Last Updated:
ರಾಜ್ ಬಿ ಶೆಟ್ರು ಹಿಂದಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಇವರ ರೋಲ್ ಏನು ಅನ್ನುವ ಕುತೂಹಲವು ಇದೆ. ಚಿತ್ರದ ಟ್ರೈಲರ್ ಅಲ್ಲಿ ಈ ಪಾತ್ರದ ಒಂದೇ ಒಂದು ಝಲಕ್ ಬಂದು ಹೋಗುತ್ತದೆ. ಆದರೂ ಅದರ ಎಫೆಕ್ಟ್ ಸಖತ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ.
ರಾಜ್ ಬಿ ಶೆಟ್ಟಿ (Raj B Shetty) ನಿಜಕ್ಕೂ ಅದ್ಭುತ ಕಲಾವಿದ ನೋಡಿ. ಇದನ್ನ ಬಾಲಿವುಡ್‌ನ ‘ಬಂದರ್’ ಚಿತ್ರದ (Bandar Movie) ಟ್ರೈರಲ್ ಹೇಳುತ್ತದೆ. ಈ ಟ್ರೈಲರ್ ಅಲ್ಲಿ ರಾಜ್ ಬಿ ಶೆಟ್ಟಿ (Raj B Shetty) ಒಂದೆರೆಡು ಸೆಕೆಂಡ್ ಕಾಣಿಸುತ್ತಾರೆ. ಜೈಲಿನಲ್ಲಿರೋ ಸಾಕಷ್ಟು ಜನರ ನಡುವೆ ಹಾಗೆ ಬಂದು ಹೀಗೆ ಹೋಗ್ತಾರೆ ಅಷ್ಟೆ. ಆದರೆ, ಅಷ್ಟರಲ್ಲಿಯೇ ರಾಜ್ ಬಿ ಶೆಟ್ಟಿ ಇದ್ದಾರೆ ಅನ್ನೋದು ಗೊತ್ತಾಗುತ್ತದೆ. ಅಂತಹ ಒಂದು ಎಕ್ಸಪ್ರೆಷನ್ ಇಲ್ಲಿದೆ. ಹಾಗೆ ಈ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ಅನುರಾಗ್ ಕಶ್ಯಪ್ ಈ ಚಿತ್ರವನ್ನ ನೈಜ ಘಟನೆಗಳ (True Event Inspiration) ಸ್ಪೂರ್ತಿಯಿಂದಲೇ ಮಾಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಡೈರೆಕ್ಟರ್ ಅನುರಾಗ್ ಕಶ್ಯಪ್ ಮತ್ತೊಂದು ವಿಶೇಷ ಕಂಟೆಂಟ್ ಇರೋ ಚಿತ್ರ ಮಾಡಿದ್ದಾರೆ. ಇದಕ್ಕೆ ಬಂದರ್ ಅಂತ ಹೆಸರಿಟ್ಟಿದ್ದಾರೆ. ಇದು ನಿಜಕ್ಕೂ ಇಂಟ್ರಸ್ಟಿಂಗ್ ಕಥೆಯುಳ್ಳ ಚಿತ್ರವೇ ಆಗಿದೆ.
ಇಲ್ಲಿ ಬಂದರ್ ಯಾರು?
ನೈಜ ಘಟನೆಗಳ ಸ್ಪೂರ್ತಿಯಿಂದಲೇ ಈ ಚಿತ್ರ ಮಾಡಿದ್ದಾರೆ. ಸಮೀರ್ ಮೆಹರಾ ಅನ್ನೋ ಪಾತ್ರವನ್ನ ಬಾಬಿ ಡಿಯೋಲ್ ಇಲ್ಲಿ ಮಾಡಿದ್ದಾರೆ. ಆದರೆ, ಈ ಪಾತ್ರಕ್ಕೆ ರಸಿಕತೆ ಜಾಸ್ತಿ ಇದೆ. ಇದೇ ಇಲ್ಲಿ ಯಡವಟ್ಟು ಮಾಡುತ್ತದೆ. ಇದರಿಂದಲೇ ಸಮೀರ್ ಮೆಹರಾ ಜೈಲಿಗೆ ಹೋಗ್ತಾರೆ.
