Chess Battle:152ಕ್ಕೂ ಹೆಚ್ಚು ಮಂದಿಯ ಚತುರ ನಡೆಗಳು, 80ರ ಹಿರಿಯರ ಮುಂದೆ ಬೆಚ್ಚಿಬಿದ್ದ ಯುವ ಆಟಗಾರರು! | ಹುಬ್ಬಳ್ಳಿ-ಧಾರವಾಡ ನ್ಯೂಸ್ (Hubballi Dharwad News) | ACTPnews

ಚೆಸ್ ಪಂದ್ಯಾವಳಿ


Last Updated:

ಧಾರವಾಡದ ಕಾಸ್ಮಸ್ ಕ್ಲಬ್ ಅಂಗಳದಲ್ಲಿ ಅಭಿಜಿತ್ ಬೆಂಗೇರಿ ಫೌಂಡೇಶನ್ ಜೊತೆ ಬೃಹತ್ ಮುಕ್ತ ರಾಪಿಡ್ ಚೆಸ್ ಟೂರ್ನಮೆಂಟ್, 152ಕ್ಕೂ ಹೆಚ್ಚು ಆಟಗಾರರು, 70-80ರ ಹಿರಿಯರ ಪ್ರದರ್ಶನ ಗಮನಸೆಳೆದಿತು.

ಚೆಸ್ ಪಂದ್ಯಾವಳಿ
ಚೆಸ್ ಪಂದ್ಯಾವಳಿ

ಧಾರವಾಡದ (Dharwad) ಕೋರ್ಟ್ ಸರ್ಕಲ್ ಸಮೀಪವಿರುವ ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಸ್ಮಸ್ ಕ್ಲಬ್ (Cosmos Club) ಅಂಗಳದಲ್ಲಿ ಈ ಬಾರಿ ಚೆಸ್ (Chess) ಕಾಯಿಗಳ ಸದ್ದು ಜೋರಾಗಿತ್ತು. ಕಾಸ್ಮಸ್ ಕ್ಲಬ್ ಹಾಗೂ ಅಭಿಜಿತ್ ಬೆಂಗೇರಿ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ್ದ ಈ ಬೃಹತ್ ಮುಕ್ತ ರಾಪಿಡ್ ಚೆಸ್ ಪಂದ್ಯಾವಳಿ (Tournament), ಕ್ರೀಡಾಪ್ರೇಮಿಗಳಲ್ಲಿ ಹೊಸ ಸಂಚಲನ ಮೂಡಿಸಿದೆ.

ಏನಿದು ಚೆಸ್ ಕದನ?

ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ 152ಕ್ಕೂ ಹೆಚ್ಚು ಪ್ರತಿಭಾನ್ವಿತ ಆಟಗಾರರು ತಮ್ಮ ಚತುರ ನಡೆಗಳ ಮೂಲಕ ಎದುರಾಳಿಗಳಿಗೆ ಕಠಿಣ ಸವಾಲೊಡ್ಡಿದರು. ಇದು ಕೇವಲ ಒಂದು ಆಟವಾಗಿರಲಿಲ್ಲ, ಬದಲಿಗೆ ಬುದ್ಧಿಶಕ್ತಿಯನ್ನು ಪಣಕ್ಕಿಟ್ಟು ನಡೆಸಿದ ಮಹಾಸಂಗ್ರಾಮವಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕ್ಲಬ್‍ನ ಅಧ್ಯಕ್ಷ ನಿತಿನ್ ಟಗರಪುರ ಅವರು, ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಮತ್ತು ಯುವ ಪೀಳಿಗೆಯಲ್ಲಿ ಕ್ರೀಡಾ ಸಂಸ್ಕøತಿಯನ್ನು ಬೆಳೆಸುವುದು ನಮ್ಮ ಕ್ಲಬ್‍ನ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಟೂರ್ನಿಯ ಹೈಲೈಟ್ಸ್

ಈ ಪಂದ್ಯಾವಳಿಯ ನಿಜವಾದ ಆಕರ್ಷಣೆಯಾಗಿದ್ದು 70 ರಿಂದ 80 ವರ್ಷ ವಯಸ್ಸಿನ ಹಿರಿಯ ಕ್ರೀಡಾಪಟುಗಳು. ಯುವಕರಷ್ಟೇ ಹುಮ್ಮಸ್ಸಿನಿಂದ ಕಣಕ್ಕಿಳಿದಿದ್ದ ಈ ಹಿರಿಯರು, ತಮ್ಮ ಅನುಭವದ ನಡೆಗಳಿಂದ ಯುವ ಆಟಗಾರರನ್ನು ಹೈರಾಣಾಗಿಸಿದ್ದು ನೋಡುಗರಿಗೆ ಅಚ್ಚರಿ ಮತ್ತು ಖುಷಿ ತಂದಿತು. ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂಬುದನ್ನು ಈ ಹಿರಿಯರು ತಮ್ಮ ಆಟದ ಮೂಲಕ ಸಾಬೀತುಪಡಿಸಿದರು.

ಕರ್ನಾಟಕ ರಾಜ್ಯ ಮತ್ತು ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್ ಮಾನ್ಯತೆಯಡಿ ನಡೆದ ಈ ಕ್ರೀಡಾಕೂಟದ ಯಶಸ್ವಿ ನಿರ್ವಹಣೆಗೆ ಡಿಡಿಪಿಐ ಮತ್ತು ಸ್ಥಳೀಯ ಚೆಸ್ ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಿದವು. ಕ್ಲಬ್‍ನ ಪದಾಧಿಕಾರಿಗಳಾದ ಅಶೋಕ ಹಿರೇಮಠ, ಅಭಿಜಿತ್ ಬೆಂಗೇರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಆಟಗಾರರನ್ನು ಹುರಿದುಂಬಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed