Last Updated:
Rajinikanth: ರಜನಿಕಾಂತ್ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿದ್ದಾಗಿನ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಅದು ನಿಜವೋ ಅಥವಾ Ai ಫೇಕ್ ಕಾರ್ಡೋ ಇನ್ನೂ ಸ್ಪಷ್ಟವಾಗಿಲ್ಲ
ಚಲನಚಿತ್ರೋದ್ಯಮದಲ್ಲಿ ಉನ್ನತ ಮಟ್ಟಕ್ಕೆ ಏರಿದರೂ ತಮ್ಮ ಹಿಂದಿನ ಮತ್ತು ಸಾಮಾನ್ಯ ಜೀವನವನ್ನು ಮರೆಯದ ವ್ಯಕ್ತಿತ್ವಕ್ಕೆ ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ಅವರೇ ಬಹುದೊಡ್ಡ ಸಾಕ್ಷಿ . ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು, ಅವರು ಬೆಂಗಳೂರು ಸಾರಿಗೆ ಸೇವೆಯಲ್ಲಿ (ಬಿಎಂಟಿಸಿ ) ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಇತ್ತೀಚೆಗೆ, ರಜನಿಕಾಂತ್ ಕಂಡಕ್ಟರ್ ಆಗಿದ್ದ ದಿನಗಳ ಮೂಲ ಗುರುತಿನ ಚೀಟಿ (ಐಡಿ ಕಾರ್ಡ್) ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದೀಗ ಈ ಅಪರೂಪದ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅವರ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದೆ. ಆದ್ರೆ ವೈರಲ್ ಆಗುತ್ತಿರುವ ಈ ಕಾರ್ಡ್ ನಿಜವೋ ಅಥವಾ Ai ನಿರ್ಮಿತ ಫೇಕ್ ಕಾರ್ಡೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೂ ರಜನಿ ಫ್ಯಾನ್ಸ್ ಅಂತೂ ಈ ಹಳೆಯ ಫೋಟೋ ನೋಡಿ ಫುಲ್ ಖುಷಿಯಾಗಿದ್ದಾರೆ.
ರಜನಿಕಾಂತ್ ಅವರ ನಿಜವಾದ ಹೆಸರು ‘ಶಿವಾಜಿ ರಾವ್ ಗಾಯಕ್ವಾಡ್’ ಎಂದು ಈ ಗುರುತಿನ ಚೀಟಿಯಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. ಜೊತೆಗೆ ಅವರ ಕಂಡಕ್ಟರ್ ಬ್ಯಾಡ್ಜ್ ಸಂಖ್ಯೆಯೂ ಅದರಲ್ಲಿ ಗೋಚರಿಸುತ್ತದೆ. ಜೊತೆಗೆ ಅವರು ಶ್ರೀನಗರ ಡಿಪೋದಲ್ಲಿ, ರೂಟ್ ನಂಬರ್ 10A ಬಸ್ಸಿನಲ್ಲಿ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂಬ ಮಾಹಿತಿ ಇಲ್ಲಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರ ಏನೆಂದರೆ 1971 ರಲ್ಲಿ ಅವರಿಗಿದ್ದ ಮಾಸಿಕ ಸಂಬಳ ಕೇವಲ 275 ರೂಪಾಯಿ ಆಗಿತ್ತು ಎಂದು ಆ ಕಾರ್ಡ್ ನಲ್ಲಿ ನಮೋದಿಸಲಾಗಿದೆ.
ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಂಯೋಜನೆಯಲ್ಲಿ ರಜನಿಕಾಂತ್ ನಟಿಸಿರುವ ‘ಕೂಲಿ’ ಚಿತ್ರದ ಪೋಸ್ಟರ್‌ಗಳು ವಿಶಿಷ್ಟವಾದ ಬಸ್ ಕಂಡಕ್ಟರ್ ಬ್ಯಾಡ್ಜ್ ಸಂಖ್ಯೆ (1421) ಅನ್ನು ಸಹ ತೋರಿಸುತ್ತವೆ. ಆದಾಗ್ಯೂ, ನಿರ್ದೇಶಕರು ಇತ್ತೀಚೆಗೆ ಆ ಸಂಖ್ಯೆ ಲೋಕೇಶ್ ಕನಕರಾಜ್ ಅವರ ತಂದೆಯ (ಅವರು ಕಂಡಕ್ಟರ್ ಕೂಡ) ಬ್ಯಾಡ್ಜ್ ಸಂಖ್ಯೆ ಎಂದು ಬಹಿರಂಗಪಡಿಸಿದ್ದಾರೆ.
ಈ ಸಂದರ್ಭದಲ್ಲಿ, ರಜನಿಕಾಂತ್ ಅವರ ಮೂಲ ಕಂಡಕ್ಟರ್ ಐಡಿ ಕಾರ್ಡ್ ಹೊರಬಂದಂತೆ ಅಭಿಮಾನಿಗಳು ಅದನ್ನು ಹೆಚ್ಚು ಹೆಚ್ಚು ಹಂಚಿಕೊಳ್ಳುತ್ತಿದ್ದಾರೆ. ಸರಳ ಕಂಡಕ್ಟರ್‌ನಿಂದ ಭಾರತೀಯ ಚಲನಚಿತ್ರ ಜಗತ್ತನ್ನು ಆಳುವ ‘ಸೂಪರ್‌ಸ್ಟಾರ್’ ಆಗಿ ಬೆಳೆದು ನಿಂತಿರುವುದು ನಿಜವಾಗಿಯೂ ಅನೇಕರಿಗೆ ಸ್ಪೂರ್ತಿದಾಯಕವಾಗಿದೆ.
Bangalore [Bangalore],Bangalore,Karnataka
May 27, 2026 10:52 AM IST