ಆದರೆ, ರಾಜ್ ಬಿ ಶೆಟ್ಟಿ ಅವರ ಪಾತ್ರದ ಪರಿಚಯ ಈ ಒಂದು ಟ್ರೈಲರ್ ಅಲ್ಲಿಯೇ ಆಗುತ್ತದೆ. ಆದರೆ, ಹೆಚ್ಚಿಗೆ ಸೀನ್‌ಗಳನ್ನೇನು ಇಲ್ಲಿ ಬಳಕೆ ಮಾಡಿಲ್ಲ. ಒಂದೇ ಒಂದು ಸೀನ್ ಬರುತ್ತದೆ ನೋಡಿ.
ರಾಜ್ ಬಿ ಶೆಟ್ಟಿ ಇಲ್ಲಿ ಕೈದಿಯ ಪಾತ್ರ ಮಾಡಿದ್ದಾರೆ. ಹಾಗಂತ ಜೈಲು ಡ್ರೆಸ್ ಅಲ್ಲಿ ಏನೂ ಕಾಣಿಸೋದಿಲ್ಲ. ಸರಳ ಉಡುಪಿನಲ್ಲಿಯೇ ಕಾಣಿಸುತ್ತಾರೆ. ಕಾಮನ್ ಮ್ಯಾನ್ ತರವೂ ಇದ್ದಾರೆ.
ಜೂನ್-5 ರಂದು ರಿಲೀಸ್
ಆದರೆ, ಅದ್ಯಾಕೋ ಏನೋ ಮನಸ್ಸು ಬಿಚ್ಚಿ ನಗ್ತಾರೆ. ಆ ಒಂದು ದೃಶ್ಯ ಇಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಇಡೀ ಸೆಲ್ ಅಲ್ಲಿ ಸಾಕಷ್ಟು ಕೈದಿಗಳು ಇರ್ತಾರೆ. ಆದರೆ, ರಾಜ್ ಬಿ ಶೆಟ್ಟಿ ಇಲ್ಲಿ ಗಮನ ಸೆಳೆಯುತ್ತಾರೆ.
ರಾಜ್ ಬಿ ಶೆಟ್ಟಿ ಅಭಿನಯದ ಈ ಚಿತ್ರ ಮುಂದಿನ ತಿಂಗಳು ರಿಲೀಸ್ ಆಗುತ್ತಿದೆ. ಜೂನ್-5 ರಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಇದನ್ನ ಅಧಿಕೃತವಾಗಿಯೇ ಸಿನಿಮಾ ತಂಡ ಹೇಳಿಕೊಂಡಿದೆ. ಚಿತ್ರದ ಟ್ರೈಲರ್ ಜೊತೆಗೆ ಈ ಮಾಹಿತಿನೂ ಇದೆ.
ಅಂದ್ಹಾಗೆ ಈ ಚಿತ್ರದಲ್ಲಿ ಒಂದು ಡೈಲಾಗ್ ಇದೆ. ಇದು ಅಷ್ಟೆ ಅರ್ಥ ಪೂರ್ಣವಾಗಿದೆ. ಇಡೀ ಕಥೆಯ ಚಿತ್ರಣವನ್ನ ಕಟ್ಟಿಕೊಡುತ್ತದೆ. “ನಮ್ಮ ಸರ್ಕಸ್ ಅಲ್ಲಿ ನಾವೇ ಮಂಗಳು” ಅನ್ನುವ ಅರ್ಥವನ್ನ ಇದು ಕೊಡುತ್ತದೆ. ಇದನ್ನ ನಾಯಕ ನಟ ಬಾಬ ಡಿಯೋಲ್ ಇಲ್ಲಿ ಹೇಳುತ್ತಾರೆ. ಹಾಗೆ ಇದು ಟ್ರೈಲರ್ ಕೊನೆಯಲ್ಲಿ ಬರುತ್ತದೆ ಅಂತ ಹೇಳಬಹುದು.
Bangalore [Bangalore],Bangalore,Karnataka













