಚವೂ ಕರುಂಗಲ್ಲಿ. ಇನ್ನು ದೇವರ ಆಯುಧ ಮಾಡುವಾಗಲೂ ಕರುಂಗಲ್ಲಿ ಬಳಸುತ್ತಾರೆ. ದೃಷ್ಟಿಯಾಗುವುದನ್ನು, ಶಕ್ತಿಯನ್ನು ಕೇಂದ್ರೀಕರಿಸಲು ಕರುಂಗಾಲಿ ಬಳಸುತ್ತಾರೆ.

ಕರು ಅಂದರೆ ಕಪ್ಪು, ಗಾಲಿ ಎಂದರೆ ಕಾಳಿ ಎಂದೂ ಹೇಳುತ್ತಾರೆ. ಕರುಂಗಾಲಿ ನಿಮ್ಮೆಡೆಗೆ ಏನೇ ಬರುತ್ತಿದ್ದರೂ ಅದನ್ನು ತಡೆಯಬಹಲ್ಲದು. ನಿಮ್ಮ ಕಡೆ ನೆಗೆಟಿವಿಟಿ ಬರುತ್ತಿದ್ದರೆ ಅದನ್ನು ಕರುಂಗಾಲಿ ತಡೆಯುತ್ತದೆ.

ಖ್ಯಾತ ನಟ ಧನುಷ್ ಧರಿಸುವ ಕರುಂಗಾಲಿ ಮಾಲೆಯು ಆಧ್ಯಾತ್ಮಿಕ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ ವಿಶೇಷ ಮಹತ್ವ ಹೊಂದಿದೆ. ಇದು ನೆಗೆಟಿವ್ ಶಕ್ತಿಯನ್ನು ದೂರವಿಟ್ಟು, ಏಕಾಗ್ರತೆ ಮತ್ತು ಪಾಸಿಟಿವ್ ಚಿಂತನೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯಿದೆ. ಇದು ಸ್ವಲ್ಪ ಉದ್ದವಾಗಿ (22-26 ಇಂಚುಗಳು) ಎದೆಯ ಭಾಗದವರೆಗೆ ಬರುವಂತೆ ವಿನ್ಯಾಸಗೊಳಿಸಲಾಗಿರುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed